Connect with us

Hi, what are you looking for?

ಪ್ರಮುಖ ಸುದ್ದಿ

ಹರಳಯ್ಯ ಸಮುದಾಯ ಭವನ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

sharana samskruthi ustav 2020_suddione banner 1

ಚಿತ್ರದುರ್ಗ (ಅ.18) : ಸರ್ಕಾರದ ವೆಚ್ಚದಿಂದ ನಿರ್ಮಾಣವಾಗಿರುವ ಸಮುದಾಯಭವನವನ್ನು ಉಚಿತವಾಗಿ ನೀಡದೇ ಕಡಿಮೆ ವೆಚ್ಚದಲ್ಲಿ ಬಾಡಿಗೆ ನೀಡುವುದರ ಮೂಲಕ ಸ್ವಚ್ಚತೆಯನ್ನು ಕಾಪಾಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬಡಾವಣೆಯ ಮುಖಂಡರಿಗೆ ಸೂಚನೆ ನೀಡಿದರು.

ನಗರದ ಸಿ.ಕೆ.ಪುರ ಕೆಳಗೋಟೆಯಲ್ಲಿ ಸುಮಾರು 30 ಲಕ್ಷ ರೂಗಳ ವೆಚ್ಚದಲ್ಲಿ ರಾಜ್ಯ ಸಭಾ ಸದಸ್ಯರಾದ ವೆಂಕಯ್ಯನಾಯ್ಡು ಹಾಗೂ ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಹರಳಯ್ಯ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ಈ ಭಾಗದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಹಿಂದುಳಿದ ಕುಟುಂಬಗಳ ಜನರು ಇರುವ ಪ್ರದೇಶವಾಗಿದೆ. ನಗರದಲ್ಲಿ ಬಡವರ ವಿವಿಧ ರೀತಿಯ ಸಮಾರಂಭಗಳನ್ನು ಮಾಡಲು ಸಾಕಷ್ಟು ವೆಚ್ಚ ವಾಗುತ್ತದೆ. ಅಲ್ಲದೆ ಅಂತಹ ಸ್ಥಳದಲ್ಲಿ ಮಾಡಲು ಆಗಲ್ಲ ಹಾಗಾಗಿ ಬಡವರ ಅನುಕೂಲಕ್ಕಾಗಿ ಈ ಭಾಗದ ಮುಖಂಡರು ತಿಳಿಸಿದ್ದರಿಂದ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಈ ಮೊದಲು 10 ಲಕ್ಷ ಹಾಗೂ ಕಡಿಮೆ ಆದ ಕಾರಣ ಮತ್ತೆ 10 ಲಕ್ಷ ನೀಡಿದ್ದೇನೆ. ಈಗಿನ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ಸಹ 10 ಲಕ್ಷ ಹಣ ನೀಡಿ ಒಟ್ಟು 30 ಲಕ್ಷ ವೆಚ್ಚದಲ್ಲಿ ಸುಂದರ ಭವನ ನಿರ್ಮಾಣವಾಗಿದೆ. ಸಮುದಾಯ ಭವನಕ್ಕೆ ಶಾಮಿಯಾನ ಹಾಗೂ ಇತರೆ ವಸ್ತುಗಳಾದ ಪಾತ್ರೆ ಸಾಮಾಗ್ರಿಗಳಿಗೆ ಶಾಸಕರ ನಿಧಿ ಅಥವಾ ನಗರಸಭೆ ಮೂಲಕ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು ಭರವಸೆ ನೀಡಿದ್ದಲ್ಲದೆ ಸ್ಥಳದಲ್ಲಿಯೇ ಪೌರಾಯುಕ್ತರಿಗೆ ದೂರವಾಣಿ ಮೂಲಕ ಮಾತನಾಡಿ ಸಹಾಯವನ್ನು ಮಾಡುವಂತೆ ಸೂಚನೆ ನೀಡಿದರು.

ಸಮುದಾಯ ಭವನದ ತುಂಬಾ ಸುಂದರವಾಗಿ ನಿರ್ಮಾಣವಾಗಿದೆ. ನಿರ್ವಹಣೆ ಜೊತೆಗೆ ಸಾರ್ವಜನಿಕರು ಜೊತೆಗೆ ನಿರ್ವಹಣೆ ಮಾಡುವವರು ಭವನದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಡ ಪುರುಷ ಅಥವಾ ಮಹಿಳೆ ಒಬ್ಬರಿಗೆ ಕೆಲಸ ನೀಡಿ ನಿತ್ಯ ಅಚ್ಚುಕಟ್ಟಾಗಿ ಮಾಡಲು ತಿಳಿಸಬೇಕು. ಸಮುದಾಯ ಭವನದ ನಿರ್ವಹಣೆಗೆ ಇಂತಿಷ್ಟು ಹಣ ಪ್ರತಿ ಕಾರ್ಯಕ್ರಮಕ್ಕೆ ನಿಗಧಿ ಮಾಡಬೇಕು ಎಂದರು. ಕೊಟ್ಟ ಹಣವನ್ನು ದುಂದುವೆಚ್ಚ ಆಗದಂತೆ ಉತ್ತಮ ಭವನ ನಿರ್ಮಾಣ ಮಾಡಿದ್ದಾರೆ. ಮುಂದೆ ಅದಕ್ಕೆ ಬೇಕಾದ ಮೂಲ ಸೌಕರ್ಯಕ್ಕೆ ಸಹಕಾರ ನೀಡುತ್ತೇನೆ. ಶೌಚಾಲಯ ಸಹ ನೀರಿನ ವ್ಯವಸ್ಥೆ ಮೂಲಕ ಸ್ವಚ್ಚತೆ ಕಾಪಾಡುವಂತೆ ಮನವಿ ಮಾಡಿದರು.

