Connect with us

Hi, what are you looking for?

ಕ್ರೀಡಾ ಸುದ್ದಿ

ಟೀಮ್‌ಇಂಡಿಯಾ ಆಯ್ಕೆಗೆ ಹರ್ಭಜನ್ ಸಿಂಗ್ ಆಕ್ರೋಶ

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ತಂಡದಿಂದ ಕೈಬಿಟ್ಟಿರುವ ಬಗ್ಗೆ ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಯದ ನೆಪದಲ್ಲಿ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಈಗಾಗಲೇ ತೀವ್ರ ಟೀಕೆಗೆ ಗುರಿಯಾಗಿರುವ ಆಯ್ಕೆ ಸಮಿತಿಯ ವಿರುದ್ಧ
ಸೂರ್ಯಕುಮಾರ್ ಅವರನ್ನು ಪರಿಗಣಿಸದಿರುವ ಬಗ್ಗೆ ಕಿಡಿ ಕಾರಿದ್ದಾರೆ.

ಈ ವಿಚಾರವಾಗಿ ಟೀಮ್‌ಇಂಡಿಯಾ ಆಯ್ಕೆಯನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. ಸೂರ್ಯಕುಮಾರ್‌ ಇನ್ನೂ ಏನು ಸಾಬೀತುಪಡಿಸಬೇಕು ಎಂಬುದು ತಿಳಿಯುತ್ತಿಲ್ಲ. ಟೀಮ್‌ಇಂಡಿಯಾ ತಂಡದಲ್ಲಿ ಆಯ್ಕೆಯಾಗುವ ಎಲ್ಲಾ ಅರ್ಹತೆಗಳನ್ನು ಅವರು ಹೊಂದಿದ್ದಾರೆ.

ಐಪಿಎಲ್‌ನಲ್ಲಿ ಸೂರ್ಯಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ಆಯ್ಕೆ ಸಮಿತಿಯಲ್ಲಿ ಒಬ್ಬೊಬ್ಬರಿಗೆ ಒಂದು ರೀತಿಯ ನಿಯಮವನ್ನು ಅಳವಡಿಸಿಕೊಳ್ಳುತ್ತಾರೆ. ಇದಕ್ಕೆ ಇದೇ ತಾಜಾ ಪುರಾವೆ. ಆಯ್ಕೆದಾರರು ಕನಿಷ್ಠ ಅವರ ದಾಖಲೆಗಳನ್ನು ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯು ಸೋಮವಾರ ಟೆಸ್ಟ್, ಏಕದಿನ ಮತ್ತು ಟಿ-20 ತಂಡಗಳನ್ನು ಆಯ್ಕೆ ಮಾಡಿದೆ. ಆದರೆ, ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡ ಮತ್ತು ಏಕದಿನ ತಂಡದಲ್ಲಿ ಸ್ಥಾನ ದೊರೆತಿಲ್ಲ.
ಪ್ರಸ್ತುತ ಐಪಿಎಲ್‌ನಲ್ಲಿ ತೊಡೆ‌ ಮಾಂಸಖಂಡಗಳಿಗೆ ಸಂಬಂಧಿಸಿದ ನೋವಿನಿಂದ ಬಳಲುತ್ತಿರುವ ರೋಹಿತ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ತಂಡದಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ರೋಹಿತ್ ಅವರಿಗೆ ಅಗಿರುವ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ಕಾಲಕಾಲಕ್ಕೆ ನೋಡಿಕೊಳ್ಳುತ್ತಿದೆ. ಮತ್ತೊಂದೆಡೆ ಇಶಾಂತ್ ಶರ್ಮಾ ಕೂಡ ಹೊರಗುಳಿದಿದ್ದಾರೆ. ಗಾಯದಿಂದಾಗಿ ಬಳಲುತ್ತಿರುವ ಕಾರಣದಿಂದಾಗಿ ಐಪಿಎಲ್ ನಲ್ಲಿ ಸಹಾ ಇಲ್ಲದಿರುವುದು ಇದಕ್ಕೆ ಕಾರಣ. ಇಶಾಂತ್ ಅವರ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡವೂ ನಿಗಾ ವಹಿಸುತ್ತಿದೆ.

ಮತ್ತೊಂದೆಡೆ ರಿಷಭ್ ಪಂತ್ ಅವರಿಗೆ ಟೆಸ್ಟ್ ತಂಡದಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಏಕದಿನ ಮತ್ತು ಟಿ 20 ಗಳಿಗೆ ಯಾವುದೇ ಸ್ಥಾನವಿಲ್ಲ. ವೃದ್ಧಿಮಾನ್ ಸಹಾ ಅವರಿಗೆ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿದೆ. ಕೆಕೆಆರ್ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಮೊದಲ ಬಾರಿಗೆ ಟೀಮ್ ಇಂಡಿಯಾ ಟಿ 20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾ ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ವೈರಸ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಬಲಿಯಾಗಿದೆ. ಕೊರೊನಾ ವೈರಸ್ ಗೆ ತುತ್ತಾಗಿದ್ದ ಸಿಬ್ಬಂದಿ...

