Connect with us

Hi, what are you looking for?

ಪ್ರಮುಖ ಸುದ್ದಿ

ಅಖಂಡ ಭಾರಿ ನೋವಲ್ಲಿದ್ದಾರೆ, ನ್ಯಾಯ ಒದಗಿಸಿ ಕೊಡುತ್ತೇನೆ: ಡಿಕೆಶಿ

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೆಟಿ ಮಾಡಿದ್ದಾರೆ. ಸದಾಶಿವನಗರದ ಮನೆಯಲ್ಲಿ ಭೆಟಿ ಮಾಡಿ, ಸಂಪತ್ ರಾಜ್ ಬಗ್ಗೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅಖಂಡ ಭೇಟಿ ನಂತರ ಮಾತನಾಡಿರುವ ಡಿ ಕೆ ಶಿವಕುಮಾರ್, ಅಖಂಡ ನೋವು ನನಗೆ ಅರ್ಥ ಆಗುತ್ತೆ. ಕೆಲವೊಂದು ವಿಷಯ ಹೇಳಿದ್ದಾರೆ. ಖಂಡಿತಾ ಅವರಿಗೆ ನ್ಯಾಯ ಒದಗಿಸಿ ಕೊಡುತ್ತೇನೆ. ಶಿಸ್ತುಪಾಲನಾ ಸಮಿತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಮೂರು-ನಾಲ್ಕು ದಿನದಿಂದ ಭೇಟಿಗೆ ಸಮಯ ಕೇಳಿದ್ದರು. ನಾನು ಇವತ್ತು ಬರೋಕೆ ಹೇಳಿದ್ದೆ. ಅವರ ಸಮಸ್ಯೆ ಕೇಳಿದೆ. ಭಾರೀ ನೋವಲ್ಲಿ ಇದ್ದಾರೆ. ಅವರ ನೋವು ನನಗೆ ಅರ್ಥ ಆಗುತ್ತೆ. ನಾನೇ ಅವರ ಸ್ಥಾನದಲ್ಲಿದ್ದರೂ ನೋವಾಗುತ್ತಿತ್ತು ಎಂದು ಡಿಕೆಶಿ ಹೇಳಿದರು.

ಇದೇ ವೇಳೆ ಅಖಂಡ ಮಾತನಾಡಿ, ಮಾಜಿ ಮೇಯರ್ ಸಂಪತ್ ರಾಜ್, ಜಾಕೀರ್ ರನ್ನ ಪಕ್ಷದಿಂದ ಉಚ್ಚಾಟಿಸಬೇಕು ಅಂತ ಹೇಳಿದ್ದೀನಿ. ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇದೆ. ಎಲ್ಲವನ್ನೂ ಹೇಳಿದ್ದೇನೆ. ವಿಚಾರವನ್ನ ಶಿಸ್ತು ಪಾಲನಾ ಸಮಿತಿಗೆ ಶಿಫಾರಸು ಮಾಡ್ತೀನಿ ಅಂದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ನ್ಯಾಯ ಸಿಗುತ್ತೆ ಅನ್ನೊ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆಗೂ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ನಿಂತಿದ್ದಾರೆ. ಈಗಾಗಲೇ ಸಂಪತ್ ರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಿದ್ದಾರೆ. ಈ ಮಧ್ಯೆ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಅಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮೇಶ್ ಬಾಬು ತಿಳಿಸಿದ್ದಾರೆ. ತೀವ್ರ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ 64.5...

ಪ್ರಮುಖ ಸುದ್ದಿ

ಬೆಂಗಳೂರು : ಕೋಮುವಾದ ಕೊರೋನಾಗಿಂತಲೂ ಅಪಾಯಕಾರಿಯಾದ ವೈರಸ್’ ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ‘ಅವಧಿ’ ಹಮ್ಮಿಕೊಂಡಿದ್ದ ಎಸ್ ಜಿ ಸಿದ್ದರಾಮಯ್ಯನವರ ‘ಬಿಜ್ಜಳ...

ಪ್ರಮುಖ ಸುದ್ದಿ

ಬೆಂಗಳೂರು :ಮನುಷ್ಯ ಸಂಕುಲವನ್ನು ಭಯದ ಕೂಪಕ್ಕೆ ತಳ್ಳಿದ್ದ ಕೊರೊನಾ ಮಹಾಮಾರಿಗೆ ಅಂತ್ಯವಾಡುವ ಕಾಲ ಸನಿಹವಾಗಿದೆ. ಈಗಾಗಲೇ ಲಸಿಕೆ ಪ್ರಯೋಗ ಕೊನೆ ಹಂತದಲ್ಲಿದ್ದು ಶೀಘ್ರ ಜನರಿಗೆ ಸಿಗುವ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿದ...

ಪ್ರಮುಖ ಸುದ್ದಿ

ಕಲಬುರಗಿ: ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ. ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ...

ಪ್ರಮುಖ ಸುದ್ದಿ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ ಸೋಮವಾರ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಗರದ ಖಾಸಗಿ...

ಪ್ರಮುಖ ಸುದ್ದಿ

ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈಗಾಗಲೇ ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿವೆ....

ಪ್ರಮುಖ ಸುದ್ದಿ

ಬೆಂಗಳೂರು: ಇಂದು ರೆಬಲ್ ಸ್ಟಾರ್ ದರ್ಶನ್ ಅವರ ಎರಡನೇ ಪುಣ್ಯ ತಿಥಿ. ಈ ವೇಳೆ ಚಿತ್ರರಂಗದ ಗಣ್ಯರು ಅಂಬರೀಶ್ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ. ಅಂಬರೀಶ್ ಹಿರಿಯ ಮಗನ ಹಾಗೆ ಇದ್ದ ಪ್ರೀತಿಯ ದರ್ಶನ್,...

ಪ್ರಮುಖ ಸುದ್ದಿ

ಬೆಂಗಳೂರು :ರಾಜ್ಯದಲ್ಲಿ ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳು ರಚನೆಯಾದ ಬೆನ್ನಲ್ಲೇ ‘ಒಕ್ಕಲಿಗೆ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ಘೋಷಿಸುತ್ತಿದ್ದಂತೆ ಎಲ್ಲ ಜಾತಿ ನಾಯಕರು ನಮ್ಮ ಸಮುದಾಯಕ್ಕೂ...

ಪ್ರಮುಖ ಸುದ್ದಿ

ಬೆಂಗಳೂರು: ಕಲಿಯುಗ ಕರ್ಣ, ಮಂಡ್ಯದ ಗಂಡು, ಅಂಬಿ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಂಡಿರುವ ಅಭಿಮಾನ ಆರಾಧ್ಯ ದೈವ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯತಿಥಿ. ಅವರು ಅಗಲಿ 2 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ...

error: Content is protected !!