Connect with us

Hi, what are you looking for?

ಪ್ರಮುಖ ಸುದ್ದಿ

ಶ್ರಮಿಕ ವರ್ಗಕ್ಕೆ ಬದುಕು ಕಟ್ಟಿಕೊಡಲು ಬದುಕು ಸಮರ್ಪಿಸಿಕೊಂಡಿರುವ ಭೋವಿ ಶ್ರೀಗಳನ್ನು ಭಕ್ತನಾಗಿ ನಾ ಕಂಡಂತೆ…! ಕೆ.ಮಂಜುನಾಥ್

ವಿಶೇಷ ಲೇಖನ-ಕೆ.ಮಂಜುನಾಥ್

ಧ್ಯಕರ್ನಾಟಕದ ಕೇಂದ್ರ ಸ್ಥಾನ ಚಿತ್ರದುರ್ಗ ಜಿಲ್ಲೆ ಅನೇಕ ಹೆಗ್ಗಳಿಕೆಗೆ ಕಾರಣವಾಗಿದೆ. ಐತಿಹಾಸಿಕ ಸ್ಥಳ, ಕೋಟೆನಾಡು, ಓಬವ್ವನ ಊರು, ಅಶೋಕನ ಮೊದಲ ಶಾಸನ ಇರುವ ಜಿಲ್ಲೆ, ಮದಕರಿನಾಯಕ ಆಳಿದ ಗಂಡಮೆಟ್ಟಿನ ನಾಡು ಹೀಗೆ ಹತ್ತಾರು ಬಿರುದಾಂಕಿತಗಳ ಮೂಲಕ ನಾಡಿನಲ್ಲಿ ಚಿತ್ರದುರ್ಗ ಖ್ಯಾತಿ ಗಳಿಸಿದೆ.

ಅದರ ಜೊತೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಶೋಷಿತ ವರ್ಗದ ಜನರು ಹೆಚ್ಚು ಇರುವ ಕಾರಣಕ್ಕೆ ಹಿಂದುಳಿದ ಜಿಲ್ಲೆ, ಮಳೆ ಕಡಿಮೆ ಕಾರಣಕ್ಕೆ ಬರಗಾಲವನ್ನು ಹೊದ್ದು ಮಲಗಿಕೊಂಡಿರುವ ಜಿಲ್ಲೆ, ಕೈಗಾರಿಕೆಗಳು ಇಲ್ಲದ ಕಾರಣಕ್ಕೆ ದೊಡ್ಡ ನಗರಗಳಿಗೆ ಇಲ್ಲಿಂದ ಹೆಚ್ಚು ಜನರು ವಲಸೆ ಹೋಗುವ ಕಾರಣಕ್ಕೆ ಗುಳೇ ಹೊರಟ ಊರು….

ಹೀಗೆ ಸಾಲು ಸಾಲು ಸಮಸ್ಯೆಗಳ ಜೊತೆಗೆ ಚಿತ್ರದುರ್ಗ ಜಿಲ್ಲೆ ದಶಕಗಳಿಂದಲೂ ತಳುಕು ಹಾಕಿಕೊಂಡಿದೆ.

ಸಮಸ್ಯೆಗಳ ಸುಳಿಗೆ ಸಿಲುಕಿರುವ ಕಲ್ಲಿನ ಕೋಟೆ ಜನರು ಸಮಸ್ಯೆಗಳಿಗೆ ಸವಾಲುವೊಡ್ಡಿ ಬದುಕುವ ರೀತಿ ಹೊರ ಜಿಲ್ಲೆ ಜನರಿಗೆ ಅಚ್ಚರಿ ಸಂಗತಿ ಆಗಿದೆ.

ಇದಕ್ಕೆ ಮುಖ್ಯ ಕಾರಣ, ಜಿಲ್ಲೆಯಲ್ಲಿರುವ ಹತ್ತಾರು ಮಠಾಧೀಶರು, ಜ್ಞಾನಿಗಳು, ಚಿಂತಕರು ಎನ್ನಬಹುದು.

