in ,

KSRTC : ದಾವಣಗೆರೆ ವಿಭಾಗದ ಪ್ರಯಾಣಿಕರಿಗೆ ಮೇ 25 ರಿಂದ ಹವಾ ನಿಯಂತ್ರಿತ ಸಾರಿಗೆ ಸೌಕರ್ಯ

suddione whatsapp group join

 

ದಾವಣಗೆರೆ, (ಮೇ.23) : ದಾವಣಗೆರೆ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಮೇ 25 ರಿಂದ ದಾವಣಗೆರೆ ವಿಭಾಗದಿಂದ ಹೊರಡುವ ಮಾರ್ಗಗಳಿಗೆ ಹವಾ ನಿಯಂತ್ರಿತ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದೆ.

ದಾವಣಗೆರೆಯಿಂದ ರಾತ್ರಿ 8.30 ಹೊರಟು ಹರಿಹರ-ಹರಪನಹಳ್ಳಿ-ಹೊಸಪೇಟೆ-ಗಂಗಾವತಿ- ಲಿಂಗಸೂರು ಮಾರ್ಗವಾಗಿ ಬೆಳಿಗ್ಗೆ 5.30 ಕ್ಕೆ ಕಲ್ಬುರ್ಗಿಗೆ  ಮತ್ತು ಕಲ್ಬುರ್ಗಿಯಿಂದ ರಾತ್ರಿ 9.15 ರಿಂದ ಹೊರಟು ಲಿಂಗಸೂರು-ಗಂಗಾವತಿ-ಹೊಸಪೇಟೆ-ಹರಪನಹಳ್ಳಿ-ಹರಿಹರ ಮಾರ್ಗವಾಗಿ ಬೆಳಿಗ್ಗೆ 6.25 ಕ್ಕೆ ದಾವಣಗೆರೆ ತಲುಪುವುದು.

KSRTC ಜಾಲತಾಣದ ಮೂಲಕ ಮುಂಗಡ ಬುಕ್ಕಿಂಗ್ ಮಾಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

UPSC ಪರೀಕ್ಷೆಯಲ್ಲಿ ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ರ‌್ಯಾಂಕ್..!

ರಾಜ್ಯದ ಸುವ್ಯವಸ್ಥೆ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