ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 22 : ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಇನ್ನರ್ವೀಲ್ಹ್ ಕ್ಲಬ್ನಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ್ಗೆ ಮನವಿ ಸಲ್ಲಿಸಲಾಯಿತು.
ಮದಕರಿನಾಯಕ ಸರ್ಕಲ್ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಟೈನಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದಿರುವುದು ಇಡಿ ಮನುಕುಲವೆ ನಾಚಿ ತಲೆತಗ್ಗಿಸುವಂತಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಮಾನವೀಯ ಕೃತ್ಯವೆಸಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ಪೂಜಾ ಪ್ರದೀಪ್ ಒತ್ತಾಯಿಸಿದರು.
ಇನ್ನರ್ವೀಲ್ಹ್ ಕ್ಲಬ್ ಕಾರ್ಯದರ್ಶಿ ನಮ್ರತಾ ದೇವರಾಜ್, ವೈಸ್ ಪ್ರೆಸಿಡೆಂಟ್ ವಿಜಯಕಿರಣ್, ಐ.ಪಿ.ಪಿ. ಮೋಕ್ಷರುದ್ರಸ್ವಾಮಿ, ಶ್ಯಾಮಲ ಶಿವಪ್ರಕಾಶ್, ಜ್ಯೋತಿಲಕ್ಷ್ಮಣ್, ಭಾಗ್ಯಮೂರ್ತಿ, ಬಿಜೆಪಿ. ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ ಹಾಗೂ ಕ್ಲಬ್ನ ಎಲ್ಲಾ ಸದಸ್ಯರು, ಚೈತನ್ಯ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು, ರೋಟರಿ ಹಾಗೂ ವಾಸವಿ ಸಂಸ್ಥೆಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…