Connect with us

Hi, what are you looking for?

ಪ್ರಮುಖ ಸುದ್ದಿ

ಕಾನುನಿನ ತಿಳುವಳಿಕೆ ತಿಳಿಸಲು ಬರ್ತಿದೆ ಆ್ಯಕ್ 1978 ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ ‘ಆ್ಯಕ್ಟ್ 1978’ ಕಾನೂನುಗಳು

ಒಂದು ಸಿನಿಮಾ ಅಂದ್ರೆ ಅದ್ರಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದಷ್ಟು ಸಂದೇಶಗಳನ್ನ ಸಾರಲಾಗುತ್ತದೆ. ಆದ್ರೆ ಇತ್ತೀಚೆಗೆ ಸಂದೇಶಕ್ಕಿಂತ ಮನರಂಜನೆಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ಇಂಥ ಹೊತ್ತಲ್ಲಿ ಮರೆಯಾಗಿರುವ ಕಾನೂನನ್ನು ಮಲಗಿರುವ ಜನರಿಗೆ ಬಡಿದೆಬ್ಬಿಸಿ ಎಚ್ ರಿಸಲು ಬರ್ತಿದೆ ಆ್ಯಕ್ಟ್ 1978 ಸಿನಿಮಾ.

ಹೌದು, ರಾಷ್ಟ್ರ ಪ್ರಶಸ್ತಿ ವಿಜೇತ ಮಂನ್ಸೋರೆ ನಿರ್ದೇಶನದ ಆ್ಯಕ್ಟ್ 1978 ಸಿನಿಮಾದಲ್ಲಜ ಕೇವಲ ಮನರಂಜನೆಯಷ್ಟೆ ಅಲ್ಲ ಕಾನೂನಿನ ಪಾಠವು ಅಡಗಿದೆ. 1978 ರಲ್ಲಿ ಬಂದ ಕಾಯ್ದೆ ಬಗ್ಗೆಯೇ ಸಿನಿಮಾ ಮಾಡಿದ್ದು, ಅದರ ಸುತ್ತ ನಡೆಯುವ ಘಟನೆಗಳ ಮೂಲಕ ಕಾಯ್ದೆ ಬಗ್ಗೆ ಹೇಳಲು ಹೊರಟಿದ್ದಾರೆ.

ಈಗಾಗಲೇ ಸಿನಿಮಾದ ಪೋಸ್ಟರ್ ಫೇಸ್ ಬುಕ್ ನಲ್ಲಿ ರಾರಾಜಿಸುತ್ತಿವೆ. ನಿರ್ದೇಶಕ ಮಂನ್ಸೋರೆ, ಕಥೆಗಾರ ಟಿ‌ ಕೆ ದಯಾನಂದ್ ಅವರ ವಾಲ್ ಗಳಲ್ಲಿ ಆ್ಯಕ್ಟ್ 1978 ಬಗೆಗಿನ ಪೋಸ್ಟರ್ ಗಳು ವೈರಲ್ ಆಗಿವೆ. ಎಷ್ಟರ ಮಟ್ಟಿಗೆ ಅಂದ್ರೆ ಫೇಸ್ ಬುಕ್ ನಲ್ಲಿ ಹಾಕುವ ಪೋಸ್ಟರ್ ಗಳನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಳ್ಳುವಷ್ಟು ಜನರಿಗೆ ಹತ್ತಿರವಾಗಿವೆ.

ಸಂಸದರಿಗೆ ನಾವ್ ಏನು ಕೊಡುತ್ತಿದ್ದೇವೆ, ನಮ್ಮ ಬಗ್ಗೆ ರೆಸ್ಪೆಕ್ಟ್, ಟ್ರಾಫಿಕ್ ಪೊಲೀಸರಿಗೆ ಇರುವ ಅಧಿಕಾರ ಹೀಗೆ ಏನೆಲ್ಲಾ ನಿಯಮಗಳಿವೆ ಅನ್ನುವುದರ ಬಗ್ಗೆ ಪೋಸ್ಟರ್ ಗಳು ಹರಿದಾಡುತ್ತಿವೆ. ಆ ಪೋಸ್ಟರ್ ನೋಡಿದವರು ಹೌದಾ ಈ ಕಾನೂನು ಈಗ ಬೇರೆ ರೀತಿಯಲ್ಲೇ ಪಾಲನೆ ಆಗ್ತಾ ಇದ್ದಾವಲ್ಲ ಎನ್ನುವ ಉದ್ಘಾರ ವ್ಯಕ್ತಿ ಪಡಿಸುವಂತಾಗಿದೆ.

