Connect with us

Hi, what are you looking for?

ಪ್ರಮುಖ ಸುದ್ದಿ

ಭಾರ್ತಿ ಸಿಂಗ್ ನಿವಾಸದ ಮೇಲೆ NCB ದಾಳಿ

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ನಡೆಸಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್ನ ಡ್ರಗ್ಸ್ ಕರ್ಮಕಾಂಡ ಹೊರಬಿದ್ದಿದ್ದು, ಎನ್ಸಿಬಿಯು ಈ ವರೆಗೆ ಹಲವರನ್ನು ಬಂಧಿಸಿದ್ದು, ಖ್ಯಾತ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದೆ . ಇದೀಗ ಹಿಂದಿಯ ಜನಪ್ರಿಯ ಕಾಮಿಡಿಯನ್ ಭಾರ್ತಿ ಸಿಂಗ್ ನಿವಾಸದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ ಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಂಬೈಯಲ್ಲಿರುವ ಕಾಮಿಡಿಯನ್ ಭಾರ್ತಿ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಭಾರತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ್ ಲಿಂಬಾಚಿಯಾ ಮಾದಕ ವಸ್ತು ಸೇವಿಸುತ್ತಾರೆ ಹಾಗೂ ಮನೆಯಲ್ಲಿ ಮಾದಕ ವಸ್ತು ಶೇಖರಿಸಿಟ್ಟಿದ್ದಾರೆ ಎಂಬ ಅನುಮಾನದ ಮೇಲೆ ಎನ್ಸಿಬಿ ಅಧಿಕಾರಿಗಳು ಭಾರತಿ ಸಿಂಗ್-ಹರ್ಷ್ ಮನೆಯ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿದ್ದರು. ಶೋಧದ ಫಲಿತಾಂಶದ ಬಗ್ಗೆ ಅಧಿಕಾರಿಗಳು ಇನ್ನಷ್ಟೆ ಮಾಹಿತಿ ನೀಡಬೇಕಿದೆ. ಭಾರತಿ ಸಿಂಗ್ ಕನ್ನಡದ ‘ರಂಗನ್ ಸ್ಟೈಲ್’ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಈ ತಿಂಗಳ ಆರಂಭದಲ್ಲಿ ನಟ ಅರ್ಜುನ್ ರಾಂಪಾಲ್ ನಿವಾಸದ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿತ್ತು. ನಂತರ ಅವರನ್ನು ಮತ್ತು ಅವರ ಸ್ನೇಹಿತೆ ಗೇಬ್ರಿಯಲ್ ಡೆಮೆಟ್ರಿಯಾಡ್ಸ್ ಅವರನ್ನು ವಿಚಾರಣೆಗೆ ಕರೆದಿತ್ತು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ. ದೆಹಲಿ ಮೂಲದ ಹದಿಮೂರು ಅಧಿಕಾರಿಗಳ ತಂಡ ದಾಳಿ...

ಪ್ರಮುಖ ಸುದ್ದಿ

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ನಿವಾಸದ ಮೇಲೆ ಎನ್ಸಿಬಿ ಅಧಿಕಾರಿಗಳು ನಡೆಸಿದ್ದರು ದಾಳಿ ವೇಳೆ ಭಾರತಿ ನಿವಾಸದಲ್ಲಿ ಕಡಿಮೆ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಎನ್ಸಿಬಿ ಅಧಿಕಾರಿಗಳು ಹರ್ಷನನ್ನು...

ಪ್ರಮುಖ ಸುದ್ದಿ

ಮುಂಬೈ: ಬಿಗ್ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ...

