ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಬೈ ಎಲೆಕ್ಷನ್ ಭರಾಟೆ ಮಧ್ಯ ರಾಜಕೀಯ ಪಕ್ಷಗಳ ವಾಕ್ಸಮರ ತಾರಕಕೆರಿದೆ. ಬಹುಶಃ ಕೆಪಿಸಿಸಿ ಕಂಡ ಅತ್ಯಂತ ಅಸಹಾಯಕ ಅಧ್ಯಕ್ಷ ಎಂಬ ಪಟ್ಟ ಡಿ ಕೆ ಶಿವಕುಮಾರ್ ಅವರಿಗೆ ಒಲಿದು ಬರಬಹುದು ಎಂದು ಟ್ವೀಟರ್ ಮೂಲಕ ಬಿಜೆಪಿ ಕಾಲೆಳೆದಿದೆ.
ತಮ್ಮ ವಿರುದ್ಧ ಸಂಚು ರೂಪಿಸಿದ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೂ ಡಿ ಕೆ ಶಿವಕುಮಾರ್ ಅಳುಕುತ್ತಿದ್ದಾರೆ. ಡಿ ಕೆ ಶಿವಕುಮಾರ್ ಎದುರು ಸಿದ್ದರಾಮಯ್ಯ ನವರ ಕೈ ಮೇಲಾಯಿತೇ? ಎಂದು ಅಸಹಾಯಕಡಿಕೆಶಿ ಎಂದು ಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. ಪಿಸುಮಾತು ಪ್ರಕರಣ ಸಂಬಂಧ ಉಪಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದಿದ್ದ ಈಗ ಮೆತ್ತಗಾಗಿ ಬಿಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು.
ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು.
ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?#ಅಸಹಾಯಕಡಿಕೆಶಿ
— BJP Karnataka (@BJP4Karnataka) October 24, 2021
ಸಿದ್ದರಾಮಯ್ಯ ಬಣದ ಉಗ್ರಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಎಲ್ಲಿ ಅಧ್ಯಕ್ಷ ಪಟ್ಟ ಕೈ ತಪ್ಪು ತ್ತದೆ ಯೆಂಬ ಭಯವೇ? ಸಿದ್ದರಾಮಯ್ಯ ದಿಲ್ಲಿ ಪ್ರವಾಸದಿಂದ ಡಿಕೆಶಿ ಕುಗ್ಗಿ ಹೋಗಿದ್ದಾರೆಯೇ? ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು. ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು. ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ? ಎಂದು ಕಾಲೆಳೆದಿದೆ.