Connect with us

Hi, what are you looking for?

ಪ್ರಮುಖ ಸುದ್ದಿ

ಕರೋನಾ ಸಾವಿನ ಸಂಖ್ಯೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ..!

ನವದೆಹಲಿ : ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ದೇಶದಲ್ಲಿ ದಿನವೊಂದಕ್ಕೆ 80 – 90 ಸಾವಿರ ಗಡಿ ದಾಟುತ್ತಿದ್ದ ಕೊರೊನಾ ಸಂಖ್ಯೆ ನಿನ್ನೆ 48,268 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸ್ವಲ್ಪ ನಿರಾಳ ಎನಿಸಿದರು, ಸಾವಿನ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 48,268 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಇದೀಗ 81,37,119 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದು ದಿನಕ್ಕೆ 551 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆಯೂ 1,21,641 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಈ ಮೂಲಕ ಭಾರತ ಕೊರೋನಾದಿಂದಾಗಿ ಸಾವಿನ ಸಂಖ್ಯೆ ಎರಡನೇ ರಾಷ್ಟ್ರಕ್ಕೇರಿದೆ.

ದೇಶದಲ್ಲಿ ಕೊರೋನಾ ಸೋಂಕಿನಿಂದ ಅತಿ ಹೆಚ್ಚು ಹಾನಿಗೆ ಒಳಗಾದ ಮೊದಲ ರಾಜ್ಯ ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 6190 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 127 ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 16,72,858 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 1,25,418 ಸಕ್ರೀಯ ಪ್ರಕರಣಗಳು ಇವೆ. ಕಳೆದ 24 ಗಂಟೆಯಲ್ಲಿ 8,241 ಜನ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಗುಣಮುಖರಾಗಿ ಮನೆಗೆ ತೆರಳಿದವರು ಸಂಖ್ಯೆಯೂ 15,03,050 ಕ್ಕೆ ತಲುಪಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾ ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ವೈರಸ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಲಿಯಾಗಿದೆ. ಕೊರೊನಾ ವೈರಸ್ ಗೆ ತುತ್ತಾಗಿದ್ದ ಸಿಬ್ಬಂದಿ...

ಪ್ರಮುಖ ಸುದ್ದಿ

ದಾವಣಗೆರೆ :ಅಮೆರಿಕದಂತೆ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ವಿಪ್ಲವ (ಕ್ರಾಂತಿ, ಆಂದೋಲನ) ಆಗಲಿದೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸೋಮವಾರ ಮಾತನಾಡಿ, ಕೆಲ ದಿನಗಳ ಹಿಂದೆ...

ಪ್ರಮುಖ ಸುದ್ದಿ

ನವದೆಹಲಿ :ಜನಪ್ರತಿನಿಧಿಗಳೇ ಕೊಂಚ ಬಿಡುವು ಮಾಡಿಕೊಂಡು ಈ ಸುದ್ದಿ ಓದಿ..ಇದು ನಿಮ್ಮ ಆರೋಗ್ಯದ ವಿಷಯ. ನಿರ್ಲಕ್ಷಿಸಿದರೆ ಅಪಾಯ ಖಚಿತ. ರಾಜಕಾರಣಿಗಳಿಗೆ ನಿತ್ಯ ನೂರಾರೂ ಪತ್ರಗಳು ಬರುತ್ತವೆ. ಇವುಗಳನ್ನು ಒಮ್ಮೆಯಾದರು ನೋಡುತ್ತೀರಾ. ಈ ಪತ್ರಗಳೇ...

ಪ್ರಮುಖ ಸುದ್ದಿ

ನವದೆಹಲಿ : ಮನುಕುಲಕ್ಕೆ ಹೆಮ್ಮಾರಿಯಾಗಿರುವ ಕೊರೊ‌ನಾಗೆ ಲಸಿಕೆ ಸಿಗುವ ದಿನಗಳು ಸನಿಹವಾಗುತ್ತಿವೆ. ಈ ಹೊತ್ತಲ್ಲಿ ಲಸಿಕೆ ವಿತರಣೆಗೆ ಮೋದಿ ಮೆಗಾ ಫ್ಲ್ಯಾನ್ ಹಾಕಿಕೊಂಡಿದ್ದಾರೆ‌ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಿರುವ ಕಂಪನಿಗಳ ಜೊತೆ...

ಪ್ರಮುಖ ಸುದ್ದಿ

ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಚಳಿಗಾಲ ಆರಂಬವಾಗಿರುವ ಹಿನ್ನೆಲೆ ಇದು ಇನ್ನೂ ವಿಪರೀತವಾಗಲಿದೆ. ಹೀಗಾಗಿ ಸೋನಿಯಾಗಾಂಧಿ ಅವರನ್ನು ಕೆಲ ದಿನಗಳ ಕಾಲ ಇತರೆ ನಗರಗಳಿಗೆ ಸ್ಥಳಾಂತರಿಸುವಂತೆ ವೈದ್ಯರು...

ಪ್ರಮುಖ ಸುದ್ದಿ

ಚಿತ್ರದುರ್ಗ, : ಜಿಲ್ಲೆಯಲ್ಲಿ ಗುರುವಾರ ಕೋವಿಡ್-19 ಸೋಂಕು 28 ಜನರಿಗೆ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,214ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ...

ಪ್ರಮುಖ ಸುದ್ದಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಸಾಕಷ್ಟು ಬಾರಿ ಕುಸಿಯುತ್ತಿರುವ ಜಿಡಿಪಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಬಾರಿಯೂ ನಿರುದ್ಯೋಗ, ಬೆಲೆ ಏರಿಕೆ ಕುರಿತಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ....

ಪ್ರಮುಖ ಸುದ್ದಿ

ಚಾಮರಾಜನಗರ: ಸಗಣಿಯನ್ನು ಮುಟ್ಟಿದರೆ ಕೆಲವರಿಗೆ ಇರಿಸು ಮುರಿಸು ಆಗಲಿದೆ. ಆದರೆ, ಇವರು, ಸಗಣಿಯ ಗುಡ್ಡದಲ್ಲೇ ಹೊರಲಾಡಿ, ಎರಚಾಡಿಕೊಳ್ಳುತ್ತಾರೆ. ಅದರಲ್ಲೇ ಮಿಂದೇಳುತ್ತಾರೆ. ಅರೇ ಯಾಕೆ ಸಗಣಿಯಲ್ಲಿ ಹೀಗೆ ಮಾಡ್ತಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ. ಚಾಮರಾಜನಗರಕ್ಕೆ...

ಪ್ರಮುಖ ಸುದ್ದಿ

ನವದೆಹಲಿ : ಕಾರ್ಮಿಕ, ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ನ.26 ರಂದು ದೇಶಾವ್ಯಾಪಿ ಸಾಮಾನ್ಯ ಮುಷ್ಕರ ನಡೆಸಲು ನಿರ್ಧರಿಸಿವೆ. ಮುಷ್ಕರ ನಡೆಸುವ ಸಂಬಂಧ ಕಾರ್ಮಿಕ ಸಂಘಟನೆಗಳು ವಿಡಿಯೋ ಕಾನ್ಪರೆನ್ಸ್...

error: Content is protected !!