ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಮಹದೇಶ್ವರ ಬೆಟ್ಟ ಕುಸಿತ..!

suddionenews
1 Min Read

ಚಾಮರಾಜನಗರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಉಂಟಾದ ಕಾರಣ ರಾಜ್ಯದಲ್ಲೂ ಅದರ ಪರಿಣಾಮ ಜೋರಾಗಿ ಕಾಣಿಸುತ್ತಿದೆ. ಕಳೆದ ನಾಲ್ಕೈದು ದಿನದಿಂದಲೂ ರಾಜ್ಯದೆಲ್ಲಡೆ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಇದರ ಪರಿಣಾಮ ಮಹದೇಶ್ವರ ಬೆಟ್ಟವೂ ಮತ್ತೆ ಕುಸಿದಿದೆ.

ಮಹದೇಶ್ವರ ಬೆಟ್ಟದಲ್ಲಿ ಈ ರೀತಿ ಆಗಿದ್ದು ಇದು ಮೊದಲೇನಲ್ಲ. ಪದೇ ಪದೇ ಭೂ ಕುಸಿತ ಉಂಟಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಈ ರೀತಿ ಗುಡ್ಡ ಕುಸಿಯುತ್ತಿದೆ.

ಈ ಬಾರೀ ಗುಡ್ಡ ಕುಸಿತದಿಂದ ಬಂಡೆಗಳೆಲ್ಲಾ ರಸ್ತೆಗೆ ಉರುಳಿವೆ. ಇದು ವಾಹನ ಸಂಚಾರರಿಗೆ ಸಾಕಷ್ಟು ಸಮಸ್ಯೆಯುಂಟು ಮಾಡಿದೆ. ಮಳೆಯ ಪ್ರಮಾಣ ತಗ್ಗಿದರೆ ಸಾಕು ಎನ್ನುತ್ತಿದ್ದಾರೆ ಅಲ್ಲಿನ ಜನ.

Share This Article
Leave a Comment

Leave a Reply

Your email address will not be published. Required fields are marked *