Connect with us

Hi, what are you looking for?

ಪ್ರಮುಖ ಸುದ್ದಿ

ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಲು ಬಿಜೆಪಿಯ ಕೆಲವು ಮುಖಂಡರೇ ಕಾರಣ: ಡಾ.ಹಾಲನೂರ್ ಎಸ್.ಲೇಪಾಕ್ಷ ಅರೋಪ

ಚಿತ್ರದುರ್ಗ (ಅ. 23) : ಆಗ್ನೇಯ ಪದವೀಧರ ಚುನಾವಣೆಯಲ್ಲಿ ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಲು ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ನಾರಾಯಣಸ್ವಾಮಿ ಕಾರಣರಾಗಿದ್ದಾರೆ ಎಂದು ಬಿಜೆಪಿ ಭಂಡಾಯ ಅಭ್ಯರ್ಥಿ ಡಾ.ಹಾಲನೂರ್ ಎಸ್.ಲೇಪಾಕ್ಷ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2018ರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನನಗೆ ಟಿಕೇಟ್ ಸಿಕ್ಕಿದ್ದು ಬಿಫಾರಂ ಸಹಾ ನೀಡಿದ ಅಂದು ರಾಜ್ಯಾಧ್ಯಕ್ಷರಾಗಿದ್ದ ಇಂದಿನ ಮುಖ್ಯಮಂತ್ರಿ ಬಿ.ಎಸ್.ಯಡೆಯ್ಯೂರಪ್ಪ ಕೂನೆಯ ಸಮಯದಲ್ಲಿ ನಾರಯಣಸ್ವಾಮಿ ಶಾಸಕರ ಚುನಾವಣೆಯಲ್ಲಿ ಸೊತ್ತಿದು ಅವರಿಗೆ ಅಧಿಕಾರ ಬೇಕಿತ್ತು ಇದಕ್ಕೆ ಯಡೆಯೂರಪ್ಪರವರ ಬಳಿ ಕುಂತಂತ್ರವನ್ನು ಮಾಡುವುದರ ಮೂಲಕ ನನಗೆ ಸಿಕ್ಕದ್ದ ಟಿಕೇಟ್‍ನ್ನು ಪಡೆದುಕೊಂಡು ಮುಂಬರುವ ಪದವೀಧರ ಚುನಾವಣೆಗೆ ನಿಮಗೆ ಟಿಕೇಟ್ ನೀಡುವ ಭರವಸೆಯನ್ನು ನೀಡುವುದರ ಮೂಲಕ ಶಿಕ್ಷಕರ ಕ್ಷೇತ್ರದ ಟೀಕೆಟ್ ಪಡೆದುಕೊಂಡು ಚುನಾವಣೆಯಲ್ಲಿ ಜಯಗಳಿಸಿದರು.

ಇದಾದ ನಂತರ ನಾನು ಪದವೀಧರ ಚುನಾವಣೆಗೆ ಸ್ಪರ್ದೆ ಮಾಡುವುದು ಖಚಿತವಾದ ಹಿನ್ನಲೆಯಲ್ಲಿ ಮತದಾರರ ಹೆಸರನ್ನು ನೊಂದಾವಣೆಯನ್ನು ಮಾಡಿಸುವುದರ ಮೂಲಕ ಕ್ಷೇತ್ರವಾರು ಪ್ರವಾಸವನ್ನು ಮಾಡುವುದರ ಮೂಲಕ ಮತದಾರರನ್ನು ಬೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸುವ ಕಾರ್ಯವನ್ನು ಮಾಡಿದ್ದೆ, ಇದಾದ ನಂತರ ಚುನಾವಣೆ ಘೋಷಣೆಯಾಯಿತು, ಪಕ್ಷವೂ ಸಹಾ ನನಗೆ ಟಿಕೇಟ್ ನೀಡುವ ಭರವಸೆಯನ್ನು ಪಕ್ಷದ ಮುಖಂಡರಿಗೆ ತಿಳಿಸಿದಾಗ ಆಗ ಭರವಸೆಯನ್ನು ನೀಡಿದ ಪಕ್ಷದ ಮುಖಂಡರು, ಸ್ವಲ್ಪ ಸಮಯದ ನಂತರ ನಾರಾಯಣ ಸ್ವಾಮಿರವರು ತಮ್ಮ ಸ್ವಜಾತಿಯ ವ್ಯಕ್ತಿಯಾದ ಚಿದಾನಂದ ಗೌಡರವನ್ನು ಜೆಡಿಎಸ್‍ನಿಂದ ನಮ್ಮ ಪಕ್ಷಕ್ಕೆ ಕರೆ ತರುವುದರ ಮೂಲಕ ಪಕ್ಷದ ಮೇಲೆ ಒತ್ತಡವನ್ನು ತರುವುದರ ಮೂಲಕ ಅವರಿಗೆ ಟಿಕೇಟ್ ಕೂಡಿಸುವಲ್ಲಿ ಯಶಸ್ವಿಯಾದರು ಎಂದರು.

