in ,

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿರವರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ : ಡಾ.ದೊಡ್ಡಮಲ್ಲಯ್ಯ

suddione whatsapp group join

 

 

ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಕರ್ನಾಟಕ ರಾಜ್ಯ ಅಲಕ್ಷಿತ ಸಮುದಾಯಗಳ ಮಹಾ ವೇದಿಕೆ ಬೆಂಗಳೂರು, ದೇವರಾಜ ಅರಸು ಜನಸೇವಾ ಪ್ರತಿಷ್ಠಾನ ಚಿತ್ರದುರ್ಗ ಹಾಗೂ ರಿದ್ದಿ ಫೌಂಡೇಶನ್ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಫೆ.26 ರಂದು ಬೆಳಿಗ್ಗೆ 10-30 ಕ್ಕೆ ತ.ರಾ.ಸು. ರಂಗಮಂದಿರದಲ್ಲಿ ಅಲಕ್ಷಿತ ಸಮುದಾಯಗಳ ಸಮಾವೇಶ, ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ರಾಜ್ಯ ಅಲಕ್ಷಿತ ಸಮುದಾಯಗಳ ಮಹಾವೇದಿಕೆ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಮಾರಂಭ ಉದ್ಗಾಟಿಸಲಿದ್ದು, ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರಪಪ್ಪಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಿ.ಟಿ.ಜಗನ್ನಾಥ, ಸಮಾಜ ಸೇವಕ ಡಾ.ಹೆಬ್ಬಳ್ಳಿ ಓಂಕಾರಪ್ಪ ಇವರುಗಳು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸುವರು.

ಅಭಿವೃದ್ದಿಯ ಹರಿಕಾರ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿರವರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕøತರ ಕುರಿತು ಉಪನ್ಯಾಸ ನೀಡಲಿದ್ದಾರೆ.

ಹಿರಿಯ ಪತ್ರಕರ್ತರ ಡಾ.ಎಂ.ಎಸ್.ಮಣಿ ಅಲಕ್ಷಿತ ತಳಸಮುದಾಯಗಳ ಸ್ಥಿತಿಗತಿ ಕುರಿತು ಮಾತನಾಡುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನಿರ್ದೇಶಕ ಕಲಾವಿದ ವಿಷ್ಣು, ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್ ಇನ್ನು ಅನೇಕರು ಆಗಮಿಸಲಿದ್ದಾರೆಂದು ತಿಳಿಸಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ಚಳ್ಳಕೆರೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದಿರುವ ಶಾಸಕ ಟಿ.ರಘುಮೂರ್ತಿರವರನ್ನು ಸರ್ವಾನುಮತದಿಂದ ಕರ್ಪೂರಿ ಠಾಕೂರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶೋಷಿತ, ತಳಸಮುದಾಯ, ಬುಡಕಟ್ಟು, ಬಡವರ ಪರ ಸದಾ ಹೋರಾಟ ನಡೆಸಿದ ಕರ್ಪೂರಿ ಠಾಕೂರ್ ಶಿಕ್ಷಕರಾಗಿ ಲೋಹಿಯಾ ಸಿದ್ದಾಂತದಡಿ ಸಮಾಜವಾದಿ ರಾಜಕಾರಣಿಯಾಗಿ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಠಿಸಿದ್ದಾರೆ. ನಿತೀಶ್‍ಕುಮಾರ್ ಮುಖ್ಯಮಂತ್ರಿಯಾಗಲು ಕರ್ಪೂರಿ ಠಾಕೂರ್ ಕಾರಣ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಡಾ.ದೊಡ್ಡಮಲ್ಲಯ್ಯ ಮಾತನಾಡಿ ಇಡಿ ಜಿಲ್ಲೆಯೇ ಚಳ್ಳಕೆರೆಯತ್ತ ತಿರುಗಿ ನೋಡುವಂತೆ ಅಭಿವೃದ್ದಿಪಡಿಸಿರುವ ಶಾಸಕ ಟಿ.ರಘುಮೂರ್ತಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.

ಶೋಷಿತ ಹಾಗೂ ತಳಸಮುದಾಯಗಳ ಪರ ಸದಾ ತುಡಿತವುಳ್ಳ ಶಾಸಕ ಟಿ.ರಘುಮೂರ್ತಿ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಇವೆಲ್ಲವನ್ನು ಪರಿಗಣಿಸಿ 2022-23 ನೇ ಸಾಲಿನ ಕರ್ಪೂರಿ ಠಾಕೂರ್ ಪ್ರಶಸ್ತಿಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರದಾನ ಮಾಡಲಾಗುವುದು ಎಂದರು.

ರಿದ್ದಿ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಮಮತ, ಟಿ.ಶಿವರುದ್ರಮ್ಮ, ಶೋಭಮ್ಮ, ಪ್ರಿಯದರ್ಶಿನಿ, ದೇವರಾಜ್, ಕದ್ರಿವೇಲು, ಮಧು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಶಿವಮೊಗ್ಗ & ಬೆಳಗಾವಿಗೆ ಮೋದಿ ಭೇಟಿ : ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿಯ ಓಡಾಟ..!

ದೊಡ್ಡಸಿದ್ದವ್ವನಹಳ್ಳಿ ಬಳಿ ರಸ್ತೆ ಅಪಘಾತ : ಚಿರತೆ ಸಾವು