ಇಂತಹ ಜಿಲ್ಲೆ ದಶಕದಿಂದಲೂ ದೇಶದಲ್ಲಿಯೇ ಧಾರ್ಮಿಕ ಸ್ಥಾನದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣಕರ್ತರು ನಾಡಿನ ಪ್ರಸಿದ್ಧ ಮಠ, ಅಕ್ಷರ, ಅನ್ನ, ಜ್ಞಾನ ದಾಸೋಹದಿಂದ ತ್ರಿವಿಧ ದಾಸೋಹಿ ಎಂದು ಭಕ್ತರಿಂದ ಬಿರುದು ಪಡೆದಿರುವ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿಗಳು ಮುಖ್ಯ ಕಾರಣಕರ್ತರು ಎನ್ನಬಹುದು.

ಇಂತಹ ತ್ರಿವಿಧ ದಾಸೋಹಿಗಳಿಂದ ಅನೇಕ ಸ್ವಾಮೀಜಿಗಳು ಧೀಕ್ಷೆ ಪಡೆದು ತಮ್ಮ ತಮ್ಮ ಸಮುದಾಯಗಳ ಜೊತೆಗೆ ಸಹೋದರ ಜಾತಿ ಜನರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಅನೇಕ ಮಠಾಧೀಶರು ಚಿತ್ರದುರ್ಗ ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ.

ಈ ಸಾಲಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನ, ದೂರದೃಷ್ಟಿ, ಹೋರಾಟದ ಹಾದಿ ಕಾರಣಕ್ಕೆ ಶ್ರಮಿಕ ವರ್ಗದ ಸಂಕೇತ ಭೋವಿ ಮಹಾಗುರುಪೀಠದ ಅಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ‌ ಮಹಾಸ್ವಾಮೀಜಿಗಳು ಪ್ರಮುಖವಾಗಿ ಗಮನಸೆಳೆಯುತ್ತಾರೆ.

ಚಿಕ್ಕ ವಯಸ್ಸಿನಲ್ಲಿಯೇ ಮುರುಘಾ ಮಠದ ಸ್ವಾಮೀಜಿಗಳಿಂದ ಧೀಕ್ಷೆ ಪಡೆದಿರುವ ಶ್ರೀ ಇಮ್ಮಡಿ ಸಿದ್ದರಾಮೇಶ್ವರ‌ ಮಹಾಸ್ವಾಮೀಜಿ ವಯಸ್ಸು ಜುಲೈ 18ಕ್ಕೆ 35 ವರ್ಷ ಆಗಲಿದೆ.

ಇಂದು 35ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಭೋವಿ ಸಮುದಾಯದ ಆರಾಧ್ಯ ಗುರುಗಳು, ಭೋವಿ ಗುರುಪೀಠದ ಅಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ‌ ಮಹಾಸ್ವಾಮೀಜಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಮುರುಘಾ ಮಠದಲ್ಲಿದ್ದು ಆಳಕ್ಕೆ ಇಳಿದು ಬಸವ ತತ್ವ ಅಧ್ಯಯನ ನಡೆಸಿದ ಸಾಧಕರು.

ಈ ಕಾರಣಕ್ಕೆ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ, ಶ್ರಮಿಕ ವರ್ಗದ ಭೋವಿ ಸಮುದಾಯವೂ ಇವರನ್ನು ಆರಾಧ್ಯ ಗುರು ಎಂದೇ ಒಪ್ಪಿಕೊಂಡಿದೆ.

ಅಖಿಲ ಭಾರತ ಭೋವಿ ಗುರುಪೀಠದ ಅಧ್ಯಕ್ಷರನ್ನಾಗಿಸಿಕೊಂಡಿರುವ ಸಮುದಾಯದ ನಂಬಿಕೆಗೆ ಕಿಂಚಿತ್ತು ಧಕ್ಕೆ ಆಗದಂತೆ ಅನೇಕ ಅಡ್ಡಿ ಆತಂಕಗಳ ಮಧ್ಯೆಯೂ ಎಡೆಬಿಡದೆ ನಾಡನ್ನು ಸುತ್ತುವ ಮೂಲಕ ಸಮುದಾಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

immadi-siddarameshwara-swamiji

ಭೋವಿ ಸಮುದಾಯ ಅಸಂಘಟಿತ ವರ್ಗ. ಅದರಲ್ಲೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಸಮುದಾಯ. ಇಂತಹ ಸಮುದಾಯವನ್ನು ಮುಖ್ಯವಾಹಿನಿಗೆ ತಂದೇ ವಿರಮಿಸುವೇ ಎಂಬಂತೆ ಛಲತೊಟ್ಟು ನಾಡನ್ನು ಚಿಕ್ಕ ವಯಸ್ಸಿನಲ್ಲಿಯೇ ಸುತ್ತುತ್ತಿರುವ, ಸಮುದಾಯದ ಜನರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯಕ್ಕೆ ಧಕ್ಕಬೇಕಾಗಿರುವ ಸೌಲಭ್ಯಗಳನ್ನು ಕೊಡಿಸಲು ಅವಿರತವಾಗಿ ಶ್ರಮಿಸುತ್ತಿರುವ ರೀತಿ ನಿಜಕ್ಕೂ ಅಚ್ಚರಿಯಾಗಿದೆ.

