Connect with us

Hi, what are you looking for?

ಪ್ರಮುಖ ಸುದ್ದಿ

ಪತ್ರಕರ್ತ ತೇ.ಸಿ.ವಿಶ್ವೇಶ್ವರಯ್ಯ ನಿಧನ

ಮೈಸೂರು : ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ನಿವೃತ್ತರಾಗಿದ್ದ, ಪತ್ರಕರ್ತ ತೇ.ಸಿ.ವಿಶ್ವೇಶ್ವರಯ್ಯ (66) ಶನಿವಾರ ಮುಂಜಾನೆ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ತೇಜೂರು ಗ್ರಾಮದ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಮೈಸೂರು ಗ್ರಾಮಾಂತರ ಕ್ಷೇತ್ರದ ಶಾಲಾ ತನಿಖಾಧಿಕಾರಿಗಳಾಗಿ ನಂತರ ನಗರದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ನಿವೃತ್ತರಾಗಿದ್ದರು.
ಕೆ.ಆರ್.ನಗರದ ಪ್ರಜಾವಾಣಿಯ ಅರೆಕಾಲಿಕ ವರದಿಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕೆ.ಆರ್.ನಗರದ ಬಸವ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಬಯಲು ಬೆಳಗು, ಶಿಕ್ಷಣ ದರ್ಶಿನಿ, ಎಸ್.ನಿಜಲಿಂಗಪ್ಪ ಕುರಿತು ಸೇರಿದಂತೆ ಐದಾರು ಕೃತಿಗಳನ್ನು ರಚಿಸಿದ್ದರು.
ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತೇಜೂರಲ್ಲಿ ಶನಿವಾರ ನಡೆಯಲಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಮೈಸೂರು: ರೋಹಿಣಿ ಸಿಂಧೂರಿಗೆ ಮಹಾರಾಣಿ ರೀತಿ ವರ್ತಿಸಬೇಡಿ ಎಂದು ಹುಣಸೂರು ಶಾಸಕ ಎಚ್ ಪಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಅವರು ಮೈಸೂರು ಅರಮನೆಗೆ ಈಗಾಗಲೇ ರಾಣಿಯರಾಗಿ ಪ್ರಮೋದಾದೇವಿ, ತ್ರಿಶಿಖಾ...

ಪ್ರಮುಖ ಸುದ್ದಿ

ಮೈಸೂರು:ಮೈಸೂರಿನಲ್ಲಿಂದು ಭಾನುವಾರ 100 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 50,023 ಕ್ಕೇರಿದೆ. ಇಂದು 107 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ...

ಪ್ರಮುಖ ಸುದ್ದಿ

ಮೈಸೂರು: ಹತ್ತು ವರ್ಷಗಳ ನಂತರ ಸಾಂಸ್ಕೃತಿಕ ನಗರಿ ಯಿಂದ ಕಡಲ ತೀರಾಕ್ಕೆ ವಾಯುಯಾನ ಶುರುವಾಗಿದೆ. ಸಂಸದ ಪ್ರತಾಪ್ ಸಿಂಹ ಅವರ ಅವಿರತ ಶ್ರಮದಿಂದ ಏರ್ ಇಂಡಿಯಾ ವಿಮಾನ ಮೈಸೂರು-ಮಂಗಳೂರು ಮಧ್ಯೆ ಡಿ.10 ರಿಂದ...

ಪ್ರಮುಖ ಸುದ್ದಿ

ಮೈಸೂರು: ಆಕ್ಷೇಪಾರ್ಹ ವಿಡಿಯೋಗಳಿದ್ದ ಮೊಬೈಲ್ ಫೋನ್ ನ ಎಸ್ ಡಿ ಕಾರ್ಡ್ ಕಳೆದುಕೊಂಡ ಮೈಸೂರಿನ ವೈದ್ಯರೊಬ್ಬರು 30 ಲಕ್ಷ ರೂ.ಕಳೆದು ಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ದಟ್ಟಗಳ್ಳಿ ನಿವಾಸಿ ಡಾ....

ಪ್ರಮುಖ ಸುದ್ದಿ

ಮೈಸೂರು: ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೈಸೂರು ಊಟಿ ಹೆದ್ದಾರಿ ಹಿರಿಕಾಟಿ ಗೇಟ್ ಬಳಿ ತಡರಾತ್ರಿ ಈ ಘಟನೆ ಸಂಭವಿಸಿದೆ. ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದ...

ಪ್ರಮುಖ ಸುದ್ದಿ

ಮೈಸೂರು: ಪೇಟೆ ರೌಡಿ ಎಂಬ ಸುಮಲತಾ ಹೇಳಿಕೆಗೆ ಇಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸುಮಲತಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಅವರ ಹೇಳಿಕೆ ಬಗ್ಗೆ ನನಗ್ಯಾಕೋ ನಂಬಿಕೆ...

ಪ್ರಮುಖ ಸುದ್ದಿ

ಮೈಸೂರು : ಗ್ರಾಮ ಪಂಚಾಯಿತಿ ಚುನಾವಣೆಗೆ ಹಣ ನೀಡುವಂತೆ ಪೀಡಿಸಿದ ಪತಿ ಕೊನೆಗೆ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ದೊಡ್ಡಮುಲಗೂಡು ಗ್ರಾಪಂ ಮಾಜಿ ಸದಸ್ಯ ರಮೇಶ್ ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕು....

ಪ್ರಮುಖ ಸುದ್ದಿ

ಮೈಸೂರು : ಮೈಸೂರಿನಲ್ಲಿ ಶನಿವಾರ 71 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 49,484 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 840 ಆಗಿದ್ದು,...

ಪ್ರಮುಖ ಸುದ್ದಿ

ಮೈಸೂರು: ಹೊರಗಿನಿಂದ ಬಿಜೆಪಿ ಪಕ್ಷಕ್ಕೆ ಬಂದ 17 ಮಂದಿ ನಮ್ಮ ಪಕ್ಷ ಕಟ್ಟಿದವರಲ್ಲ ಕೇವಲ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ಕೊಟ್ಟಿದ್ದಾರೆ.‌ ಮಡಿಕೇರಿಯಿಂದ...

error: Content is protected !!