in ,

ಕೆಂಚಮ್ಮ ನಿಧನ

suddione whatsapp group join

ಚಿತ್ರದುರ್ಗ: ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ದಿ ನೌಕರಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಕೆಂಚಮ್ಮ(62) ಮಂಗಳವಾರ ಸಂಜೆ ಚಳ್ಳಕೆರೆ ತಾಲ್ಲೂಕು ಸಿದ್ದಾಪುರದಲ್ಲಿ ನಿಧನರಾದರು.

ಲೋ ಬಿ.ಪಿ.ಗೆ ತುತ್ತಾದ ಇವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಕೊನೆಯುಸಿರೆಳೆದರು.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಮೃತರ ಅಂತಿಮ ದರ್ಶನ ಪಡೆದರು. ಮೃತರು ಪತಿ ಅಜ್ಜಣ್ಣ ಹಾಗೂ ಇಬ್ಬರು ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಹತ್ತಿರವಿರುವ ಜಮೀನಿನಲ್ಲಿ ಮೃತರ ಅಂತ್ಯಕ್ರಿಯೆ ಬುಧವಾರ ನಡೆಯಿತೆಂದು ಕುಟುಂಬದವರು ತಿಳಿಸಿದ್ದಾರೆ.

ಸಂತಾಪ: ಅರಣ್ಯ ಇಲಾಖೆ ದಿನಗೂಲಿ/ಪಿ.ಸಿ.ಪಿ/ಕ್ಷೇಮಾಭಿವೃದ್ದಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಕೆಂಚಮ್ಮನವರ ನಿಧನದಿಂದ ಸಂಘಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕರುಣಿಸಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಂ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರಾಜ್ಯದ 31 ಜಿಲ್ಲೆಗಳಲ್ಲಿ ವಿಶ್ವಕರ್ಮ ಸಮುದಾಯವನ್ನು ಸಂಘಟಿಸಲಾಗುವುದು :  ಆರ್.ಪ್ರಸನ್ನಕುಮಾರ್

ನನ್ನ ಅವರ ಸಂಬಂಧ ಸಾಯುವವರೆಗೂ ಕೆಡಲ್ಲ : ಜಮೀರ್ ಅಹ್ಮದ್