ಎದೆಯಲ್ಲಿ ಅಕ್ಷರ, ಜೇಬಲ್ಲಿ ದುಡ್ಡು ಇಲ್ಲದಿದ್ದರೂ ನಾವು ಕಲ್ಲು ಹೊಡೆದು ಬದುಕು ಕಟ್ಟಿಕೊಂಡಿದ್ದೇವೆ. ರಟ್ಟೆಯಲ್ಲಿನ ಶಕ್ತಿ ನಂಬಿ ಜೀವಿಸುತ್ತಿರುವ ಶೋಷಿತ ಜನರು ಎಂದು ಸಮುದಾಯ ಹಾಗೂ ನಾಡಿಗೆ ತಿಳಿಸುವ ಮೂಲಕ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿಗಳು ಸಮುದಾಯ ಹಾದಿ ತಪ್ಪದ ರೀತಿ ಸದಾ ಜಾಗ್ರತೆ ವಹಿಸುತ್ತಿದ್ದಾರೆ.

ನಾಡಿನಲ್ಲಿ ಐತಿಹಾಸಿಕ ಕೋಟೆ, ದೇವಸ್ಥಾನ, ಬೃಹತ್ ಅಣೆಕಟ್ಟುಗಳು ಭೋವಿ ಸಮುದಾಯದ ಶ್ರಮದ ಸಂಕೇತ ಎಂಬುದನ್ನು ನಾಡು ಮರೆಯಬಾರದು. ಭೋವಿ ಸಮುದಾಯವನ್ನು ಸ್ಮರಿಸದಿದ್ದರೂ ಸರಿ, ಅಲಕ್ಷ ಮಾಡಬೇಡಿ ಎಂದು ವೇದಿಕೆಯಲ್ಲಿಯೇ ರಾಜಕಾರಣಿಗಳಿಗೆ ಸೂಚಿಸುವ ಸ್ವಾಮೀಜಿಗಳ ಮೊನಚು ಮಾತು ಲಕ್ಷಾಂತರ ಭಕ್ತರಲ್ಲಿ ರೋಮಾಂಚನ ವಿಷಯವೇ ಆಗಿದೆ.

ಸುಳ್ಳು ವದಂತಿ ವಿರುದ್ಧ ಸಿಡಿದೆದ್ದ ಶ್ರೀಗಳು: ಭೋವಿ ಸೇರಿದಂತೆ ಇತರೆ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂಬ ಸುಳ್ಳು ವದಂತಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿ ಶ್ರಮಿಕ ವರ್ಗ ಭೋವಿ, ಬುಡಕಟ್ಟು ಜನ ಲಂಬಾಣಿ, ಕೊರಚ, ಕೊರಮ ಸಮುದಾಯದ ಮುಗ್ಧ ಜನರನ್ನು ಆತಂಕಕ್ಕೆ ದೂಡಿತ್ತು.

ಸಮದಾಯದ ಆತಂಕ ಅರಿತ ಭೋವಿ ಮಠದ ಸ್ವಾಮೀಜಿಗಳು ತಕ್ಷಣ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯದ ಮುಖಂಡರ ಸಭೆ ಮಠದಲ್ಲಿ ಕರೆದು ಹೋರಾಟದ ಹಾದಿಗೆ ಧುಮುಕಿ, ಅ ಹಾದಿಯಲ್ಲಿಯೇ ಆರಂಭದಲ್ಲಿಯೇ ಯಶಸ್ಸು ಗಳಿಸಿದ್ದು, ಸ್ವತಃ ಸಮಾಜ ಕಲ್ಯಾಣ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರು ಯಾವ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ಕೈಬಿಡುತ್ತಿಲ್ಲ. ಅಂತಹ ವದಂತಿ ನಂಬದಿರಿ, ಶ್ರೀಗಳು ಹೋರಾಟದ ಹಾದಿ ಕೈಬಿಡುವಂತೆ ಮನವಿ ಮಾಡಿಕೊಂಡರು.