Advertisement. Scroll to continue reading.

ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 14 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ನಗರಸಭೆ ಸದಸ್ಯರಾದ ಅಂಗಡಿ ಮಂಜುನಾಥ್, ಹರೀಶ್ ,ತಾರಕೇಶ್ವರಿ, ಭಾಗ್ಯಮ್ಮ, ಅನುರಾಧ ರವಿಶಂಕರ್, ಮಾಜಿ ನಗರಸಭೆ ಸದಸ್ಯ ತಿಪ್ಪೇಸ್ವಾಮಿ, ಪ್ರಕಾಶ್, ವಕೀಲರಾದ ಬೀಸನಹಳ್ಳಿ ಜಯಪ್ಪ, ರಾಜಣ್ಣ, ವೆಂಕಟೇಶ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಫಾತರಾಜನ್ ನಗರಾಭೀವೃದ್ದಿ ಪ್ರಾಧಿಕಾರದ ಸದಸ್ಯೆ ರೇಖಾ, ಮಾರುತಿ, ಮುಖಂಡರು ಹಾಜರಿದ್ದರು.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ: ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಯಥೇಚ್ಛವಾಗಿ ಬಳಸಲಾಗುತ್ತಿದೆ. ಹಾಗೆಯೇ ತಂಬಾಕಿನ ಸೇವನೆಯೂ ಕೂಡ ಅಧಿಕವಾಗಿದೆ. ಮಾಧ್ಯಮಗಳು ಹಾಗೂ ಜಾಹೀರಾತುಗಳ ಪ್ರಭಾವದಿಂದಲೇ ಯುವಜನತೆ ಈ ವ್ಯಸನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಬಸವೇಶ್ವರ ವೈದ್ಯಕೀಯ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್27) : ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಇದೇ ಅಕ್ಟೋಬರ್ 28ರಂದು ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಸುಗಮ ಮತದಾನಕ್ಕಾಗಿ 32 ಮತಗಟ್ಟೆಗಳನ್ನು ಜಿಲ್ಲೆಯಾದ್ಯಂತ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯ 2021 – 22ನೇ ಸಾಲಿಗೆ ಆರನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್27) : ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶದಲ್ಲಿ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್27): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 83 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,056ಕ್ಕೆ ಏರಿಕೆಯಾಗಿದ್ದು, ಇಬ್ಬರು ಮೃತಪಟ್ಟ ಪ್ರಕರಣ ವರದಿಯಾಗಿದೆ. ಜಿಲ್ಲೆಯ...

ಪ್ರಮುಖ ಸುದ್ದಿ

ಚಿತ್ರದುರ್ಗ: ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಶಿರಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯ ಬಿಜೆಪಿ.ಅಭ್ಯರ್ಥಿಗೆ ಬೆಂಬಲ ಸೂಚಿಸಲಿದೆ ಎಂದು ಮೀಸೆ ಮಹಾಲಿಂಗಪ್ಪ ಹೇಳಿರುವುದನ್ನು ಕೆ.ಪಿ.ಸಿ.ಸಿ. ಮಾಧ್ಯಮ ವಿಶ್ಲೇಷಕ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ತೀವ್ರವಾಗಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಶರಣರು ಕಾಯಕ ತತ್ತ್ವಕ್ಕೆ, ಅಭಿವೃದ್ಧಿಗೆ ಒತ್ತಾಸೆ ನೀಡಿ ಕಲ್ಯಾಣ ರಾಜ್ಯ ಸ್ಥಾಪನೆ ಮಾಡಿದರು. ವ್ಯಷ್ಟಿ ಕಲ್ಯಾಣ ಲೋಕ ಕಲ್ಯಾಣದಿಂದ ಸಮಗ್ರ ಕಲ್ಯಾಣವನ್ನು ಮಾಡಿದರು. ಉತ್ಪಾದನೆ ಜೊತೆಗೆ ವಿತರಣೆ, ಕಾಯಕದ ಜೊತೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್. 27) : ಐತಿಹಾಸಿಕ ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಮುರುಘಾಮಠದಲ್ಲಿ ಕಳೆದ ವರ್ಷ ಅಕ್ಟೋಬರ್ 22ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಸರಳ ಶರಣ ಸಂಸ್ಕøತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು....

ದಿನ ಭವಿಷ್ಯ

ಪಾಶಾಂಕುಶಾ ಏಕಾದಶಿ ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಏಕಾದಶೀ – 10:46 ವರೆಗೆ ನಕ್ಷತ್ರ: ಶತಭಿಷ – 06:36 ವರೆಗೆ ಯೋಗ: ಧ್ರುವ –...