Connect with us

Hi, what are you looking for?

ಪ್ರಮುಖ ಸುದ್ದಿ

ಗೊಂದಲದ ಗೂಡಾದ ರಜನಿ ನಿವಾಸ ಮತ್ತು ರಾಜಕೀಯ ಪ್ರವೇಶ

ಚೆನ್ನೈ : ರಜನಿಕಾಂತ್ ಅವರ ರಾಜಕೀಯ ಪ್ರವೇಶ ಮೊದಲಿನಿಂದಲೂ ಗೊಂದಲದಲ್ಲಿದೆ. ರಜನಿಕಾಂತ್ ಅವರು ಗುರುವಾರ ಮಾಡಿದ ಟ್ವೀಟ್ ನ ನಂತರ ಮತ್ತಷ್ಟು ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಶುಕ್ರವಾರ ರಜನಿಕಾಂತ್ ಚೆನೈ ನ ಪೋಯಸ್ ಗಾರ್ಡನ್ ನಿವಾಸದ ಮುಂದೆ ದೌಡಾಯಿಸಿದ್ದಾರೆ.

ರಜನಿಕಾಂತ್ ರಾಜಕೀಯಕ್ಕೆ ಬರಬೇಕು ಎಂದು ಘೋಷಣೆಗಳನ್ನು ಕೂಗಿದರು. ಪಕ್ಷದಲ್ಲಿ ಕೆಲವು ಬದಲಾವಣೆಗಳು ಮತ್ತು ಸದಸ್ಯತ್ವ ನೋಂದಣಿ ಮಾಡುವ ಮೂಲಕ ಅಭಿಮಾನಿಗಳು ಪಕ್ಷವನ್ನು ಮತ್ತಷ್ಟು ಬಲಪಡಿಸಿದ್ದಾರೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ರಚನೆಯ ಬಗ್ಗೆ ಸಂದಿಗ್ಧತೆಯನ್ನು ಎದುರಿಸುತ್ತಿದ್ದೇನೆ ಎಂದು ಗುರುವಾರ ರಜನಿ ನೀಡಿದ ಹೇಳಿಕೆ ಅಭಿಮಾನಿಗಳನ್ನು ತೀವ್ರ ನಿರಾಶೆಗೊಳಿಸಿದೆ. ಇದರೊಂದಿಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಅಭಿಮಾನಿಗಳು ರಜನಿಕಾಂತ್ ಅವರನ್ನು ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ರಜನಿಕಾಂತ್ ಅವರ ಪಕ್ಷವಾದ ಮಕ್ಕಲ್ ಮನ್ರಾಮ್ ಚೆನ್ನೈನ ಎಗ್ಮೋರ್ ಶಾಖೆಯ ಉಪ ಕಾರ್ಯದರ್ಶಿ ಕೆ. ರಜನಿ ಅವರು ಮಾತನಾಡುತ್ತಾ, ಉಪವಾಸ ಸತ್ಯಾಗ್ರಹ ನಡೆಸಿಯಾದರೂ ಸರಿ, ಅವರಿಂದ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಹೇಳಿದರು. ರಜನಿಕಾಂತ್ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಸರ್ಕಾರ ಬದಲಾಗುತ್ತದೆ, ರಾಜಕೀಯ ಬದಲಾಗುತ್ತದೆ ಎಂಬ ಘೋಷಣೆ ಹೊಂದಿದ ಬನಿಯನ್ ಗಳನ್ನು ಧರಿಸಿದ್ದರು.

ನಿಮ್ಮ ಆರೋಗ್ಯ ಮತ್ತು ಸಂತೋಷವು ನಮಗೆ ಬಹಳ ಮುಖ್ಯವಾದುದು ಮತ್ತು ಅವುಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀವು ತೆಗೆದುಕೊಳ್ಳುವ ನಿಮ್ಮ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾದ ನಟಿ ಖುಷ್ಬೂ,
ಹೇಳಿದ್ದಾರೆ.

ರಾಜಕೀಯ ನಿರ್ಧಾರವನ್ನು ಶೀಘ್ರದಲ್ಲೇ ಅಭಿಮಾನಿಗಳಿಗೆ ಪ್ರಕಟಿಸಲಾಗುವುದು ಎಂದು ಚೆನ್ನೈ ಕಾರ್ಪೊರೇಶನ್‌ನ ಮಾಜಿ ಮೇಯರ್ ಕರಾಟೆ ತ್ಯಾಗರಾಜನ್ ಹೇಳಿದ್ದಾರೆ. ಈ ಮಧ್ಯೆ ಮತ್ತೊಂದು ಹೊಸ ಅನಧಿಕೃತ ಮಾಹಿತಿಯು ಚಲಾವಣೆಗೆ ಬಂದಿದೆ. ಅಭಿಮಾನಿಗಳ ತೀವ್ರ ಅಸಮಾಧಾನದಿಂದಾಗಿ ರಜನಿಕಾಂತ್ ತಮ್ಮ ಮನಸ್ಸು ಬದಲಾಯಿಸಿದ್ದಾರೆ. ಮುಂದಿನ ತಿಂಗಳು ಮಕ್ಕಲ್ ಮನ್ರಾಮ್ ಪಕ್ಷದ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಇವುಗಳಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬ ಚರ್ಚೆ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಚಳಿಗಾಲ ಆರಂಬವಾಗಿರುವ ಹಿನ್ನೆಲೆ ಇದು ಇನ್ನೂ ವಿಪರೀತವಾಗಲಿದೆ. ಹೀಗಾಗಿ ಸೋನಿಯಾಗಾಂಧಿ ಅವರನ್ನು ಕೆಲ ದಿನಗಳ ಕಾಲ ಇತರೆ ನಗರಗಳಿಗೆ ಸ್ಥಳಾಂತರಿಸುವಂತೆ ವೈದ್ಯರು...

