in ,

ಡಿಸೆಂಬರ್ 26 ರಿಂದ 29 ವರೆಗೆ ತ.ರಾ.ಸು ರಂಗಮಂದಿರದಲ್ಲಿ ಕುವೆಂಪು ನಾಟಕೋತ್ಸವ

suddione whatsapp group join

ಚಿತ್ರದುರ್ಗ, (ಡಿ.17) : ವಿಶ್ವಮಾನವತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕ, ಜಗತ್ತಿನಲ್ಲಿಯೇ ಶ್ರೇಷ್ಠ ಕವಿ ಎನಿಸಿಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ರಾಷ್ಟ್ರಕವಿ ಕುವೆಂಪು ಜನ್ಮ ದಿನೋತ್ಸವದ ಅಂಗವಾಗಿ 20 ನೇ ಕುವೆಂಪು ನಾಟಕೋತ್ಸವವನ್ನು ರಂಗಕಹಳೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಡಿಸೆಂಬರ್ 26 ರಿಂದ 29 ರವರೆಗೆ ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ಆರು ನಾಟಕಗಳು ಹಾಗೂ ಎರಡು ಚಲನಚಿತ್ರ ಕುವೆಂಪು ಉತ್ಸವವನ್ನು ಏರ್ಪಡಿಸಲಾಗಿದೆ.

ಪ್ರಯುಕ್ತ ಇದಕ್ಕೆ ಸಂಬಂಧಿಸಿದಂತೆ ನಾಟಕೋತ್ಸವದ ಬಿತ್ತಿಪತ್ರವನ್ನು ಜಿಲ್ಲಾಧಿಕಾರಿ ಕವಿತಾ. ಎಸ್. ಮನ್ನಿಕೇರಿ ಇವರು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಅನಾವರಣಗೊಳಿಸಿದರು. ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಪ್ರಾಧ್ಯಾಪಕ ಹಾಗೂ ರಂಗ ವಿಮರ್ಶಕ ಡಾ.ವಿ.ಬಸವರಾಜ್, ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಾಹಿತಿ ಯಶೋಧ ರಾಜಶೇಖರಪ್ಪ, ರಂಗಕಹಳೆ ತಂಡದ ಸಂಚಾಲಕ ಓಹಿಲೇಶ ಲಕ್ಷ್ಮಣ, ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ, ಹಿರಿಯ ಪತ್ರಿಕಾ ವಿತರಕ ವಿಜಯಕುಮಾರ್ ಉಪಸ್ಥಿತರಿದ್ದರು.

ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕ ಮತ್ತು ಸಿನಿಮಾ ಪ್ರದರ್ಶನ ಉಚಿತ ಪ್ರವೇಶವಿರುತ್ತದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ | 77678 ರೈತ ಫಲಾನುಭವಿಗಳಿಗೆ 52 ಕೋಟಿ ಬೆಳೆ ಹಾನಿ ಪರಿಹಾರ

238 ಹೊಸ ಸೋಂಕಿತರು.. 3 ಸಾವು..!