ಪ್ರಮುಖ ಸುದ್ದಿ

ನವದೆಹಲಿ :ಜನಪ್ರತಿನಿಧಿಗಳೇ ಕೊಂಚ ಬಿಡುವು ಮಾಡಿಕೊಂಡು ಈ ಸುದ್ದಿ ಓದಿ..ಇದು ನಿಮ್ಮ ಆರೋಗ್ಯದ ವಿಷಯ. ನಿರ್ಲಕ್ಷಿಸಿದರೆ ಅಪಾಯ ಖಚಿತ. ರಾಜಕಾರಣಿಗಳಿಗೆ ನಿತ್ಯ ನೂರಾರೂ ಪತ್ರಗಳು ಬರುತ್ತವೆ. ಇವುಗಳನ್ನು ಒಮ್ಮೆಯಾದರು ನೋಡುತ್ತೀರಾ. ಈ ಪತ್ರಗಳೇ...

ಪ್ರಮುಖ ಸುದ್ದಿ

ನವದೆಹಲಿ : ಮನುಕುಲಕ್ಕೆ ಹೆಮ್ಮಾರಿಯಾಗಿರುವ ಕೊರೊ‌ನಾಗೆ ಲಸಿಕೆ ಸಿಗುವ ದಿನಗಳು ಸನಿಹವಾಗುತ್ತಿವೆ. ಈ ಹೊತ್ತಲ್ಲಿ ಲಸಿಕೆ ವಿತರಣೆಗೆ ಮೋದಿ ಮೆಗಾ ಫ್ಲ್ಯಾನ್ ಹಾಕಿಕೊಂಡಿದ್ದಾರೆ‌ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಿರುವ ಕಂಪನಿಗಳ ಜೊತೆ...

ಪ್ರಮುಖ ಸುದ್ದಿ

ಬೆಂಗಳೂರು :ಸರ್ಕಾರ ರಚನೆಗೆ ನೆರವಾದವರಿಗೆ ಅನ್ಯಾಯ ಮಾಡಬೇಡಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ದೆಹಲಿಯಿಂದ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು...

ಪ್ರಮುಖ ಸುದ್ದಿ

ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಚಳಿಗಾಲ ಆರಂಬವಾಗಿರುವ ಹಿನ್ನೆಲೆ ಇದು ಇನ್ನೂ ವಿಪರೀತವಾಗಲಿದೆ. ಹೀಗಾಗಿ ಸೋನಿಯಾಗಾಂಧಿ ಅವರನ್ನು ಕೆಲ ದಿನಗಳ ಕಾಲ ಇತರೆ ನಗರಗಳಿಗೆ ಸ್ಥಳಾಂತರಿಸುವಂತೆ ವೈದ್ಯರು...

ಪ್ರಮುಖ ಸುದ್ದಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಸಾಕಷ್ಟು ಬಾರಿ ಕುಸಿಯುತ್ತಿರುವ ಜಿಡಿಪಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಬಾರಿಯೂ ನಿರುದ್ಯೋಗ, ಬೆಲೆ ಏರಿಕೆ ಕುರಿತಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ : ಕಾರ್ಮಿಕ, ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ನ.26 ರಂದು ದೇಶಾವ್ಯಾಪಿ ಸಾಮಾನ್ಯ ಮುಷ್ಕರ ನಡೆಸಲು ನಿರ್ಧರಿಸಿವೆ. ಮುಷ್ಕರ ನಡೆಸುವ ಸಂಬಂಧ ಕಾರ್ಮಿಕ ಸಂಘಟನೆಗಳು ವಿಡಿಯೋ ಕಾನ್ಪರೆನ್ಸ್...

ಪ್ರಮುಖ ಸುದ್ದಿ

ನವದೆಹಲಿ:  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ 71 ರ ಹರೆಯದ ಅಹ್ಮದ್ ಪಟೇಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪಟೇಲ್ ಅವರು ಅಕ್ಟೋಬರ್ ಮೊದಲ ವಾರದಲ್ಲಿ ಕೋವಿಡ್ 19 ಸೋಂಕಿಗೆ ಒಳಗಾಗಿ ಗುರ್‌ಗ್ರಾಮ್‌ನ ಪ್ರಮುಖ...

ಪ್ರಮುಖ ಸುದ್ದಿ

ಮಂಡ್ಯ : ಆ ಯಮ್ಮ ಯಾವುದೇ ಕೆಲಸ ಮಾಡಲ್ಲ. ದೇವೇಗೌಡರ ಕುಟುಂಬವನ್ನ ಸೋಲಿಸಲು ಅವರನ್ನ ಗೆಲ್ಲಿಸಿದ್ದಾರೆ ಎಂದು ಮಂಡ್ಯ ಸಂಸದೆ ಕಾರ್ಯ ವೈಖರಿ ಬಗ್ಗೆ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ...

error: Content is protected !!