ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಯಾವ್ಯಾವ ಪ್ರದೇಶಗಳಿಗೆ ತಲುಪುತ್ತಾರೆ, ಅಲ್ಲಿನ ಸ್ಥಳೀಯ ಕಲೆ, ನೃತ್ಯವನ್ನು ನೋಡಿ, ತಾವೂ ಕುಣಿದು, ಜನರ ಜೊತೆ ಬೆರೆತು ಮುಂದೆ ಸಾಗುತ್ತಿದ್ದಾರೆ. ಆದ್ರೆ ಇದೀಗ ಕೆಜಿಎಫ್ ಹಾಡಿನ ಕಾಪಿರೈಟ್ಸ್ ಕೇಸ್ ಒಂದು ದಾಖಲಾಗಿದೆ.
ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಿಗೆ ಕೆಜಿಎಫ್ ಸಿನಿಮಾದ ಹಾಡೊಂದನ್ನು ಹಾಕಿದ್ದು, ಕಾಂಗ್ರೆಸ್ ಪಕ್ಷದ ಮೇಲೆ MRT ಸಂಸ್ಥೆಯೂ ಕಾನೂನು ಸಮರಕ್ಕೆ ಮುಂದಾಗಿದೆ. ಹಾಡಿನ ಬಳಕೆಯ ವಿರುದ್ಧ ಸಂಸ್ಥೆ ದೂರು ದಾಖಲಿಸಿದೆ.
ರಾಹುಲ್ ಗಾಂಧಿ, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ಮೇಲೆ ದೂರು ನೀಡಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಜಿಎಫ್ ಮ್ಯೂಸಿಕ್ ಬಳಸಿಕೊಂಡಿರುವ ವಿಡಿಯೋಗಳನ್ನು ಕಾಂಗ್ರೆಸ್ ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ.