ಬೆಂಗಳೂರು; ಮಕ್ಕಳಿಗೆ ಪರೀಕ್ಷಾ ಸಮಯ. ಆದರೆ ಈ ಸಮಯದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಬೆಳಗಾವಿ ಗಡಿಯಲ್ಲಿನ ಮರಾಠಿಗರ ಪುಂಡಾಟಿಕೆ, ಬಸ್ ಚಾಲಕ ಸೇರಿದಂತೆ ಕನ್ನಡಿಗರ ಮೇಲಿನ ದರ್ಪ, ದೌರ್ಜನ್ಯದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಕನ್ನಡ ಒಕ್ಕೂಟ – ಕರ್ನಾಟಕ ರಾಜ್ಯ ಬಂದ್ ಗೆ ಕರೆ ನೀಡಿದ್ದು, ಶನಿವಾರ ಈ ಬಂದ್ ನಡೆಯಲಿದೆ. ಬಂದ್ ನಡೆಯುವ ದಿನ ಏನು ಇರಲಿದೆ..? ಏನು ಇರಲ್ಲ ಎಂಬ ಮಾಹಿತಿ ಇಲ್ಲಿದೆ. ಬಂದ್ ಗೆ ಬೆಂಗಳೂರು, ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಬೆಂಬಲ ಸಿಗುವ ಸಾಧ್ಯತೆ ಇದೆ. ಕರ್ನಾಟಕ ಬಂದ್ ದಿನ ಸಾರಿಗೆ, ಬಸ್, ಆಟೋ ಸಂಚಾರ ಇರುವುದಿಲ್ಲ. ಇನ್ನು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರವೂ ಅನುಮಾನ ಎನ್ನಲಾಗಿದೆ. ಆಟೋಗಳ ಸಂಚಾರವೂ ಇರುವುದಿಲ್ಲ. ರಾಜ್ಯದ ಬ್ಯಾಂಕ್ ಗಳ ಕಾರ್ಯ ನಿರ್ವಹಣೆ ಅಂದು ಬಂದ್ ಆಗಿರುತ್ತದೆ. ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಹಣ್ಣು, ವೈದ್ಯಕೀಯ ಸೇವೆಗಳು ಎಂದುನಂತೆ ಕಾರ್ಯ ನಿರ್ವಹಿಸಲಿವೆ. ಈ ಬಂದ್ ಗೆ ಚಿತ್ರರಂಗ ಕೂಡ ಬೆಂಬಲ ನೀಡಿದ್ದು, ಅಂದು ಯಾವುದೇ ರೀತಿಯ ಶೂಟಿಂಗ್ ಇರುವುದಿಲ್ಲ.
ಇನ್ನು ಬಹಳ ಮುಖ್ಯವಾಗಿ ಶಾಲಾ ಕಾಲೇಜುಗಳು ತೆರೆದಿರುತ್ತವಾ ಎಂಬ ವಿಚಾರ ಬಹಳ ಮುಖ್ಯವಾಗುತ್ತದೆ. ಶಿಕಗಷಣ ಇಲಾಖೆಗಳು ಈ ಬಗ್ಗೆ ಇನ್ನು ಯಾವುದೇ ರೀತಿಯ ನಿರ್ಧಾರವನ್ನು ತಿಳಿಸಿಲ್ಲ. ಆದರೆ ಪರೀಕ್ಷಾ ಸಮಯದಲ್ಲಿ ಇದೆಂಥ ಬಂದ್ ಎಂದು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಬಂದ್ ಗೆ ಎಲ್ಲರೂ ಬೆಂಬಲ ನೀಡಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಸುದ್ದಿಒನ್, ಹಿರಿಯೂರು, ಮಾರ್ಚ್. 19 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಬೆಂಬಲಿಗರಿಬ್ಬರು ಸೋಮವಾರ ರಾತ್ರಿ ಟೆಂಡರ್…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಬ್ಯಾಂಕ್ ಕಾಲೋನಿ ನಿವಾಸಿ ಜಿ.ಪಿ.ಉಮೇಶ್(63) ಬುಧವಾರ ಬೆಳಿಗ್ಗೆ 11-30 ಕ್ಕೆ ಹೃದಯಾಘಾತದಿಂದ ನಿಧನರಾದರು.…
ಚಿತ್ರದುರ್ಗ. ಮಾ. 19: ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಮುಖ್ಯವಾದದು.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಸುದ್ದಿಒನ್, ಹರಿಹರ, ಮಾರ್ಚ್. 19 : ಪವಿತ್ರ ರಂಜಾನ್ ತಿಂಗಳು ದಾನ, ಪರೋಪಕಾರಿ ಸೇವೆ ಮತ್ತು ಮಾನವೀಯತೆಯ ಸಮಯ. ಈ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಒಂಬತ್ತು ತಿಂಗಳು ಕಾಲ ಬಾಹ್ಯಾಕಾಶದಲ್ಲಿದ್ದು, ಕ್ಯಾಪ್ಸೂಲ್ ಮೂಲಕ ಭೂಮಿಯನ್ನು ತಲುಪಿದ ಗಗನಯಾನಿಗಳಾದ ಸುನಿತಾ…