in ,

ಕೋಟೆನಾಡು ಚಿತ್ರದುರ್ಗ ಖನಿಜ ಸಂಪತ್ತಿನ ಸಿರಿನಾಡು : ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ

suddione whatsapp group join

ಚಿತ್ರದುರ್ಗ ಜಿಲ್ಲೆಯು ಖನಿಜ ಸಂಪತ್ತಿನ ಸಿರಿನಾಡು. ಈ ಜಿಲ್ಲೆಯ ಭೂಗೋಳಿಕ ಇತಿಹಾಸ ಸುಮಾರು 250 ಕೋಟಿ ವರ್ಷಗಳ ಹಿಂದೆ ಜ್ವಾಲಾಮುಖಿ ಜನ್ಯ ಪವರ್ತತಗಳ ಮೂಲಗಳೊಂದಾಗಿದೆ. ಈ ಪ್ರದೇಶವು ಅಗ್ನಿಶಿಲೆ, ಪದರಶಿಲೆ ಮತ್ತು ರೂಪಾಂತರ ಶಿಲೆಗಳನ್ನು ಹೊಂದಿದೆ ಮತ್ತು ಅತ್ಯ ಅಮೂಲ್ಯವಾದ ಖನಿಜ ಸಂಪತ್ತನ್ನು ಹೊಂದಿರುವ ಭೂಭಾಗವಾಗಿದೆ.

ಈ ಜಿಲ್ಲೆಯಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್, ಲೈಮ್‍ಸ್ಟೋನ್, ಚಿನ್ನ, ಬೆಳ್ಳಿ, ತಾಮ್ರ ಮತ್ತು ಲೆಡ್, ಬ್ಯಾರೇಟಿಸ್, ಅಲಂಕಾರ ಶಿಲೆಗಳಾದ ಪಚ್ಚೆಕಲ್ಲು, ಗಾರ್‍ನೆಟ್, ರೂಬಿ, ಕೊರಂಡಂ, ಬೆಣಚುಕಲ್ಲು ಇತ್ಯಾದಿಗಳು ದೊರಕುತ್ತವೆ. ಸುಮಾರು 20 ವರ್ಷಗಳಿಂದ ಸಾಕಷ್ಟು ಗಣಿಗಾರಿಕೆಯ ಪರವಾನಿಗಳನ್ನು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಹಾಗೂ ಗಾಣಿಗಾಗಿಕೆ ಕಾನೂನು ಉಲ್ಲಂಘನೆ ಮೇರೆಗೆ ರದ್ದು ಪಡಿಸಲಾಗಿದೆ.

ಈಗ ಕೇವಲ 2-3 ಗಣಿಗಳಿಗೆ, ಗಾಣಿಗಾರಿಕೆ ಪರವಾನಿಗೆ ಸರ್ಕಾರ ನೀಡಲಾಗಿದೆ. ಚಿತ್ರದುರ್ಗ ತಾಲೂಕು ಜಿ.ಆರ್.ಹಳ್ಳಿಯ ಪೂರ್ವಭಾಗದಲ್ಲಿ ಈ ಹಿಂದೆ ಹಟ್ಟಿ ಚಿನ್ನದ ಗಣಿಸಂಸ್ಥೆ, ಅನ್ವೇಷಣೆ ಪರವಾನಿಗೆ ಪಡೆದು, ಅನ್ವೇಷಣೆ ಮಾಡಲಾಗಿ ಈ ಪ್ರದೇಶದಲ್ಲಿ ಚಿನ್ನ, ಬೆಳ್ಳಿ ಮತ್ತು ಲೆಡ್ ಸಂಯೋಜನೆಯೊಂದಿದ ಖನಿಜಗಳು ದೊರಕುವುದಾಗಿ ದೃಢಪಟ್ಟಿದೆ. ಆದರೆ ಅವುಗಳ ಸಂಯೋಜನೆ ಹೊಂದಿರುವುದರಿಂದ ಅವುಗಳ ಬೇರ್ಪಡೆಗೆ ಹೆಚ್ಚಿನ ವೆಚ್ಚ ಮತ್ತು ತಂತ್ರಜ್ಞಾನದ ಕೊರೆತೆಯಿಂದ ಅನ್ವೇಷಣೆ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.

ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಹೋಬಳಿಯಲ್ಲಿ ಆಂಧ್ರಗಡಿ ಭಾಗದಲ್ಲಿ ಅಲಂಕಾರ ಶಿಲೆಗಳಾದ ರೂಬಿ, ಕೊರಂಡಂ ಮತ್ತು ಗಾರ್‍ನೆಟ್ ಇತ್ಯಾದಿಗಳು ಕಡಿಮೆ ಪ್ರಮಾಣದಲ್ಲಿ ದೊರಕುವುದರಿಂದ ಮತ್ತು ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಯಾವ ಗಾಣಿಗಾರಿಕೆಗೆ ಪರವಾನಿಗೆ ನೀಡಿರುವುದಿಲ್ಲ.

ಚಿತ್ರದುರ್ಗ ತಾಲೂಕಿನ ಇಂಗಾಳದಾಳ್ ಗ್ರಾಮದ ಬೆಳ್ಳಿ ಗುಡ್ಡದಲ್ಲಿ ತಾಮ್ರದ ಅದಿರು ದೊರಕುವುದರಿಂದ ಅ ಪ್ರದೇಶದಲ್ಲಿ ಈ ಹಿಂದೆ ಹಟ್ಟಿಚಿನ್ನದ ಗಣಿ ಸಂಸ್ಥೆಯಿಂದ ಗಣಿಗಾರಿಕೆ ಮಾಡಿ ತಾಮ್ರ ಮತ್ತು ಚಿನ್ನದ ಅದಿರನ್ನು ಬೇರಪಡಿಸುವ ಸಂಸ್ಕರಣ ಕೇಂದ್ರದಲ್ಲಿ ಖನಿಜಗಳ ಬೇರ್ಪಡಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಅವುಗಳ ಉತ್ಪಾದನೆ ವೆಚ್ಚವು ಖನಿಜಗಳ ಬೆಲೆಗಿಂತ ಹೆಚ್ಚಾಗುವುದರಿಂದ ಮತ್ತು ತಾಮ್ರದ ಲಭ್ಯತೆ ಶೇಕಡ 1 ರಷ್ಟು ದೊರಕುವುದರಿಂದ ಆ ಪ್ರದೇಶದಲ್ಲಿ ಗಣಿಗಾರಿಕೆ ಕಾರ್ಯವನ್ನು ಸುಮಾರು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ.

ಆ ಗಣಿಗಾರಿಕೆಯಿಂದ ಸಾಕಷ್ಟು ಪ್ರಮಾಣದ ಉಪ ಖನಿಜದ ತ್ಯಾಜ್ಯ ಶೇಖರಣೆಯಾಗಿ, ಆ ತ್ಯಾಜ್ಯದಿಂದ ರಾಸಾಯಿನಿಕ ಗೊಬ್ಬರ ತಯಾರಿಕೆ ಮತ್ತು ಕ್ರಿಮೀನಾಶಕ ಔಷಧಿ ತಯಾರು ಮಾಡಲು ಉಪಯೋಗವಾಗುವುತ್ತದೆ.

ಆದುದ್ದರಿಂದ ಸಂಬಂಧಪಟ್ಟ ಸಂಸ್ಥೆ / ಸರ್ಕಾರ ಈ ತ್ಯಾಜ್ಯವನ್ನು ವಿಲೇಮಾಡಿದ್ದಲ್ಲಿ ಸರ್ಕಾರಕ್ಕೆ ರಾಜ್ಯ ಧನ ಮತ್ತು ಡಿ.ಎಂ.ಎಫ್. ಹಣ ಸರ್ಕಾರಕ್ಕೆ ಲಭ್ಯವಾಗುತ್ತದೆ. ಅಲ್ಲದೆ ವಿಲ್ಲೇಮಾಡಿದ್ದಲ್ಲಿ ಆ ಪ್ರದೇಶದಲ್ಲಿ ಗಿಡ ಮರಗಳನ್ನು ಬೆಳೆಸಿ, ಆ ಪ್ರದೇಶವನ್ನು ಹಸಿರೀಕರಣ ಮಾಡುವುದರಿಂದ ಪರಿಸರಕ್ಕೆ ಅನುಕೂಲವಾಗುತ್ತದೆ. ಆದುದ್ದರಿಂದ ಘನ ಸರ್ಕಾರವು ಈ ವಿಷಯದ ಬಗ್ಗೆ ಗಮನಹರಿಸಬೇಕೆಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವರದಿ ಕೃಪೆ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಭವಾನಿ ರೇವಣ್ಣ ಓಕೆ ಎಂದರೆ ಬಿಜೆಪಿಯಿಂದ ಟಿಕೆಟ್ ಸಿಗುತ್ತಾ..? : ಸಿಟಿ ರವಿ ಹೇಳಿದ್ದೇನು..?

ಫೆಬ್ರವರಿ 06 ರಿಂದ ಹೊರಕೇರಿದೇವರಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮಹೋತ್ಸವ