Connect with us

Hi, what are you looking for?

ಪ್ರಮುಖ ಸುದ್ದಿ

ಕೊರೊನಾ ಲಸಿಕೆ ವಿತರಣೆಗೆ ಮೆಗಾ ಪ್ಲಾನ್ ಮಾಡಿದ ದೇಶ ಸೇವಕ !

ನವದೆಹಲಿ : ಮನುಕುಲಕ್ಕೆ ಹೆಮ್ಮಾರಿಯಾಗಿರುವ ಕೊರೊ‌ನಾಗೆ ಲಸಿಕೆ ಸಿಗುವ ದಿನಗಳು ಸನಿಹವಾಗುತ್ತಿವೆ. ಈ ಹೊತ್ತಲ್ಲಿ ಲಸಿಕೆ ವಿತರಣೆಗೆ ಮೋದಿ ಮೆಗಾ ಫ್ಲ್ಯಾನ್ ಹಾಕಿಕೊಂಡಿದ್ದಾರೆ‌

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಿರುವ ಕಂಪನಿಗಳ ಜೊತೆ ಮೋದಿ ಸಮಾಲೋಚನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಅಡ್ವಾನ್ಸ್ ಆಗಿ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಒಪ್ಪಂದದ ಬೆನ್ನಲ್ಲೇ ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆದಿದೆ. ಲಸಿಕೆ ಅಭಿವೃದ್ಧಿ, ಡಿಸಿಜಿಐನಿಂದ ಲಸಿಕೆಗೆ ತುರ್ತು ಅನುಮೋದನೆ, ಲಸಿಕೆ ವಿತರಣೆಗೆ ಸಂಬಂಧ ಚರ್ಚೆ ನಡೆಸಿದ್ದಾರೆ.

ಜನವರಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಏಪ್ರಿಲ್ ಒಳಗೆ ಜನಸಾಮಾನ್ಯರಿಗೆ ವ್ಯಾಕ್ಸಿನ್ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳಬೇಕು. ದೇಶದ ಮೂಲೆ ಮೂಲೆಗೂ ವ್ಯಾಕ್ಸಿನ್ ಸಾಗಣೆ, ಸಂಗ್ರಹಕ್ಕೆ ಅಗತ್ಯವಿರುವ ಶೈತ್ಯಾಗಾರಗಳ ವ್ಯವಸ್ಥೆ ಬಗ್ಗೆ ಸೂಚಿಸಿದ್ದಾರೆ. ಕೊರೊನಾ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ 900 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಿರಿಸಿದೆ.

ದೇಶದ 28 ಸಾವಿರ ಸ್ಥಳಗಳಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಲಸಿಕೆ ಹಂಚಿಕೆಗೆ ಶೀಘ್ರ ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ಕೋವಿನ್ ಆ್ಯಪ್ ಅಭಿವೃದ್ಧಿ: ಲಸಿಕೆ ವಿತರಣೆಗೆ ಕೋವಿನ್ ಆ್ಯಪ್ ಅಭಿವೃದ್ಧಿ ಮಾಡಲಾಗುತ್ತದೆ. ಲಸಿಕೆಯ ಖರೀದಿ, ವಿತರಣೆ, ಸಂಗ್ರಹಣೆ, ಡೋಸ್, ವೇಳಾಪಟ್ಟಿಗಳ ಮಾಹಿತಿ ನಿರ್ವಹಣೆ ಇದರಲ್ಲಿ ಇದೆ. ಆದ್ಯತೆ ಮೇರೆಗೆ ಯಾರಿಗೆ, ಯಾವಾಗ, ಯಾರಿಂದ ಲಸಿಕೆ ಎಂಬ ಮಾಹಿತಿ ಈ ಆ್ಯಪ್‍ನಲ್ಲಿ ಲಭ್ಯ ಇರಲಿದೆ.