ಚಿದಾನಂದ ಗೌಡರವರು ಜೆಡಿಎಸ್‍ನಲ್ಲಿದ್ದು, ಬಿಜೆಪಿ ಪಕ್ಷವನ್ನು ಕೋಮವಾದಿ ಪಕ್ಷ, ಯಡೆಯ್ಯೂರಪ್ಪ ಭ್ರಷ್ಠ ರಾಜಕಾರಣಿ ಎಂದು ಬಹಿರಂಗವಾಗಿ ಹೇಳುವುದರ ಮೂಲಕ ಅವರ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಎಬಿವಿಪಿ ಕಾರ್ಯುಕರ್ತರು ಹೋದಾಗ ಅವರನ್ನು ಒಳಗಡೆ ಬಿಡದೇ ಹೊರ ಹಾಕಿದ್ದು ಇದೇ ಚಿದಾನಂದಗೌಡ, ಇದರ ಬಗ್ಗೆ ತಿಳಿದಿದ್ದರು ಸಹಾ ನಾರಾಯಣ ಸ್ವಾಮಿ ಹಾಗೂ ಕೇಂದ್ರ ಸಚಿವ ಸದಾನಂದ ಗೌಡರವರು ತಮ್ಮ ಸ್ವಜಾತಿಯ ವ್ಯಕ್ತಿಗೆ ಪಕ್ಷದಿಂದ ಟೀಕೇಟ್ ಕೂಡಿಸಿದ್ದಾರೆ. ಅಂದು ನಾನು ಮಾಡಿದ ತ್ಯಾಗವನ್ನು ಸ್ಮರಣೆ ಮಾಡದ ನಾರಾಯಣಸ್ವಾಮಿ ಈ ಬಾರಿ ನನಗೆ ಟೀಕೇಟ್ ತಪ್ಪಿಸಿದ್ದಾರೆ ಎಂದು ಅವರ ಮೇಲೆ ಲೇಪಾಕ್ಷಿ ಕಿಡಿ ಕಾರಿದರು.

ಈ ಚುನಾವಣೆಯಲ್ಲಿ ಮತದಾರರು ನನಗೆ ಬೆಂಬಲವಾಗಿ ನಿಂತಿದ್ದಾರೆ, ಶಿಕ್ಷಕನಾಗಿ ಉಪನ್ಯಾಸಕನಾಗಿ ಅವರ ಸಮಸ್ಯೆಗಳ ಅರಿವು ನನಗೆ ಇದೆ ಈ ಕ್ಷೇತ್ರದಿಂದ ಆಯ್ಕೆಯಾದವರು ಬರೀ ಭರವಸೆಯನ್ನು ನೀಡಿದ್ಧಾರೆ ಹೊರೆತು ಈಡೇರಿಸುವ ಕಾರ್ಯವನ್ನು ಮಾಡಿಲ್ಲ, ಮತದಾರರು ಈ ಬಾರಿ ನನ್ನ ಕೈಹಿಡಿದರೆ ಪದವೀಧರ ಸಮಸ್ಯೆಗಳ ಬಗ್ಗೆ ಗಮನ ನೀಡುವುದರ ಮೂಲಕ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಗೋಷ್ಟಿಯಲ್ಲಿ ನ್ಯಾಯವಾದಿಗಳಾದ ವಿಜಯಕುಮಾರ್, ಶ್ರೀಮತಿ ವೀಣಾ, ಗಿರೀಶ್,ಶ್ರೀಶೈಲಾ, ನಂದೀಶ್ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್24):ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 64 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,399 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಲಕ್ನೋ : ಉತ್ತರಪ್ರದೇಶದ ಸರ್ಕಾರ “ಲವ್ ಜಿಹಾದ್” ವಿರುದ್ಧ ಕಾನೂನನ್ನೇ ರೂಪಿಸಲು ಮುಂದಾಗಿದೆ. ಆದರೆ, ಉತ್ತರಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯ ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ...

ಪ್ರಮುಖ ಸುದ್ದಿ

ಚಿತ್ರದುರ್ಗ, (ನ.24) : ಕೆಲ ದಿನಗಳಿಂದ ತಾಲೂಕಿನ ಸಿರಿಗೆರೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಮಂಗಳವಾರ ಬೋನಿಗೆ ಬಿದ್ದಿದೆ. ಸಿರಿಗೆರೆ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಗ್ರಾಮಸ್ಥರು...

ಪ್ರಮುಖ ಸುದ್ದಿ

ಚಳ್ಳಕೆರೆ :ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ಚಳ್ಳಕೆರೆ ಪೊಲೀಸರು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ನೆಹರು ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಜನತಾ ಕಾಲೋನಿಯ ಲೇಟ್ ಹನುಮಂತಪ್ಪ ಅವರ ಮಗನಾದ ಮಾನಸಿಕ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ನವೆಂಬರ್-24,2020 ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ದಶಮೀ – 26:41+ ವರೆಗೆ ನಕ್ಷತ್ರ: ಪೂರ್ವಾ ಭಾದ್ರ – 15:32 ವರೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ವ್ಯಕ್ತಿಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಲೇಶ (32) ಆರೋಗ್ಯ ಸರಿಯಿಲ್ಲದ್ದಕ್ಕೆ ನೊಂದು ಸೋಮವಾರ ಮನೆಯಲ್ಲೇ ನೇಣು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು. ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ...

ಪ್ರಮುಖ ಸುದ್ದಿ

ಚಿತ್ರದುರ್ಗ : ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‍ನಲ್ಲಿ ಪಿಡಿಒ ಹಾಗೂ ಇಂಜಿನಿಯರ್‍ಗಳ ಭೇಟಿ ದಿನಾಂಕ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

error: Content is protected !!