ಒಟ್ಟಾರೆ ಇರುವ ಕಾನೂನು ಬೇರೆ ಪಾಲನೆಯಾಗುತ್ತಿರುವ ಕಾನೂನು ಬೇರೆ ಎನ್ನುವುದು ವೈರಲ್ ಆಗುತ್ತಿರುವ ಪೋಸ್ಟರ್ ನಿಂದ ತಿಳಿಯುತ್ತಿದೆ. ಜನ ಕೂಡ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಇದೇ ತಿಂಗಳು 20 ರಂದು ತೆರೆಗೆ ಬರುತ್ತಿದೆ.

ಮಂನ್ಸೋರೆ ನಿರ್ದೇಶನದ ಆ್ಯಕ್ಟ್ 1978 ಸಿನಿಮಾದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಉತ್ ಕುಮಾರ್, ಶೃತಿ, ದತ್ತಣ್ಣ, ಸಂಚಾರಿ ವಿಜಯ್ ಅವರಂತ ಘಟಾನುಘಟಿಗಳ ತಂಡ ಇದೆ. ದೇವರಾಜ್ ಆರ್ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು : ಕರೊನಾ ಲಾಕ್‍ಡೌನ್ ನಂತರ ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆಯಿಂದ ಬಿಡುಗಡೆಯಾದ ‘ಆಕ್ಟ್-1978’ ಚಿತ್ರವು ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಗ್ ಬಜೆಟ್ ಚಿತ್ರಗಳ ರೀಲಿಸ್‍ಗೂ ಮುನ್ನ ‘ಆಕ್ಟ್-1978’ ತೆರೆ...

ಪ್ರಮುಖ ಸುದ್ದಿ

ಬೆಂಗಳೂರು: ಇತ್ತಿಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಂಡ್ತಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಆದರೆ ಇದೀಗ ಅವರ ಸಾಮಾಜಿಕ ಜಾಲತಾಣಗಳು ಹ್ಯಾಕ್ ಆಗಿದ್ದಾವೆ. ಆ ಬಗ್ಗೆ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ. Dear...

ಪ್ರಮುಖ ಸುದ್ದಿ

ನಟಿ ಕಾಜಲ್ ಅಗರ್ವಾಲ್ ಇತ್ತಿಚೆಗಷ್ಟೆ ಉದ್ಯಮಿ ಗೌತಮ್ ಜೊತೆ ವಿವಾಹವಾಗಿದ್ದಾರೆ. ಇಬ್ಬರು ಮಾಲ್ಡೀವ್ಸ್ ಗೆ ಹನಿಮೂನ್ ಹೋಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ದಂಪತಿ ಫೋಟೋಗಳು ವೈರಲ್ ಆಗಿವೆ. ಹನಿಮೂನ್ ನಲ್ಲಿ ಸ್ಥಳಗಳನ್ನ ಸುತ್ತುತ್ತಿರುವ ಈ...

ಪ್ರಮುಖ ಸುದ್ದಿ

ಬೆಂಗಳೂರು : ಕೊರೊನಾ ಎಂಬ ಮಾರಾಣಾಂತಿಕ ವೈರಸ್ ಕಾರಣದಿಂದಾಗಿ ಜನ ಕಂಗೆಟ್ಟು ಹೋಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಒಳಗೆ ಕುಂತ ಜನ ಇದೀಗ ಅನ್ ಲಾಕ್ ಆದರೂ ಅಷ್ಟರ ಮಟ್ಟಿಗೆ ಹೊರಗೆ ಬರ್ತಾ...

ಪ್ರಮುಖ ಸುದ್ದಿ

ಹಾಂಗ್ ಕಾಂಗ್: 235 ಮಿಲಿಯನ್ ಇನ್‌ಸ್ಟಾಗ್ರಾಮ್, ಟಿಕ್ ಟಾಕ್ ಟೋ ಮತ್ತು ಯೂಟ್ಯೂಬ್ ಬಳಕೆದಾರರ ವೈಯಕ್ತಿಕ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಹಾಂಕಾಂಗ್ ಮೂಲದ ‘ಸೋಷಿಯಲ್ ಡಾಟಾ’ ಎಂಬ ಕಂಪನಿಯು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನರ...

error: Content is protected !!