ಸರ್ಕಾರದ ವಿರುದ್ಧ ಅಸಮಾಧಾನ : ಮೇ 27ಕ್ಕೆ ಸಾಮೂಹಿಕ ರಜೆ ಮಾಡಲಿದೆ ವಿಧಾನಸಭೆ ಸಚಿವಾಲಯ

suddionenews
0 Min Read

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ಕ್ಕೆ ವಿಧಾನಸಭಾ ಸಚಿವಾಲಯ ಸಾಮೂಹಿಕ ರಜೆ ಘೋಷಣೆ ಮಾಡಲಿದೆ. 542 ಕಿರಿಯ ಸಹಾಯಕ ಹುದ್ದೆಯನ್ನು ಕೈಬಿಡುವ ಸರ್ಕಾರದ ನಿರ್ಧಾರಕ್ಕೆ ಸಚಿವಾಲಯದ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿವೃತ್ತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೇಡಿಕೆಗಳನ್ನಿಟ್ಟುಕೊಂಡು ಸಾಮೂಹಿಕ ರಜೆ ಘೋಷಣೆ ಮಾಡಿದ್ದಾರೆ.

ಇನ್ನು ಸಚಿವಾಲಯದ ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶವನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಅದನ್ನು ಮರುಸ್ಥಾಪಿಸಬೇಕೆಂದು ಒತ್ತಾಯ ಕೇಳಿ ಬಂದಿದೆ. ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಡಗಳು ಕೇಳಿ ಬಂದಿವೆ. ಸಚಿವಾಲಯದ ನೌಕರರು ಒಟ್ಟಾಗಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *