ಬೆಂಗಳೂರು : ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡು ಸಾಕಷ್ಟು ಭಯ ಹುಟ್ಟಿಸಿದೆ. ಆ ವೈರಸ್ ಇನ್ನೆಲ್ಲಿ ನಮ್ಮ ರಾಜ್ಯಕ್ಕೂ ಬರುತ್ತೋ ಅನ್ನೋ ಭಯ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಆದ್ರೆ ಈ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್, ನಿಫಾ ವೈರಸ್ ಇನ್ನು ನಮ್ಮ ರಾಜ್ಯಕ್ಕೆ ಹರಡಿಲ್ಲ ಎಂದಿದ್ದಾರೆ.
ನಿಫಾ ಸೋಂಕಿಗೆ ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ರೋಗ ಲಕ್ಷಣವನ್ನ ಆಧರಿಸಿಯೇ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ನಿಫಾ ಕುರಿತು ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನಷ್ಟು ಗಂಭೀರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಫಾ ರಾಜ್ಯಕ್ಕೆ ಬಾರದಂಗೆ ಮುಂಜಾಗ್ರತೆ ವಹಿಸಲಾಗುವುದು ಎಂದಿದ್ದಾರೆ.
ಇನ್ನು ಕೇರಳದಲ್ಲಿ ಕಾಡು ಹೆಚ್ಚಾಗಿರುವ ಕಾರಣ ನಿಫಾ ವೈರಸ್ ಹೆಚ್ಚಾಗಿದೆ. ಕೇರಳದಲ್ಲಿ ಮೂರನೇ ಸಲ ನಿಫಾ ಹರಡುತ್ತಿರೋದು. ಪ್ರಾಣಿಗಳು ತಿಂದುಬಿಟ್ಟ ಹಣ್ಣುಗಳನ್ನ ಮನುಷ್ಯ ತಿಂದರೆ ನಿಫಾ ವೈರಸ್ ಬರುತ್ತೆ. ಅದು ಹೀಗೆಯೆ ಆಗಿರಬಹುದು ಎಂದಿದ್ದಾರೆ.