ಕೊರೊನಾ ಬ್ರೇಕ್ ಬಳಿಕ ಅದ್ಧೂರಿಯಾಗಿ ತೆರೆಕಾಣುತ್ತಿರುವ ಮೊದಲ ಚಿತ್ರ ಲಂಕೆಯಾಗಿದ್ದು, ರಾಜ್ಯದಾದ್ಯಂತ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಂಕೆ ರಿಲೀಸ್ ಆಗಲಿದೆ.
ಲಂಕೆ ಔಟ್ ಅಂಡ್ ಔಟ್ ಕಮರ್ಶಿಯಲ್ ಪ್ಯಾಕೇಜ್ ಚಿತ್ರವಾಗಿದ್ರೂ ಸಹ ಆಕ್ಷನ್ ಸೀನ್, ಪವರ್ ಫುಲ್ ಡೈಲಾಗ್ ಮಾತ್ರವಲ್ಲದೇ ಲವ್, ಸೆಂಟಿಮೆಂಟ್ ಎಲ್ಲವೂ ಇದ್ದು, ಬಾಕ್ಸ್ ಆಫೀಸ್ನಲ್ಲಿ ಲಂಕೆ ಕಮಾಲ್ ಮಾಡೋದು ಪಕ್ಕಾ. ಚಿತ್ರದ ಹಾಡುಗಳು ಟ್ರೈಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದು, ಸಿನಿ ಪ್ರಿಯರನ್ನು ಲಂಕೆಯ ನಶೆಯಲ್ಲಿ ತೇಲಿಸುತ್ತಿದೆ.
ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರದ ಕಥೆ ಹೆಣೆದಿರುವ ನಿರ್ದೇಶಕ ರಾಮ್ ಪ್ರಸಾದ್ , ಲೂಸ್ ಮಾದ ಯೋಗಿ ಅವರನ್ನು ಡಿಫರೆಂಟ್ ಮ್ಯಾನರಿಸಂನಲ್ಲಿ ತೆರೆಮೇಲೆ ತರಲು ಸಿದ್ಧರಾಗಿದ್ದಾರೆ.
ಲಂಕೆಯಲ್ಲಿ ನಟ ದಿಗ್ಗಜರ ತಾರಾಬಳಗವೇ ಒಂದಾಗಿದ್ದು, ಲೂಸ್ ಮಾದ ಯೋಗಿ ಅವರ ಜೊತೆ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ನಾಯಕಿಯರಿಗಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನು ಸಂಚಾರಿ ವಿಜಯ್, ಸುಚೇಂದ್ರ ಪ್ರಸಾದ್, ಶೋಬ್ ರಾಜ್, ಶರತ್ ಲೋಹಿತಾಶ್ವ, ಗಾಯಿತ್ರಿ ಜೈರಾಮ್, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ಕಲಾವಿದರು ಲಂಕೆಯಲ್ಲಿ ಬಣ್ಣ ಹಚ್ಚಿದ್ದಾರೆ.
ಅಂದಹಾಗೆ ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಲಂಕೆ ಚಿತ್ರಕ್ಕೆ ನಿರ್ದೇಶಕ ರಾಮ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಹಾಡುಗಳು ಟ್ರೈಲರ್ ಮೂಲಕವೇ ಹೈಪ್ ಕ್ರಿಯೆಟ್ ಮಾಡಿರುವ ಲಂಕೆ ಚಿತ್ರ ಕಾಣುತ್ತಿರುವುದರಿಂದ, ಸಿನಿ ಪ್ರಿಯರನ್ನು ಮತ್ತೆ ಥಿಯೇಟರ್ ಕಡೆ ಮುಖ ಮಾಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಚಿತ್ರಮಂದಿರದ ಮಾಲೀಕರು ಸಹ ಕಾಯುತ್ತಿದ್ದಾರೆ.