ರಾಜ್ಯದಲ್ಲಿ ಇಂದು ರಾತ್ರಿ 10ರಿಂದ ಶುರುವಾಯ್ತು ನೈಟ್ ಕರ್ಫ್ಯೂ..!

suddionenews
1 Min Read

ಬೆಂಗಳೂರು: ಒಮಿಕ್ರಾನ್ ಹೆಚ್ಚಳದ ಭೀತಿ ಹಿನ್ನೆಲೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. 10 ದಿನಗಳ ಕಾಲ ಈ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಜನವರಿ 7 ರವರೆಗೂ ಈ ಕರ್ಫ್ಯೂ ಇದ್ದು, ಈಗಾಗಲೇ ಎಲ್ಲಾ ಜಿಲ್ಲೆಯಲ್ಲೂ ಬಿಗಿಭದ್ರತೆ ಮಾಡಲಾಗಿದೆ.

ಹೊಸ ವರ್ಷ ಹತ್ತಿರವಿರುವ ಕಾರಣ ಜನಜಂಗುಳಿ ಸೇರಬಾರದು ಎಂಬ ಕಾರಣಕ್ಕೆ ಈ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೊಸ ವರ್ಷಕ್ಕೆ ಈ ಬಾರಿಯೂ ಬ್ರೇಕ್ ಬಿದ್ದಿದೆ. ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ನೈಟ್ ಕರ್ಫ್ಯೂ ಜಾರಿಯಲ್ಲಿರುವ ಅಷ್ಟು ದಿನ ಪಬ್, ಬಾರ್ ಆಂಡ್ ರೆಸ್ಟೋರೆಂಟ್ ರಾತ್ರಿ 10 ಗಂಟೆಗೆಲ್ಲಾ ಬಂದ್ ಮಾಡಬೇಕಾಗಿದೆ. 50-50 ಗೆ ಅನುಮತಿ ನೀಡಲಾಗಿದೆ.‌ ಬಾರ್ ಆಂಡದ ರೆಸ್ಟೋರೆಂಟ್, ಹೊಟೇಲ್ ಗಳಿಗೆ ಜನವರಿ 2ರವರೆಗೆ ಮಾತ್ರ ಸೀಮಿತ ಮಾಡಲಾಗಿದೆ. ಜನವರಿ 3 ರಿಂದ ಎಂದಿನಂತೆ ಸೇವೆ ನೀಡಬಹುದು.

Share This Article
Leave a Comment

Leave a Reply

Your email address will not be published. Required fields are marked *