ಪ್ರಮುಖ ಸುದ್ದಿ

ಚೆನ್ನೈ : ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ ಸೆಪ್ಟೆಂಬರ್‌ನಲ್ಲಿ ಬಿಹಾರ ಮೂಲದ ಫಿಸಿಯೋಥೆರಪಿಸ್ಟ್ ನೊಂದಿಗೆ ರಹಸ್ಯವಾಗಿ ಮುಂಬೈನ ಅವರ ನಿವಾಸದಲ್ಲಿ ಮರುಮದುವೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಪ್ರಭುದೇವ ಅವರ ಆಪ್ತರೊಬ್ಬರು ಇದನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ....

ಪ್ರಮುಖ ಸುದ್ದಿ

ಚೆನ್ನೈ: ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಇದ್ದ ಕಾರು ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಮೆಲ್ಮರುವಾತ್ತೂರ್ ಬಳಿ ಈ ಘಟನೆ ನಡೆದಿದೆ. ಖುಷ್ಬೂ ಅವರಿದ್ದ ಕಾರಿಗೆ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ...

ಪ್ರಮುಖ ಸುದ್ದಿ

ಚೆನ್ನೈ: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿರುಧುನಗರ ಜಿಲ್ಲೆಯ ಗಡಿಯಲ್ಲಿರುವ ಮುರುಗನೇರಿ ಪ್ರದೇಶದ ಪಟಾಕಿ...

ಪ್ರಮುಖ ಸುದ್ದಿ

ಚೆನ್ನೈ : ಇದು ಕಾಲಿವುಡ್ ಚಿತ್ರದ ಕಥೆಯಲ್ಲ ಬದಲಾಗಿ ತಮಿಳುನಾಡಿನಲ್ಲಿ ನಡೆದ ಘಟನೆ. ರಾಜಕಾರಣಿ ಶಾಸಕ, ಬಿಎ ವಿದ್ಯಾರ್ಥಿನಿ ಇವರಿಬ್ಬರ ಪ್ರೀತಿ ಪ್ರೇಮ, ಜಾತಿ ಭೇದ, ವಿದ್ಯಾರ್ಥಿನಿ ತಂದೆಯ ವಿರೋಧ ಮತ್ತು ಆತ್ಮಹತ್ಯೆ...

ಪ್ರಮುಖ ಸುದ್ದಿ

ಚೆನ್ನೈ, ಸುದ್ದಿಒನ್, (ಸೆ.26): ಗಾನನಂಧರ್ವ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕಣ್ಣೀರಿನ ವಿದಾಯದೊಂದಿಗೆ ಚೆನ್ನೈ ಬಳಿಯ ತಾಮರೈಪಕ್ಕಂ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಭೂಮಿ ಬಣ್ಣದ ಬುಗರಿ, ಆ ಶಿವನೇ ಚಾಟಿ ಕಣೋ,...

ಪ್ರಮುಖ ಸುದ್ದಿ

ಬೆಂಗಳೂರು, (ಸೆ.25) : ಸಂಗೀತ ಲೋಕದ ದೈತ್ಯ ಪ್ರತಿಭೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಸಂಗೀತ ಪ್ರಿಯರಿಗೆ ತೀವ್ರ ಆಘಾತವಾಗಿದೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪೂರ್ತಿ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಜೂನ್ 4,...

ಪ್ರಮುಖ ಸುದ್ದಿ

ಚೆನ್ನೈ , (ಸೆ.25):  ಗಾಂಧರ್ವ ಎಸ್ಪಿ ಬಾಲಸುಬ್ರಮಣ್ಯಂ (74) ಶುಕ್ರವಾರ ಮಧ್ಯಾನ್ಹ 1 : 04 ನಿಮಿಷಕ್ಕೆ ವಿಧಿವಶರಾದರು. ಅವರು ಗುರುವಾರ ರಾತ್ರಿಯಿಂದ ಉಸಿರಾಡಲು ತೀವ್ರ ತೊಂದರೆ ಅನುಭವಿಸಿದರು. ಮತ್ತು ಶುಕ್ರವಾರ ಮಧ್ಯಾಹ್ನ ವೆಂಟಿಲೇಟರ್‌ನಲ್ಲಿ...

ಪ್ರಮುಖ ಸುದ್ದಿ

ಚೆನ್ನೈ, ಸುದ್ದಿಒನ್, (ಸೆ.24): ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣಿಯನ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕರೋನಾದಿಂದ ಚೇತರಿಸಿಕೊಂಡ ನಂತರ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 40 ದಿನಗಳಿಂದ ಚೆನ್ನೈನ...

error: Content is protected !!