Connect with us

Hi, what are you looking for?

ಪ್ರಮುಖ ಸುದ್ದಿ

ರಹಸ್ಯವಾಗಿ ಮದುವೆ ಮಾಡಿಕೊಂಡ ಪ್ರಭುದೇವ ?

ಚೆನ್ನೈ : ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ ಸೆಪ್ಟೆಂಬರ್‌ನಲ್ಲಿ ಬಿಹಾರ ಮೂಲದ ಫಿಸಿಯೋಥೆರಪಿಸ್ಟ್ ನೊಂದಿಗೆ ರಹಸ್ಯವಾಗಿ ಮುಂಬೈನ ಅವರ ನಿವಾಸದಲ್ಲಿ

ಮರುಮದುವೆಯಾಗಿದ್ದಾರೆಂದು ಹೇಳಲಾಗುತ್ತಿದೆ.

ಪ್ರಭುದೇವ ಅವರ ಆಪ್ತರೊಬ್ಬರು ಇದನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಭುದೇವ ಮಾತ್ರ ಯಾವುದೇ ಸ್ಪಷ್ಟತೆ ನೀಡಿಲ್ಲ.

ಈ ಹಿಂದೆ ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಭುದೇವ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಮಯದಲ್ಲಿಯೇ ಪ್ರಭುದೇವ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಪ್ರೀತಿಸುತ್ತಿದ್ದರು. ನಂತರ ಇವರಿಬ್ಬರು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಪ್ರಭುದೇವ ಅವರು ಎರಡನೇ ವಿವಾಹದ ವದಂತಿಗಳು ಕಾಲಿವುಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿವೆ.

1995 ರಲ್ಲಿ ಮೊದಲಿಗೆ ರಾಮಲತಾಳನ್ನು ಮದುವೆಯಾದ ಪ್ರಭುದೇವ 2011 ರಲ್ಲಿ ವಿವಾಹ ವಿಚ್ಚೇದನ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳೂ ಸಹಾ ಇದ್ದಾರೆ. ಅದರ ನಂತರ ಖ್ಯಾತ ನಾಯಕಿ ನಯನತಾರಾಳನ್ನು ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ.

ನಯನತಾರಾ ಕೂಡ ಈ ಮೊದಲು ಶಿಂಬು ನಂತರ ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದರು. ಪ್ರಸ್ತುತ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಸ್ನೇಹ ಹೊಂದಿದ್ದಾರೆ.

ಪ್ರಭುದೇವ ಸದ್ಯ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಚಳಿಗಾಲ ಆರಂಬವಾಗಿರುವ ಹಿನ್ನೆಲೆ ಇದು ಇನ್ನೂ ವಿಪರೀತವಾಗಲಿದೆ. ಹೀಗಾಗಿ ಸೋನಿಯಾಗಾಂಧಿ ಅವರನ್ನು ಕೆಲ ದಿನಗಳ ಕಾಲ ಇತರೆ ನಗರಗಳಿಗೆ ಸ್ಥಳಾಂತರಿಸುವಂತೆ ವೈದ್ಯರು...

ಪ್ರಮುಖ ಸುದ್ದಿ

ಪ್ರತಾಪ ಗಡ್(ಉ.ಪ್ರ) : ಜಿಲ್ಲೆಯ ಹೆದ್ದಾರಿ ರಸ್ತೆಯಲ್ಲಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಮಕ್ಕಳು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ...

ಪ್ರಮುಖ ಸುದ್ದಿ

ಚೆನ್ನೈ: ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಇದ್ದ ಕಾರು ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಮೆಲ್ಮರುವಾತ್ತೂರ್ ಬಳಿ ಈ ಘಟನೆ ನಡೆದಿದೆ. ಖುಷ್ಬೂ ಅವರಿದ್ದ ಕಾರಿಗೆ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಮದುವೆ ದಿಬ್ಬಣದ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಸ್ವಲ್ಪದರಲ್ಲೇ ಬಾರಿ ದುರಂತ ತಪ್ಪಿದೆ. ಕೆಎಸ್ ಆರ್‌ಟಿಸಿ ಬಸ್‌ ನಲ್ಲಿ ಮದುವೆ ದಿಬ್ಬಣ ಕಲ್ಯಾಣದುರ್ಗ ಮಾರ್ಗವಾಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ....

ಪ್ರಮುಖ ಸುದ್ದಿ

ತಮಿಳುನಾಡು : ಇತ್ತೀಚೆಗೆ ಪ್ರೇಮ ವಿವಾಹ ಅನ್ನೋದು ಕಾಮನ್ ಆಗಿದೆ. ಪೋಷಕರು ಕೂಡ ಪ್ರೇಮ ವಿವಾಹಕ್ಕೆ ಸುಲಭದಲ್ಲೇ ಒಪ್ಪಿಗೆ ನೀಡುತ್ತಾರೆ. ಹೀಗಿರುವಾಗ ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳದೆ, ಮದುವೆ ಮಂಟಪದವರೆಗೂ ಬಂದು ತಾಳಿ...

ಪ್ರಮುಖ ಸುದ್ದಿ

ಅಲಹಾಬಾದ್: ಕೇವಲ ವಿವಾಹದ ಉದ್ದೇಶಕ್ಕಾಗಿ ಧರ್ಮವನ್ನು ಬದಲಾಯಿಸಲು ಬಯಸುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಅಂತರ್ ಧರ್ಮೀಯ ವಿವಾಹ ಮಾಡಿಕೊಂಡ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು...

ಪ್ರಮುಖ ಸುದ್ದಿ

ಚೆನ್ನೈ : ರಜನಿಕಾಂತ್ ಅವರ ರಾಜಕೀಯ ಪ್ರವೇಶ ಮೊದಲಿನಿಂದಲೂ ಗೊಂದಲದಲ್ಲಿದೆ. ರಜನಿಕಾಂತ್ ಅವರು ಗುರುವಾರ ಮಾಡಿದ ಟ್ವೀಟ್ ನ ನಂತರ ಮತ್ತಷ್ಟು ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ದೇಶದ ವಿವಿಧ ಭಾಗಗಳಿಂದ...

ಪ್ರಮುಖ ಸುದ್ದಿ

ಚೆನ್ನೈ: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿರುಧುನಗರ ಜಿಲ್ಲೆಯ ಗಡಿಯಲ್ಲಿರುವ ಮುರುಗನೇರಿ ಪ್ರದೇಶದ ಪಟಾಕಿ...

ಪ್ರಮುಖ ಸುದ್ದಿ

ಚೆನ್ನೈ : ಇದು ಕಾಲಿವುಡ್ ಚಿತ್ರದ ಕಥೆಯಲ್ಲ ಬದಲಾಗಿ ತಮಿಳುನಾಡಿನಲ್ಲಿ ನಡೆದ ಘಟನೆ. ರಾಜಕಾರಣಿ ಶಾಸಕ, ಬಿಎ ವಿದ್ಯಾರ್ಥಿನಿ ಇವರಿಬ್ಬರ ಪ್ರೀತಿ ಪ್ರೇಮ, ಜಾತಿ ಭೇದ, ವಿದ್ಯಾರ್ಥಿನಿ ತಂದೆಯ ವಿರೋಧ ಮತ್ತು ಆತ್ಮಹತ್ಯೆ...

error: Content is protected !!