ಇದು ಶ್ರೀಗಳ ಹೋರಾಟದ ಹಾದಿ ಹಾಗೂ ಯಶಸ್ಸಿನ ಗುರಿ ತಲುಪುವರೆಗೂ ವಿರಮಿಸುವುದಿಲ್ಲ ಎಂಬದಕ್ಕೆ ಸಾಕ್ಷಿ ಎನ್ನಬಹುದು. ಇಂತಹ ಹತ್ತಾರು ಸಮಸ್ಯೆಗಳು ಸಮುದಾಯಕ್ಕೆ ಎದುರಾದಗ ತಕ್ಷಣ ಸಂಕಷ್ಟ ಪರಿಹರಿಸಲು ಟೊಂಕ ಕಟ್ಟಿ ನಿಲ್ಲುವ ಶ್ರೀಗಳ ಗಟ್ಟಿ ನಿರ್ಧಾರ ನಿಜಕ್ಕೂ ಮಾದರಿ ಆಗಿದೆ.

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ: ಕೇವಲ ಭೋವಿ ಸಮುದಾಯದ ಸಂಕಷ್ಟಗಳಿಗೆ ಮಾತ್ರ ಸ್ಪಂದಿಸುವ ಸ್ವಾಮೀಜಿಗಳಾಗಿ ಶ್ರೀ ಇಮ್ಮಡಿ ಸಿದ್ದೇಶ್ವರ ಮಹಾಸ್ವಾಮೀಜಿಗಳ ನಡೆ ಇಲ್ಲ.

ಸಹೋದರ ಜಾತಿ ಹಾಗೂ ಶೋಷಿತ ವರ್ಗದ ಹಿಂದುಳಿದ, ಭೋವಿ ಸಮುದಾಯವನ್ನು ಒಟ್ಟಿಗೆ ಮುಖ್ಯವಾಹಿನಿಗೆ ತರುವ ಮಹಾತ್ಕಾರ್ಯದಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಗಳು ತೊಡಗಿಕೊಂಡಿದ್ದಾರೆ.

ಈ ಕಾರಣಕ್ಕೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದಲ್ಲಿ ಸಕ್ರಿಯರಾಗಿದ್ದು, ನಾಯಕ, ಕುಂಚಿಟಿಗ, ಗೊಲ್ಲ, ಕುರುಬ, ಲಂಬಾಣಿ, ಛಲವಾದಿ, ಮಾದಿಗ ಹೀಗೆ ಹಿಂದುಳಿದ, ಎಸ್.ಸಿ. ಹಾಗೂ ಎಸ್.ಟಿ. ವರ್ಗದಲ್ಲಿ ಬರುವ ನೂರಾರು ಜಾತಿ ಜನರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಭೋವಿ ಮಠದ ಮಹಾಸ್ವಾಮೀಜಿಗಳು ಶ್ರಮಿಸುತ್ತಿರುವುದು ಸಮುದಾಯಕ್ಕೆ ಹೆಮ್ಮೆ ಸಂಗತಿ ಆಗಿದೆ.

ಒಕ್ಕೂಟದ ಅಧ್ಯಕ್ಷರಾಗಿರುವ ಕಾಗಿನೆಲೆ ಗುರುಪೀಠದ ಶ್ರೀ ನಿರಂಜಾನಂದ ಮಹಾಸ್ವಾಮೀಜಿಗಳು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಗಳು ಹಾಗೂ ಕುಂಚಿಟಿಗ ಗುರುಪೀಠದ ಜಗದ್ಗುರು ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿಗಳು, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಹೀಗೆ ಅನೇಕ ಹಿಂದುಳಿದ, ದಲಿತ ಮಠಾಧೀಶರು ಇರುವ ಒಕ್ಕೂಟದಲ್ಲಿ ಸದಾ ಕ್ರೀಯಾಶೀಲತೆಯಿಂದ ಪಾದರಸದಂತೆ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದೇಶ್ವರ ಮಹಾಸ್ವಾಮೀಜಿಗಳು ನೂರಾರು ಜಾತಿ ಜನರ ಪ್ರೀತಿ ಗಳಿಸಿದ್ದಾರೆ.