ಪ್ರಮುಖ ಸುದ್ದಿ

ಹೆಲ್ಮೆಟ್ ಹಾಕದೆ ಬೈಕ್ ಓಡಿಸುವಾಗ ಸಿಕ್ಕಿಬಿದ್ದರೆ ಪೊಲೀಸರು ದಂಡ ಹಾಕುತ್ತಾರೆ. ಆದ್ರೆ ನಟಿ ತಾಪ್ಸಿ ಪೊನ್ನು ಫೋಟೋ ಹಂಚಿಕೊಂಡಿದ್ದಕ್ಕೆ ದಂಡ ಕಟ್ಟಿದ್ದಾರೆ. https://www.instagram.com/p/CHuQo-npSyT/?utm_source=ig_web_copy_link ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ...

ಪ್ರಮುಖ ಸುದ್ದಿ

ಮುಂಬೈ: ಕೊರೊನಾ ವೈರಸ್ ಇರುವ ಕಾರಣ ವಿದೇಶದಿಂದ ಬಂದವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಳಜಿವಹಿಸಲಾಗುತ್ತದೆ. ಹೀಗಾಗಿ ಜೂಹಿ ಚಾವ್ಲಾ ಮ್ಯಾಚ್ ಮುಗಿಸಿಕೊಂಡು ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗಲೂ ತಪಾಸಣೆ ವಿಚಾರಕ್ಕೆ...

ಪ್ರಮುಖ ಸುದ್ದಿ

ಮುಂಬೈ : ಪ್ರಮುಖ ಮೊಬೈಲ್ ಗೇಮ್ ಪಬ್ಜಿ ಬಳಕೆದಾರರಿಗೊಂದು ಶುಭ ಸುದ್ದಿ. ಭಾರತೀಯ ಗ್ರಾಹಕರಿಗೆ ಹೊಸ ರೂಪದಲ್ಲಿ ಈ ಆಟವು ಮತ್ತೆ ಲಭ್ಯವಾಗಲಿದೆ. ಪಬ್ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಭಾರತದ ಬಳಕೆದಾರರಿಗಾಗಿ ವಿಶೇಷವಾಗಿ...

ಪ್ರಮುಖ ಸುದ್ದಿ

ಮುಂಬಯಿ : ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ನ ಆರು ಆಸ್ತಿಗಳನ್ನು ಅಧಿಕಾರಿಗಳು ಮಂಗಳವಾರ ಹರಾಜು ಹಾಕಿದ್ದಾರೆ. ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ ಕಾಯ್ದೆ (ಸೇಫ್) ಅಡಿಯಲ್ಲಿ ಆರು ಆಸ್ತಿಗಳಿಗೆ ಇಂದು...

ಪ್ರಮುಖ ಸುದ್ದಿ

ಮುಂಬಯಿ : ದೀಪಿಕಾ ಪಡುಕೋಣೆ ಈಗ ಶಾಂತಿಪ್ರಿಯರಾಗಿದ್ದಾರೆ. ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲು ಶಾಂತಿಪ್ರಿಯ ಅಂತ ಹೆಸರು ಬದಲಾಯಿಸಿಕೊಂಡಿದ್ದಾರೆ. ಅದಕ್ಕೆ ಕಾರಣವೊಂದಿದೆ. ಅವರು ಬಾಲಿವುಡ್ ಅಂಗಳಕ್ಕೆ ಪ್ರವೇಶಿಸಿ ಇಂದಿಗೆ 13 ವರ್ಷಗಳು ಕಳೆದಿವೆ....

ಪ್ರಮುಖ ಸುದ್ದಿ

ಚಾಮರಾಜನಗರ: ಕಾಡಾನೆ ದಾಳಿಗೆ ವೃದ್ಧ ಜೀವತೆತ್ತ ಘಟನೆ ಬಿಳಿಗಿರಿ ರಂಗನಾಥ ಮೀಸಲು ಅರಣ್ಯದ ವ್ಯಾಪ್ತಿಯ ಹಂಗಲವಾಡಿ ಗ್ರಾಮದಲ್ಲಿ ನಡೆದಿದೆ. ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಗುರುಸ್ವಾಮಿ (61) ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಗುರುವಾರ...

error: Content is protected !!