Connect with us

Hi, what are you looking for?

ಪ್ರಮುಖ ಸುದ್ದಿ

ಅಕ್ರಮ ಯೂರಿಯಾ ದಾಸ್ತಾನು ವಶ

ಕೋಲಾರ, (ಅಕ್ಟೋಬರ್ 16) : ಕೃಷಿ ಬಳಕೆಗೆಂದು ಸಬ್ಸಿಡಿದರದಲ್ಲಿ ಸರಬರಾಜಾಗುತ್ತಿದ್ದ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆ ಅಥವಾ ಕಾರ್ಖಾನೆ ಬಳಕೆಗಾಗಿ ಅಕ್ರಮವಾಗಿ ಈ ಹಿಂದೆ ಬಳಸಲಾಗುತ್ತಿತ್ತು. ಅದನ್ನು ತಡೆಯಲು ಸರ್ಕಾರದ ವತಿಯಿಂದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಸರ್ಕಾರವು ಸರಬರಾಜು ಮಾಡಲಾಗುತ್ತಿದೆ.

ಆದರೂ ಇಂದಿಗೂ ಸಹ ಅಂತಹ ಅಕ್ರಮ ಪ್ರಕರಣಗಳು ಕೆಲವು ಕಡೆ ನಡೆಯುತ್ತಿರುವುದು ತಿಳಿದು ಬಂದಿದೆ. ಅದರಂತೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೊಡಗಿನ ಬೆಲೆ ಗ್ರಾಮದ ಸಮೀಪವಿರುವ ಮರ್ಕೂರಿ ಪಾಲಿಮರ್ಸ್ ಎಂಬ ಖಾಸಗಿ ಕಂಪನಿಯು ಅಕ್ರಮವಾಗಿ ವೇಮಗಲ್‍ನ ಏಜನ್ಸಿಯೊಬ್ಬರ ಹೆಸರಿನಲ್ಲಿ ನಕಲು ಬಿಲ್ಲುಗಳನ್ನು ಸೃಷ್ಟಿಸಿ 440 ಯೂರಿಯಾ ಮೂಟೆಗಳನ್ನು ಸಂಗ್ರಹಿಸಿರುವ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಸೂಚನೆಯಂತೆ ಜಿಲ್ಲಾ ಜಾರಿದಳ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್.ಕೆ ರಾಮಕೃಷ್ಣ, ಮಾಲೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ. ಬಿ.ಪಿ ಚಂದ್ರಪ್ಪ ಮತ್ತು ಕೃಷಿ ಅಧಿಕಾರಿಗಳಾದ ಶ್ರೀ.ರಾಘವೇಂದ್ರ ಬಿ.ಎಂ ರವರು ಲಾರಿಯನ್ನು ಹಿಂಬಾಲಿಸಿ, ಪೋಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಯೂರಿಯಾ ರಸಗೊಬ್ಬರದ ದಾಸ್ತಾನು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುತ್ತಾರೆ. ಮಾಲೂರು ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಸ್ತುತ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಕರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೋಲಾರ (ಅಕ್ಟೋಬರ್.13) : ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 2020-21 ನೇ ಸಾಲಿನ ಎನ್.ಹೆಚ್.ಎಂ. ನಿಯಮಾವಳಿಯಂತೆ (ಗುತ್ತಿಗೆ) Para Medical Worker (Leprosy)ಹುದ್ದೆಗೆ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು....

ಪ್ರಮುಖ ಸುದ್ದಿ

ಕೋಲಾರ (ಅಕ್ಟೋಬರ್ 13) : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೆಬಲ್ (ಸಿಎಆರ್/ಡಿಎಆರ್) ಹುದ್ದೆಗಳ ನೇರ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಯನ್ನು ಕೋಲಾರದ ಶಾಲಾ/ಕಾಲೇಜುಗಳಲ್ಲಿ ಅಕ್ಟೋಬರ್ 18 ರ ಭಾನುವಾರದಂದು...

ಪ್ರಮುಖ ಸುದ್ದಿ

ಕೋಲಾರ (ಅಕ್ಟೋಬರ್ 13) : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ (ಎನ್.ಹೆಚ್.ಎಂ.) ಕಾರ್ಯಕ್ರಮಕ್ಕೆ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗಕ್ಕೆ psychiatrist...

ಪ್ರಮುಖ ಸುದ್ದಿ

ಚಿತ್ರದುರ್ಗ, (ಆ.04) : ಜಿಲ್ಲೆಗೆ ಎಂಎಫ್‍ಎಲ್ (ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್) ಸಂಸ್ಥೆ ವತಿಯಿಂದ 516.06 ಮೆ.ಟನ್ ಹಾಗೂ ಆರ್‍ಸಿಎಫ್ (ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್) ಸಂಸ್ಥೆ ವತಿಯಿಂದ 400 ಮೆ.ಟನ್ ಸೇರಿದಂತೆ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಆ.03) : ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡುವುದರಿಂದ ಬೆಳೆಗಳಿಗೆ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ಸಂಭವವಿದ್ದು, ಮಿತಿಯಾಗಿ ಯೂರಿಯಾ ಬಳಸುವಂತೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ, (ಜು.23) : ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಸದ್ಯ ಬಿತ್ತನೆಯಾಗಿರುವ ಮೆಕ್ಕೆಜೋಳಕ್ಕೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಯೂರಿಯಾ ಬಳಸುತ್ತಿರುವುದು ಕಂಡುಬಂದಿದ್ದು, ವಿಜ್ಞಾನಿಗಳ ಶಿಫಾರಸ್ಸಿನ  ಪ್ರಕಾರ ಮೆಕ್ಕೆಜೋಳದ ಬೆಳೆಗೆ ಪ್ರತಿ ಎಕರೆಗೆ ಗರಿಷ್ಟ 43...

ಪ್ರಮುಖ ಸುದ್ದಿ

ಕೋಲಾರ, (ಜುಲೈ 04) : ಜುಲೈ ತಿಂಗಳ ನಾಲ್ಕು ಭಾನುವಾರಗಳಂದೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವ್ಯಾಪಾರ ವಹಿವಾಟಿಗೆ ಅನುಮತಿಯನ್ನು ಕಲ್ಪಿಸಲಾಗಿದ್ದು ಯಥಾವತ್ತಾಗಿ ನಡೆಯಲಿದೆ ಎಂದು ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ...