ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನ ಸೆಳೆದ ಕರ್ನಾಟಕದ ʻನಾರಿ ಶಕ್ತಿʼ

ನವದೆಹಲಿ: ಇಂದು 74ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಪರೇಡ್ ನಲ್ಲಿ ಕರ್ನಾಟಕದ ಸ್ತಬ್ದಚಿತ್ರ ಗಮನ ಸೆಳೆದಿದೆ. ಈ ಬಾರಿ ನಾರಿ ಶಕ್ತಿ ಕಲ್ಪನೆಯಡಿ ರಾಜ್ಯದ ಸ್ತಬ್ದ ಚಿತ್ರ ಪ್ರದರ್ಶನವಾಗಿದೆ.

ಸ್ತಬ್ದ ಚಿತ್ರದ ಮುಂಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಸೂಲಗಿತ್ತಿ ನರಸಮ್ಮ ಅವರ ಚಿತ್ರ ಪ್ರದರ್ಶನವಾಗಿತ್ತು. ಹಿಂಭಾಗದಲ್ಲಿ ಸಾಲುಮರದ ತಿಮ್ಮಕ್ಕ ಮತ್ತು ತುಳಸಿಗೌಡ ಅವರ ಸ್ತಬ್ದ ಚಿತ್ರಗಳನ್ನು ಅವರ ಸಾಧನೆಗಳೊಂದಿಗೆ ಪ್ರದರ್ಶನ ಮಾಡಲಾಗಿದೆ. ಕರ್ನಾಟಕದ ಟ್ಯಾಬ್ಲೋ ಜೊತೆಗೆ ಶಿವಮೊಗ್ಗದ ಮೂಲದ ಡೊಳ್ಳು ಕುಣಿತದ ಕಲಾವಿದರು ಭಾಗಿಯಾಗಿದ್ದರು.

ಈ ಬಾರಿಯ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ದ ಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಕೊನೆ ಕ್ಷಣದಲ್ಲಿ ಅನುಮತಿ ಸಿಕ್ಕಿತ್ತು. ಹೀಗಾಗಿ ಏಳೇ ದಿನದಲ್ಲಿ ನಾರಿ ಶಕ್ತಿ ಸ್ತಬ್ದ ಚಿತ್ರ ರೆಡಿಯಾಗಿತ್ತು. “ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ “ನಾರಿ ಶಕ್ತಿ” ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ” ಎಂದು ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *