Connect with us

Hi, what are you looking for?

ಪ್ರಮುಖ ಸುದ್ದಿ

ಯತ್ನಾಳ್ ಗೆ ಮಾನಸಿಕ ಕಾಯಿಲೆ, ಶಿವಮೊಗ್ಗಕ್ಕೆ ಬಂದ್ರೆ ಚಿಕಿತ್ಸೆ ಕೊಡಿಸುವೆ : ಆಯನೂರು ಮಂಜುನಾಥ್

ಶಿವಮೊಗ್ಗ, (ಅ.31) : ಬಿಜೆಪಿ ಪಕ್ಷದಲ್ಲೇ ಇದ್ದು ಅದೇ ಪಕ್ಷದ ಸಿಎಂ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಮಾತನಾಡಿದ್ರು. ಅವರು ಸಿಎಂ ಸ್ಥಾನದಿಂದ ಬೇಗ ಕೆಳಗಿಳಿಯುತ್ತಾರೆ ಎಂಬ ರೀತಿ ಹರಿಹಾಯ್ದಿದ್ದರು. ಆ ಮಾತಿಗೆ ಗರಂ ಆಗಿರುವ ಎಂಎಲ್ಸಿ ಮಂಜುನಾಥ್ ಅವರಿಗೆ ಆತ್ಮರತಿ ಕಾಯಿಲೆ ಇದೆ ಎಂದಿದ್ದಾರೆ.

ಯತ್ನಾಳ್ ಗೆ ಯಾವಾಗ ರಾಜಕೀಯವಾಗಿ ಅಭದ್ರತೆ ಕಾಡುತ್ತೋ ಆಗ ಇಂತಹ ಹೇಳಿಕೆಯನ್ನು ನೀಡುತ್ತಾರೆ. ತಾವು ಕಳೆದು ಹೋಗುತ್ತಿದ್ದೇನೆ ಅನಿಸುತ್ತೋ ಆಗ ಇಂತಹ ಅಸಂಬದ್ಧ ಮತ್ತು ಅಸಂದರ್ಭಿಕ ಮಾತುಗಳನ್ನು ಆಡುತ್ತಾರೆ. ಕಾಯಿಲೆಗಳಲ್ಲಿ ಆತ್ಮರತಿ ಎಂಬ ಕಾಯಿಲೆ ಇದೆ. ಇದು ಯತ್ನಾಳ್ ಗೆ ಬಂದಿದೆ. ತನ್ನನ್ನು ತಾನು ವೈಭವಿಕರಿಸಿಕೊಂಡು ಹೇಳಿಕೆ ನೀಡುವ ಖಾಯಿಲೆ ಯತ್ನಾಳ್ ಗೆ ಇದೆ ಅಂತ ಆಯನೂರು ಮಂಜುನಾಥ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯತ್ನಾಳ್ ಮತ್ತು ನಾನು ಆತ್ಮೀಯ ಸ್ನೇಹಿತರು. ಆದರೆ, ಅವರಿಗಿರುವ ಮಾನಸಿಕ ಖಾಯಿಲೆ ಅವರಿಗೆ ಅಪಾಯಕಾರಿಯಾಗಿದೆ. ಸ್ನೇಹಿತನ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ, ಅವರಿಗೆ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಅವರು ಶಿವಮೊಗ್ಗಕ್ಕೆ ಆದಷ್ಟು ಬೇಗನೆ ಬರಲಿ ಎಂದು ಆಹ್ವಾನಿಸುತ್ತೇನೆ. ನಮ್ಮಲ್ಲಿ ಮೂರ್ನಾಲ್ಕು ಜನ ಒಳ್ಳೆಯ ವೈದ್ಯರಿದ್ದಾರೆ, ಇಲ್ಲಿ ಚಿಕಿತ್ಸೆ ಕೊಡಿಸುತ್ತೇನೆ ಎಂದರು.

ನನ್ನ ಜೊತೆ ಅವರು ಇನ್ನಷ್ಟು ದಿನ ಇರಬೇಕು. ಆತ್ಮರತಿಯ ರೋಗದಿಂದ ನರಳುತ್ತಿರುವ ಮಾನಸಿಕ ಖಾಯಿಲೆಯಿಂದ ಹೊರತರಲು ಚಿಕಿತ್ಸೆ ಅಗತ್ಯವಿದೆ. ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೇ, ಪಕ್ಷದ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಚುನಾವಣೆ ಬಳಿಕ ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸುತ್ತದೆ ಎಂದು ತಿಳಿಸಿದರು.

