ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಇಂದಿನಿಂದ ಬಿಜೆಪಿಯ ಪ್ರಚಾರ ಕಾರ್ಯಕ್ಕೆ ಹೊರಟಿದ್ದಾರೆ. ತಮ್ಮ ಜೆಪಿ ನಗರದ ನಿವಾಸದಿಂದ ಹೊರಟ ಸುದೀಪ್ ಅವರು, ಇಂದು ಬಸವರಾಜ್ ಬೊಮ್ಮಾಯಿ ಅವರ ನಾಮಪತ್ರ ಸಲ್ಲಕೆಯ ಸಮಯದಲ್ಲಿ ಜೊತೆಗೆ ಇರಲಿದ್ದಾರೆ.
ಹೊರಡುವುದಕ್ಕೂ ಮುನ್ನ ಮಾತನಾಡಿದ ಕಿಚ್ಚ ಸುದೀಪ್, ಕ್ಯಾಂಪೇನಿಂಗ್ ಮಾಡುವುದು ನನಗೆ ಹೊಸದೇನು ಅಲ್ಲ. ಇವತ್ತು ಶಿಗ್ಗಾಂವಿಯಿಂದ ಪ್ರಚಾರ ಆರಂಭ ಮಾಡುತ್ತೇವೆ. ಪಾದಯಾತ್ರೆ,ರೋಡ್ ಶೋ ಮಾಡುತ್ತೇವೆ. ಯಾರಿಗೆ, ಹೇಗೆ ಪ್ರಚಾರ ಮಾಡಬೇಕು ಎಂಬುದನ್ನು ಸಿಎಂ ಬೊಮ್ಮಾಯಿ ಅವರು ಬ್ಲೂ ಪ್ರಿಂಟ್ ಹಾಕಿ ಕೊಡ್ತಾರೆ. ನನಗೆ ಬೇರ ಕಡೆಯಿಂದಾನು ಪ್ರಚಾರಕ್ಕೆ ಕೇಳಿದ್ರು. ಈ ಬಾರಿಯೂ ಅದೇ ರೀತಿ ಕೇಳಿದ್ದಾರೆ.
ಆದರೆ ಈ ಬಾರಿ ನಾನು ಇದನ್ನೇ ಆಯ್ಕೆ ಮಾಡಿದ್ದೇನೆ. ಯಾಕೆ ಎಂಬ ಕಾರಣವನ್ನು ನಾನು ಇದಾಗಲೇ ಹೇಳಿದ್ದೇನೆ. ಕಲಾವಿದರು ಎಂದ ಮೇಲೆ ಬೇರೆ ಬೇರೆಯವರು ಕರೆಯುವುದು ಕಾಮನ್. ನನಗೂ ಅದೇ ರೀತಿ ಇದೇ ರೀತಿಯ ಕಾಲ್ ಗಳು ಬರುತ್ತಿವೆ. ನಾನು ಮೊದಲೇ ಹೇಳಿದಂತೆ, ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ.





GIPHY App Key not set. Please check settings