ಮಂಡಿನೋವು ಅನ್ನೋದು ಈ ಮೊದಲೆಲ್ಲಾ ನಮ್ಮ ಅಜ್ಜ ಮುತ್ತಾತಂದಿರಿಗೆ ಬರ್ತಾ ಇತ್ತು. ವಯಸ್ಸಾದ ಮೇಲೆ, ಮೂಳೆ ಸವೆಯುವುದಕ್ಕೆ ಶುರುವಾದ ಮೇಲೆ. ಆದರೆ ಈಗಿನ ಪೀಳಿಗೆಯವರಲ್ಲಿ ಸಮಸ್ಯೆ ಬಹಳ ಬೇಗನೇ ಬರ್ತಾ ಇದೆ. ಇಪ್ಪತ್ತು/ಇಪ್ಪತ್ತೈದನೇ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅದೆಷ್ಟೋ ಜನ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ನೆಲದ ಮೇಲೆ ಕುಳಿತುಕೊಳ್ಳುವುದಕ್ಕೂ ಕಷ್ಟ ಪಡ್ತಾ ಇದಾರೆ, ಮೆಟ್ಟಿಲುಗಳನ್ನ ಹತ್ತುವುದಕ್ಕೂ ಸಂಕಟ ಪಡುತ್ತಿದ್ದಾರೆ. ಈ ರೀತಿ ಚಿಕ್ಕ ವಯಸ್ಸಿಗೇನೆ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿಯೇ ಸೇವಿಸಬೇಕಾದ್ದನ್ನ ಸೇವಿಸುತ್ತಿಲ್ಲ ಎಂದೇ ಅರ್ಥ. ಹಾಗಾದ್ರೆ ಈ ಮೂಳೆ ಸಮಸ್ಯೆಗೆ ಪರಿಹಾರ ಏನು ಮಾಡಬೇಕು ಎಂಬುದನ್ನ ಇಲ್ಲಿ ತಿಳಿಸ್ತೀವಿ ನೋಡಿ.
* ಸಾಧ್ಯವಾದಷ್ಟು ನಮ್ಮ ಆಹಾರ ಕ್ರಮದಲ್ಲಿ ಹಸಿರು ತರಕಾರಿ, ಹಣ್ಣುಗಳನ್ನ ಅಳವಡಿಸಿಕೊಳ್ಳಬೇಕು. ಪ್ರತಿದಿನದ ಆಹಾರದಲ್ಲಿ ಅದನ್ನ ಸೇವಿಸುತ್ತಾ ಬರಬೇಕು. ಆಗ ಈ ಮೂಳೆ ನೋವಿನ ಸಮಸ್ಯೆಗೆ ಕೊಂಚ ಪರಿಹಾರ ಸಿಗಲಿದೆ.
* ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳಲ್ಲಿ ಜಾಯಿಂಟ್ ಗೆ ಸಂಬಂಧಿಸಿದ ಅಂಶಗಳು ಅಡಗಿವೆ. ಹೀಗಾಗಿ ಸಾಧ್ಯವಾದಷ್ಟು ಈ ಹಣ್ಣುಗಳನ್ನು ತಿನ್ನುತ್ತಾ ಇರಿ.
* ಮಂಡಿನೋವಿನಿಂದ ಏನಾದ್ರೂ ಬಳಲುತ್ತಾ ಇದ್ದರೆ ಫೈನಾಪಲ್ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ. ಒಂದು ವಾರ ರೆಗ್ಯೂಲರ್ ಆಗಿ ತಿಂದು ನೋಡಿ. ಇದರಲ್ಲಿರುವ ಅಂಶವೂ ಮಂಡಿನೋವನ್ನ ಕಡಿಮೆ ಮಾಡುತ್ತದೆ.
* ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಹಾಗೂ ಕೆ ಅಂಶಗಳಿವೆ. ಇದು ನಿಮ್ಮ ತ್ವಜೆಯನ್ನು ಚೆಂದ ಮಾಡುವುದಲ್ಲದೆ, ಮೂಳೆಗಳ ಬಲವರ್ಧನೆಗೂ ಸಹಾಯ ಮಾಡುತ್ತದೆ.
* ಹಾಗೇ ಮಂಡಿನೋವು ಬರುವುದಕ್ಕೆ ಪ್ರಮುಖ ಕಾರಣವಾದ ಕಾರ್ಟಲೇಜ್ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿರುವುದು ಬ್ರೋಕಲಿ. ಪ್ರತಿದಿನ ಬ್ರೋಕಲಿ ಜೊತೆಗೆ ಮಿಶ್ರ ತರಕಾರಿಗಳನ್ನ ಹಾಕಿ, ಸ್ಟೀಮ್ ಮಾಡಿ ತಿನ್ನೋದರಿಂದ ಹಲವು ಉಪಯೋಗಗಳು ಸಿಗುತ್ತವೆ.
ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…
ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…
ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…
ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…