ಬಿಎಸ್ ಯಡಿಯೂರಪ್ಪ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ, ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಧಾನಿ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ ಎಂದು ಬಸನಗೌಡ ಯತ್ನಾಳ್ ತಿಳಿಸಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಕಾರ್ಯುದರ್ಶಿ ಸಿ ಟಿ ರವಿ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಎಚ್ಚರಿಕೆ ನೀಡಿದ್ದಾರೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ವಿಷಯದಲ್ಲಿ ಹೈಕಮಾಂಡ್ ಸುಮ್ಮನೆ ಕುಳಿತಿಲ್ಲ. ಮಾಧ್ಯಮಗಳಲ್ಲಿ...

ಪ್ರಮುಖ ಸುದ್ದಿ

ಶಿವಮೊಗ್ಗ : ಎಲ್ಲ ಸಮೀಕ್ಷೆಗಳು ಉಲ್ಟಾ ಆಗಲಿದ್ದು, ಎರಡು ಕ್ಷೇತ್ರಗಳಲ್ಲೂ ನಾವೇ ಗೆಲ್ಲೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು. ನಗರದಲ್ಲಿ ಭಾನುವಾರ ಮಾತನಾಡಿ, ಆರ್.ಆರ್.ನಗರ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು...

ಪ್ರಮುಖ ಸುದ್ದಿ

ಚಿತ್ರದುರ್ಗ, (ನ.07) : ಅನಾರೋಗ್ಯದಿಂದ ಬಳಲುತ್ತಿರುವ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎಂ.ಜಯಣ್ಣ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಶನಿವಾರ ಸಂಗೋಳ್ಳಿ ರಾಯಣ್ಣ ಸೇನೆ...

ಪ್ರಮುಖ ಸುದ್ದಿ

ಬೆಂಗಳೂರು, (ನ.04): ಬಾಲಿವುಡ್ ನಟ ಫರಾಜ್ ಖಾನ್ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಟಿ ಪೂಜಾ ಭಟ್ ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಫರಾಜ್ ಖಾನ್, 90ರ...

ಪ್ರಮುಖ ಸುದ್ದಿ

ಚೆನ್ನೈ : ಅಣ್ಣಾಡಿಎಂಕೆ ಪಕ್ಷದ ಕಳ್ಳಕುರಿಚಿ ಕ್ಷೇತ್ರದ ಶಾಸಕ ಪ್ರಭು (34) ಅವರು ನಿನ್ನೆಯಷ್ಟೇ (ಸೋಮವಾರ) ಪ್ರೇಮ ವಿವಾಹವಾಗಿದ್ದರು. ಇದೀಗ ವಿವಾದಕ್ಕೆ ಕಾರಣವಾಗಿದೆ. ಶಾಸಕ ಪ್ರಭು ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ...

ಪ್ರಮುಖ ಸುದ್ದಿ

ಚೆನ್ನೈ : ಇದು ಕಾಲಿವುಡ್ ಚಿತ್ರದ ಕಥೆಯಲ್ಲ ಬದಲಾಗಿ ತಮಿಳುನಾಡಿನಲ್ಲಿ ನಡೆದ ಘಟನೆ. ರಾಜಕಾರಣಿ ಶಾಸಕ, ಬಿಎ ವಿದ್ಯಾರ್ಥಿನಿ ಇವರಿಬ್ಬರ ಪ್ರೀತಿ ಪ್ರೇಮ, ಜಾತಿ ಭೇದ, ವಿದ್ಯಾರ್ಥಿನಿ ತಂದೆಯ ವಿರೋಧ ಮತ್ತು ಆತ್ಮಹತ್ಯೆ...

ಪ್ರಮುಖ ಸುದ್ದಿ

ಚಿತ್ರದುರ್ಗ: ಕರೊನಾ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಸೋಂಕಿಗೆ ಒಳಗಾಗದ ನೌಕರರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ರಾಜ್ಯ ಸರ್ಕಾರ ಆದೇಶಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಚಿತ್ರದುರ್ಗ ಸಂಘ ಅಭಿನಂದನೆ ಸಲ್ಲಿಸಿದೆ. ಕರ್ನಾಟಕ ರಾಜ್ಯ...

ಪ್ರಮುಖ ಸುದ್ದಿ

ಚಿತ್ರದುರ್ಗ : ರಸ್ತೆ ರಾಜ ಶಾಸಕ ಎಂ.ಚಂದ್ರಪ್ಪ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಾದ, ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ನವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ...

error: Content is protected !!