ರಟ್ಟೆಯಲ್ಲಿನ ಶಕ್ತಿ ನಂಬಿ, ಕಲ್ಲು ಒಡೆದು, ಮಣ್ಣು ಅಗೆದು, ಕಟ್ಟಡ ಕಟ್ಟುವ ಶ್ರಮಿಕ ಕೆಲಸದಲ್ಲಿ ತೊಡಗಿರುವ ಭೋವಿ ಸಮುದಾಯದ ಮಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದೇಶ್ವರ ಮಹಾಸ್ವಾಮೀಜಿಗಳು, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಸಿದ್ದರಾಮರು ಸೇರಿದಂತೆ ನೂರಾರು ಸಂತರು ಹಾಕಿಕೊಟ್ಟ ಹಾದಿಯಲ್ಲಿ ಸಾಗಲು ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ರೀತಿ ಸಮುದಾಯದ ಹೆಸರಲ್ಲಿ ಸೌಲಭ್ಯ ಪಡೆದು ಬದುಕು ಕಟ್ಟಿಕೊಂಡಿರುವ ನಮ್ಮಂತಹ ಸಹಸ್ರಾರು ಮಂದಿಗೆ ಮಾದರಿ ಕಾರ್ಯ ಆಗಿದೆ.

ಸರ್ವ ಸಮುದಾಯದ ಪ್ರೀತಿ ಗಳಿಸಿರುವ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಈ ಲೇಖನ ಮೂಲಕ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಲು ಅತ್ಯಂತ ಸಂತಸ, ಸಂಭ್ರಮ ಪಡುತ್ತೇನೆ.

ಲೇಖಕರು- ಕೆ.ಮಂಜುನಾಥ್
ಜಿಲ್ಲಾ ಅಧ್ಯಕ್ಷರು,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಚಿತ್ರದುರ್ಗ ಜಿಲ್ಲಾ ಘಟಕ, ಚಿತ್ರದುರ್ಗ.
ಮೊ.ನಂ: 94485 33817

1 Comment

1 Comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ನವೆಂಬರ್-24,2020 ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ದಶಮೀ – 26:41+ ವರೆಗೆ ನಕ್ಷತ್ರ: ಪೂರ್ವಾ ಭಾದ್ರ – 15:32 ವರೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ವ್ಯಕ್ತಿಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಲೇಶ (32) ಆರೋಗ್ಯ ಸರಿಯಿಲ್ಲದ್ದಕ್ಕೆ ನೊಂದು ಸೋಮವಾರ ಮನೆಯಲ್ಲೇ ನೇಣು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು. ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ...

ಪ್ರಮುಖ ಸುದ್ದಿ

ಚಿತ್ರದುರ್ಗ : ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‍ನಲ್ಲಿ ಪಿಡಿಒ ಹಾಗೂ ಇಂಜಿನಿಯರ್‍ಗಳ ಭೇಟಿ ದಿನಾಂಕ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅನುದಾನದಡಿ ಹಿರೇಗುಂಟನೂರು ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಕುರುಬರಹಳ್ಳಿಯಲ್ಲಿ ಹೈಮಾಸ್ ವಿದ್ಯುತ್ ದೀಪ ಅಳವಡಿಕೆಗೆ ಭೂಮಿಪೂಜೆ, ಹುಲ್ಲೂರು...

ಪ್ರಮುಖ ಸುದ್ದಿ

ಚಿತ್ರದುರ್ಗ :ನ.1 ರಿಂದ ವಿದ್ಯುತ್ ದರ ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೇವಲ ಐದು ತಿಂಗಳಲ್ಲಿ 24 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 4ನೇ ತ್ರೈಮಾಸಿಕ...

ಪ್ರಮುಖ ಸುದ್ದಿ

ಚಿತ್ರದುರ್ಗ :ಭವ್ಯ ಪರಂಪರೆಯ ಕನ್ನಡವನ್ನು ಬೆಳೆಸುವ ಪ್ರಯತ್ನಕ್ಕೆ ಕೈ ಹಾಕದೇ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಅಧೋಗತಿಗೆ ನೂಕುತ್ತಿದ್ದೇವೆ ಎಂದು ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ರೇಣುಕಾ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು....

error: Content is protected !!