Connect with us

Hi, what are you looking for?

ಪ್ರಮುಖ ಸುದ್ದಿ

ಹೆಚ್‍ಎಎಲ್‍ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ, (ಅಕ್ಟೋಬರ್.16) : ಹೆಚ್‍ಎಎಲ್‍ನಲ್ಲಿ (HINDHUSTAN AERONUTICS LTD) CNC programmer cum Operator, Eletrician, Welder and Computer Operator and programming Assistant  ಟ್ರೇಡ್‍ಗೆ ಸಂಬಂಧಪಟ್ಟ ಫೂಲ್ ಟರ್ಮ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 09 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ, ಗರಿಷ್ಠ 18 ವರ್ಷ (ದಿನಾಂಕ:01-11-2020ರಂದು ಇದ್ದಂತೆ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಡತನ ರೇಖೆಗಿಂತ ಕಡಿಮೆ ಇರುವ (ಅಭ್ಯರ್ಥಿಯ ಹೆಸರು ಬಿಪಿಎಲ್, ಅಂತ್ಯೋದಯ ಕಾರ್ಡ್‍ನಲ್ಲಿ ಹೆಸರಿರಬೇಕು) ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ವಿದ್ಯಾರ್ಹತೆ: ಎಸ್‍ಎಸ್‍ಎಲ್‍ಸಿಯಲ್ಲಿ ಸಾಮಾನ್ಯ ವರ್ಗ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಟ ಶೇ.60 ಅಂಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ.50 ಅಂಕ ಪಡೆದಿರಬೇಕು.

ಅಗತ್ಯ ದಾಖಲೆಗಳು: ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಅಂಗವಿಕಲತೆ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ , ಬಿ.ಪಿ.ಎಲ್, ಅಂತ್ಯೋದಯ ಕಾರ್ಡ್ ಇತ್ಯಾದಿ ದಾಖಲಾತಿಗಳೊಂದಿಗೆ ನವೆಂಬರ್ 9ರೊಳಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಚಿತ್ರದುರ್ಗ ಇಲ್ಲಿ ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ಕಚೇರಿ, ಚಿತ್ರದುರ್ಗ ಹಾಗೂ ದೂರವಾಣಿ ಸಂಖ್ಯೆ 08194-230485, 9945587060, 7022459064, 8105619020 ಗೆ ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಮೈಸೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರಿನ ಪಬ್ಲಿಕ್ ಟಿವಿ ಹಿರಿಯ ವರದಿಗಾರ ಕೆ.ಪಿ.ನಾಗರಾಜ್ ಅವರನ್ನು ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಆಯ್ಕೆ ಮಾಡಿದೆ. ಮೂಲತಃ ಚಿತ್ರದುರ್ಗದವರಾದ ಕೆ.ಪಿ.ನಾಗರಾಜ್ ಪಿಯುಸಿವರೆಗೂ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಅಂದು ಕೊಂಡಿದ್ದನ್ನು ಸಾಧಿಸುವ ಸದೃಢ ಛಲದ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಒಮ್ಮೆ ನಿರ್ಧರಿಸಿದರೆ ಮುಗಿಯಿತು, ನಿರ್ಧಾರ ಫಲಿತಾಂಶವಾಗುವ ತನಕ ವಿರಮಿಸುವುದಿಲ್ಲ. ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅದಕ್ಕೆ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಜಿಲ್ಲೆಯ ಹಿರಿಯ ಪತ್ರಕರ್ತ, ಕನ್ನಡಪ್ರಭ ಜಿಲ್ಲಾ ವರದಿಗಾರರಾದ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ಮತ್ತು ಹವ್ಯಾಸಿ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ, ರಂಗಭೂಮಿ ಕಲಾವಿದ ಹೆಚ್.ಟಿ.ಸಿದ್ದನಾಯಕ, ಮರಗಾಲು ಕುಣಿತದ ಜಿ.ಗಿರೀಶ್ ಸೇರಿದಂತೆ 12 ಮಂದಿ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶನಿವಾರದ ವರದಿಯಲ್ಲಿ 38 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,342 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ...

ಪ್ರಮುಖ ಸುದ್ದಿ

ಚಿತ್ರದುರ್ಗ: ಸಣ್ಣ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ಪ್ರಜಾಪ್ರಭುತ್ವದಡಿಯಲ್ಲಿ ತಂದವರು ಭಾರತದ ಮೊದಲ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು....

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31) : ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ಮನೋಹರ ದರ್ಶನ ಹೆಚ್.ಡಿ(40) ಇಂದು(ಶನಿವಾರ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಅಕ್ಕ, ಅಣ್ಣ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ....

ಪ್ರಮುಖ ಸುದ್ದಿ

ರಾಮಾಯಣ ಮತ್ತು ವಾಲ್ಮೀಕಿ ಖಾಸಗಿ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಆರಾಧನಾಭಾವ ಮೂಡಿಸಿರುವುದು ಸಂತೋಷ ಮತ್ತು ಆತಂಕದ ವಿಷಯ. ರಾಮಾಯಣವನ್ನು ಕುರಿತು ಮಾತನಾಡುವಾಗ ಪೂರ್ವಗ್ರಹದಿಂದ ಮಾತಾಡಿದರೂ ವಸ್ತುನಿಷ್ಠವಾಗಿ ಮಾತಾಡಿದರೂ ತಪ್ಪೆನ್ನುವಂತೆ ಖಾಸಗಿಯಾಗಿ ಭಾವಿಸಿಕೊಳ್ಳುತ್ತಿರುವುದು. ರಾಮಾಯಣದ...

ದಿನ ಭವಿಷ್ಯ

ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-31,2020 ಅಶ್ವಿನಿ ಪೂರ್ಣಿಮಾ ಸೂರ್ಯೋದಯ: 06:16, ಸೂರ್ಯಸ್ತ: 17:49 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಹುಣ್ಣಿಮೆ – 20:18 ವರೆಗೆ ನಕ್ಷತ್ರ: ಅಶ್ವಿನಿ – 17:58 ವರೆಗೆ...