Connect with us

Hi, what are you looking for?

ಪ್ರಮುಖ ಸುದ್ದಿ

ಕೇಂದ್ರ ಕಾರ್ಮಿಕ ಸಚಿವರ ಕುಟುಂಬಕ್ಕೆ ಕರೋನಾ ಶಾಕ್ ! ಕುಟುಂಬದ ಏಳು ಮಂದಿಗೆ ಸೋಂಕು ದೃಢ

ನವದೆಹಲಿ: ಕರೋನಾ ವೈರಸ್ ಮಹಾಮಾರಿ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ (71) ಅವರ ಕುಟುಂಬದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಸಚಿವರ ಪತ್ನಿ ಸೇರಿದಂತೆ ಅವರ ಕುಟುಂಬದ ಒಟ್ಟು ಆರು ಮಂದಿಗೆ ಅಕ್ಟೋಬರ್ 31 ರ ಶನಿವಾರ ಕೋವಿಡ್ -19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಸ್ವತಃ ಸಚಿವರೇ ಈ ವಿಷಯವನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಬರೇಲಿ ಕ್ಷೇತ್ರದ ಸಂಸತ್ ಸದಸ್ಯ ಸಂತೋಷ ಗಂಗ್ವಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಕರೋನ ನಿರ್ಧಾರಣ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು ನೆಗೆಟಿವ್ ವರದಿ ಬಂದಿದೆ. ಆದರೆ ನಮ್ಮ ಕುಟುಂಬದ ಇತರ ಏಳು ಮಂದಿಗೆ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು
ತಿಳಿಸಿದ್ದಾರೆ.

ನಮ್ಮ ಕುಟುಂಬ ಸದಸ್ಯರು ಇತ್ತೀಚೆಗೆ ದೆಹಲಿಗೆ ತೆರಳಿದ್ದು, ಅಲ್ಲಿ ಅವರಿಗೆ ವೈರಸ್ ಸೋಂಕಿರಬಹುದೆಂದು ಭಾವಿಸಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಅವರೆಲ್ಲರೂ ಫರಿದಾಬಾದ್‌ನ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಅವರ ಕುಟುಂಬ ಬಾಣಸಿಗನ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಆತನನ್ನು ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು
ಹೇಳಿದರು. ಅಷ್ಟೇ ಅಲ್ಲದೇ ತಮ್ಮ ಸಚಿವಾಲಯದ ಕೆಲವು ಅಧಿಕಾರಿಗಳು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ, ಅವರೆಲ್ಲರನ್ನು ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಇತ್ತೀಚೆಗೆ ಕರೋನ ವೈರಸ್ ಸೋಂಕು ತಗುಲಿರುವುದು ದೃಢವಾಗಿತ್ತು. ಭಾರತದಲ್ಲಿ ಕರೋನಾ ವೈರಸ್ ಅಬ್ಬರ ಮುಂದುವರೆದಿದೆ. ಒಟ್ಟು ಪ್ರಕರಣಗಳ ಸಂಖ್ಯೆ 81,37,119 ತಲುಪಿದ್ದು, ಒಟ್ಟು ಸಾವುಗಳ ಸಂಖ್ಯೆ 1,21,641 ಆಗಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾ ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ವೈರಸ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಲಿಯಾಗಿದೆ. ಕೊರೊನಾ ವೈರಸ್ ಗೆ ತುತ್ತಾಗಿದ್ದ ಸಿಬ್ಬಂದಿ...

ಪ್ರಮುಖ ಸುದ್ದಿ

ಜೋಹಾನ್ಸಬರ್ಗ್ :ಯಾರು ಮುಖ್ಯರಲ್ಲ…ಯಾರು ಅಮುಖ್ಯರಲ್ಲ ಎಂಬಂತೆ ಕೊರೊನಾ ಮಹಾಮಾರಿ ಬಲಿ ತೆಗೆದುಕೊಳ್ಳುತ್ತಲೇ ಇದೆ. ಈ ಸಾವಿನ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ. ಸೌಥ್ ಆಫ್ರಿಕಾದಲ್ಲಿ ನೆಲೆಸಿರುವ ಸತೀಶ್...

ಪ್ರಮುಖ ಸುದ್ದಿ

ಮೈಸೂರು:ಮೈಸೂರಿನಲ್ಲಿಂದು ಭಾನುವಾರ 100 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 50,023 ಕ್ಕೇರಿದೆ. ಇಂದು 107 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ...

ಪ್ರಮುಖ ಸುದ್ದಿ

ನವದೆಹಲಿ :ಜನಪ್ರತಿನಿಧಿಗಳೇ ಕೊಂಚ ಬಿಡುವು ಮಾಡಿಕೊಂಡು ಈ ಸುದ್ದಿ ಓದಿ..ಇದು ನಿಮ್ಮ ಆರೋಗ್ಯದ ವಿಷಯ. ನಿರ್ಲಕ್ಷಿಸಿದರೆ ಅಪಾಯ ಖಚಿತ. ರಾಜಕಾರಣಿಗಳಿಗೆ ನಿತ್ಯ ನೂರಾರೂ ಪತ್ರಗಳು ಬರುತ್ತವೆ. ಇವುಗಳನ್ನು ಒಮ್ಮೆಯಾದರು ನೋಡುತ್ತೀರಾ. ಈ ಪತ್ರಗಳೇ...

ಪ್ರಮುಖ ಸುದ್ದಿ

ಚಿತ್ರದುರ್ಗ:ಜಿಲ್ಲೆಯಲ್ಲಿ ಭಾನುವಾರ 21 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 13,302ಕ್ಕೆ ಏರಿಕೆಯಾಗಿದೆ. ಭಾನುವಾರ ಒಟ್ಟು 2136 ಜನರ ಗಂಟಲು, ಮೂಗು ದ್ರವ ಮಾದರಿ ಸಂಗ್ರಹಿಸಲಾಗಿದೆ. ವರದಿಯಲ್ಲಿ 21 ಜನರಿಗೆ...

ಪ್ರಮುಖ ಸುದ್ದಿ

ನವದೆಹಲಿ : ಮನುಕುಲಕ್ಕೆ ಹೆಮ್ಮಾರಿಯಾಗಿರುವ ಕೊರೊ‌ನಾಗೆ ಲಸಿಕೆ ಸಿಗುವ ದಿನಗಳು ಸನಿಹವಾಗುತ್ತಿವೆ. ಈ ಹೊತ್ತಲ್ಲಿ ಲಸಿಕೆ ವಿತರಣೆಗೆ ಮೋದಿ ಮೆಗಾ ಫ್ಲ್ಯಾನ್ ಹಾಕಿಕೊಂಡಿದ್ದಾರೆ‌ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಿರುವ ಕಂಪನಿಗಳ ಜೊತೆ...

ಪ್ರಮುಖ ಸುದ್ದಿ

ಬೆಂಗಳೂರು :ಸರ್ಕಾರ ರಚನೆಗೆ ನೆರವಾದವರಿಗೆ ಅನ್ಯಾಯ ಮಾಡಬೇಡಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ದೆಹಲಿಯಿಂದ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಶನಿವಾರ 35 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 13,281ಕ್ಕೆ ಏರಿಕೆಯಾಗಿದೆ.  ಶನಿವಾರ ಒಟ್ಟು 2,438 ಜನರ ಗಂಟಲು, ಮೂಗು ದ್ರವ ಮಾದರಿ ಸಂಗ್ರಹಿಸಲಾಗಿದೆ. ವರದಿಯಲ್ಲಿ...

error: Content is protected !!