ಕರ್ನಾಟಕ ಬಂದ್ ; ಸಾರಿಗೆ ಸಂಘಟನೆಗಳಿಗೆ ಪೊಲೀಸ್ ಇಲಾಖೆ ನೋಟೀಸ್

ಬೆಂಗಳೂರು; ಬೆಳಗಾವಿ ಗಡಿಯಲ್ಲಿ ಎಂಇಎಸ್ ಪುಂಡರ ಪದೇ ಪದೇ ಪುಂಡಾಟ ಮೆರೆಯುತ್ತಿರುವ ಹಿನ್ನೆಲೆ ಮರಾಠಿಗರ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ. ನಾಳೆ ಬಂದ್ ನಡೆಯಲಿದ್ದು, ಹಲವು ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿವೆ. ಖಾಸಗಿ ಸಾರಿಗೆ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಹೀಗಾಗಿ ಪೊಲೀಸ್ ಇಲಾಖೆ ಸಾರಿಗೆ ಇಲಾಖೆಗೆ ನೋಟೀಸ್ ನೀಡಿದೆ.

ನಾಳೆ ಕನ್ನಡಪರ ಸಂಘಟನೆಗಳು ಮತ್ತು ರಾಜ್ಯದ ವಿವಿಧ ಸಂಘಟನೆಗಳ ವತಿಯಿಂದ ಮರಾಠಿಗರ ಪುಂಡಾಟಿಕೆ, ಎಂಇಎಸ್ ನಿಷೇಧ, ಕಳಸಾ ಬಂಡೂರಿ ಮಹಾದಾಯಿ ಯೋಜನೆ ಆರಂಭ,‌ಕಲ್ಯಣ ಕರ್ನಾಟಕ ಅಭಿವೃದ್ಧಿ, ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರವತನಿಖೆಗೆ ಒತ್ತಾಯಿಸಿ ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ, ಮೆರವಣಿಗೆ, ಮುಷ್ಕರವನ್ನು ಹಮ್ಮಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಅದರ ಭಾಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೀವೂ ಕಾರ್ಯಕರ್ತರನ್ನು ಸೇರಿಸಿಕೊಂಡು ಟೌನ್ ಹಾಲ್ ಮುಂಭಾಗದಿಂದ ಫ್ರೀಡಂ ಪಾರ್ಕ್ ಗೆ ಮೆರವಣಿಗೆ ಹಮ್ಮಿಕೊಂಡಿರುವುದು ತಿಳಿದು ಬಂದಿದೆ. ಫ್ರೀಡಂ ಪಾರ್ಕ್ ಹೊರತು ಪಡಿಸಿ, ನಗರದ ಉಳಿದ ಕಡೆಗಳಲ್ಲಿ ಸಾರ್ವಜನಿಕ ಸಂಚಾರ ಹಾಗೂ ನೆಮ್ಮದಿಗೆ ಭಂಗವಾಗುವಂತೆ ಪ್ರತಿಭಟನೆ, ಮುಷ್ಕರ, ಮೆರವಣಿಗೆ ಮಾಡುವಂತಿಲ್ಲ. ಈ ಕುರಿತು ಹೈಕೋರ್ಟ್ ಕುಇಡ ಆದೇಶ ನೀಡಿದೆ‌. ಒಂದು ವೇಳೆ ನ್ಯಾಯಾಲಯದ ಆದೇಶವನ್ನು ಉಲ್ಲಂಗಹಿಸಿದರೆ ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸಂಘ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

suddionenews

Recent Posts

ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಚಿತ್ರದುರ್ಗದಲ್ಲಿಂದು ನಾಣ್ಯಗಳ ಮೇಳ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28 : ನಗರದ ಐ.ಯು.ಡಿ.ಪಿ. ಲೇಔಟ್ ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಕರೆನ್ಸಿ ಚೆಸ್ಟ್ ಶಾಖೆಯಲ್ಲಿ…

1 hour ago

ಚಿತ್ರದುರ್ಗದಲ್ಲಿ ಏಪ್ರಿಲ್‌ 01 ರಿಂದ ಬೇಸಿಗೆ ಶಿಬಿರ : ಇಲ್ಲಿದೆ ಮಾಹಿತಿ… !

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಎಲ್ಲೆಡೆ ಪರೀಕ್ಷೆಗಳು ಮುಗಿಯುವ ಹಂತಕ್ಕೆ ಬಂದಿವೆ. ಇನ್ನೇನೂ ಸದ್ಯದಲ್ಲೇ ಶಾಲಾ-ಕಾಲೇಜು ರಜೆ ಘೋಷಣೆ…

2 hours ago

ತಲೆನೋವು ಸದಾ ಕಾಡುತ್ತಾ..? ಈ ಮನೆ ಮದ್ದನ್ನ ಟ್ರೈ ಮಾಡಿ ಸಾಕು

ಹಲವರಿಗೆ ಇದ್ದಕ್ಕಿದ್ದ ಹಾಗೇ ತಲೆ ನೋವು ಬರುತ್ತೆ. ಮಾತ್ರೆಗಳಿಗೆ ಅಂತವರು ಅಡಿಕ್ಟ್ ಆಗಿರುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಸದಾ ಕಾಲ…

2 hours ago

ಈ ರಾಶಿಯವರು ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ

ಈ ರಾಶಿಯವರು ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ, ಶುಕ್ರವಾರದ ರಾಶಿ ಭವಿಷ್ಯ 28 ಮಾರ್ಚ್ 2025…

4 hours ago

ಐಮಂಗಲ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಸುದ್ದಿಒನ್, ಹಿರಿಯೂರು, ಮಾರ್ಚ್. 27 : ಅಕ್ರಮ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಐಮಂಗಲ ಪೊಲೀಸರು…

11 hours ago

ಬೆಂಗಳೂರಲ್ಲಿ ಬೆಚ್ಚಿಬೀಳಿಸಿದ ಕೊಲೆ ; ಪತ್ನಿಯನ್ನ ಕೊಂದು ಸೂಟ್ ಕೇಸ್ ಗೆ ತುಂಬಿದ ಗಂಡ..!

ಬೆಂಗಳೂರು; ಇತ್ತೀಚೆಗಂತೂ ಕೊಲೆ ಕೇಸದ ಗಳನ್ನೇ ಹೆಚ್ಚಾಗಿ‌ಕೇಳ್ತಾ ಇದ್ದೀವಿ. ಅದರಲ್ಲೂಈ ರೀತಿಯ ಕೊಲೆಗಳು ಕೂಡ ಜಾಸ್ತಿ ಆಗ್ತಾ ಇದಾವೆ. ಇಂದು…

12 hours ago