ಲಸಿಕೆ ಪಡೆಯುವವರು ತಮ್ಮ ಮೊಬೈಲ್‍ನಲ್ಲಿ ಕೋವಿನ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಎರಡು ಡೋಸ್ ಲಸಿಕೆ ಪಡೆದುಕೊಂಡವರಿಗೆ ಆ್ಯಪ್ ಮೂಲಕವೇ ಲಸಿಕೆ ಪ್ರಮಾಣಪತ್ರ . `ಕೊರೊನಾ ಲಸಿಕೆ ಪ್ರಮಾಣಪತ್ರ’ವನ್ನು ಲಸಿಕೆ ಪಡೆದವರು ಡಿಜಿ ಲಾಕರ್‌ನಲ್ಲಿ ಇಟ್ಟುಕೊಳ್ಳಬಹುದು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾ ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ವೈರಸ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಲಿಯಾಗಿದೆ. ಕೊರೊನಾ ವೈರಸ್ ಗೆ ತುತ್ತಾಗಿದ್ದ ಸಿಬ್ಬಂದಿ...

ಪ್ರಮುಖ ಸುದ್ದಿ

ಜೋಹಾನ್ಸಬರ್ಗ್ :ಯಾರು ಮುಖ್ಯರಲ್ಲ…ಯಾರು ಅಮುಖ್ಯರಲ್ಲ ಎಂಬಂತೆ ಕೊರೊನಾ ಮಹಾಮಾರಿ ಬಲಿ ತೆಗೆದುಕೊಳ್ಳುತ್ತಲೇ ಇದೆ. ಈ ಸಾವಿನ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ. ಸೌಥ್ ಆಫ್ರಿಕಾದಲ್ಲಿ ನೆಲೆಸಿರುವ ಸತೀಶ್...

ಪ್ರಮುಖ ಸುದ್ದಿ

ಮೈಸೂರು:ಮೈಸೂರಿನಲ್ಲಿಂದು ಭಾನುವಾರ 100 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 50,023 ಕ್ಕೇರಿದೆ. ಇಂದು 107 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ...

ಪ್ರಮುಖ ಸುದ್ದಿ

ನವದೆಹಲಿ :ಜನಪ್ರತಿನಿಧಿಗಳೇ ಕೊಂಚ ಬಿಡುವು ಮಾಡಿಕೊಂಡು ಈ ಸುದ್ದಿ ಓದಿ..ಇದು ನಿಮ್ಮ ಆರೋಗ್ಯದ ವಿಷಯ. ನಿರ್ಲಕ್ಷಿಸಿದರೆ ಅಪಾಯ ಖಚಿತ. ರಾಜಕಾರಣಿಗಳಿಗೆ ನಿತ್ಯ ನೂರಾರೂ ಪತ್ರಗಳು ಬರುತ್ತವೆ. ಇವುಗಳನ್ನು ಒಮ್ಮೆಯಾದರು ನೋಡುತ್ತೀರಾ. ಈ ಪತ್ರಗಳೇ...

ಪ್ರಮುಖ ಸುದ್ದಿ

ಚಿತ್ರದುರ್ಗ:ಜಿಲ್ಲೆಯಲ್ಲಿ ಭಾನುವಾರ 21 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 13,302ಕ್ಕೆ ಏರಿಕೆಯಾಗಿದೆ. ಭಾನುವಾರ ಒಟ್ಟು 2136 ಜನರ ಗಂಟಲು, ಮೂಗು ದ್ರವ ಮಾದರಿ ಸಂಗ್ರಹಿಸಲಾಗಿದೆ. ವರದಿಯಲ್ಲಿ 21 ಜನರಿಗೆ...

ಪ್ರಮುಖ ಸುದ್ದಿ

ಬೆಂಗಳೂರು :ಸರ್ಕಾರ ರಚನೆಗೆ ನೆರವಾದವರಿಗೆ ಅನ್ಯಾಯ ಮಾಡಬೇಡಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ದೆಹಲಿಯಿಂದ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಶನಿವಾರ 35 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 13,281ಕ್ಕೆ ಏರಿಕೆಯಾಗಿದೆ.  ಶನಿವಾರ ಒಟ್ಟು 2,438 ಜನರ ಗಂಟಲು, ಮೂಗು ದ್ರವ ಮಾದರಿ ಸಂಗ್ರಹಿಸಲಾಗಿದೆ. ವರದಿಯಲ್ಲಿ...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 1781 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 869561 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ....

error: Content is protected !!