ಬೆಂಗಳೂರು; ಬೆಳಗಾವಿಯಲ್ಲಿ ಮರಾಠಿಗಳ ಪುಂಡಾಟ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಹಲವು ಸಂಘಟನೆಗಳು ಕೂಡ ಬಂದ್ ಗೆ ಬೆಂಬಲ ನೀಡಿವೆ. ಇನ್ನು ಹಲವು ಸಂಘಗಳು ನೈತಿಕ ಬೆಂಬಲ ನೀಡಿವೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಮಕ್ಕಳಿಗೆ ಪರೀಕ್ಷೆಯದ್ದೇ ಚಿಂತೆಯಾಗಿದೆ.
ಪರೀಕ್ಷೆ ಅಂದರೇನೆ ಭಯ. ಅಂತದ್ರಲ್ಲಿ ಇವತ್ತು ಪರೀಕ್ಷೆ ನಡೆಯುತ್ತಾ..? ನಡೆಯಲ್ವಾ..? ಎಂಬ ಗೊಂದಲವಿದ್ದರೆ ಟೆನ್ಶನ್ ಜಾಸ್ತಿಯಾಗಿ ಓದಿದ್ದು ಮರೆತೆ ಹೋಗುತ್ತದೆ. ಸದ್ಯಕ್ಕೆ ವಿದ್ಯಾರ್ಥಿಗಳ ಪರಿಸ್ಥಿತಿ ಅದೇ ಆಗಿದೆ. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಕೂಡ ಶುರುವಾಗಿದೆ. ಜೊತೆಗೆ 4, 5, 6, 7ನೇ ತರಗತಿ ಮಕ್ಕಳಿಗೂ ಪರೀಕ್ಷೆಯ ಕಾಲವಾಗಿದೆ. ಇಂದು ಕೂಡ ಪರೀಕ್ಷೆ ನಿಗದಿಯಾಗಿದೆ. ಆದರೆ ಶಿಕ್ಷಣ ಇಲಾಖೆ ಬಂದ್ ಗೆ ಯಾವುದೇ ಬೆಂಬಲ ನೀಡುವ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಪರೀಕ್ಷೆಗಳು ಮಾಮೂಲಿಯಂತೆ ನಡೆಯಲಿವೆ.
ಮೂಲಗಳ ಪ್ರಕಾರ, ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪೂರ್ವ ನಿಗದಿಯಂತೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ2 ಗಂಟೆಗೆ ನಡೆಯಬೇಕಾದ 4, 5, 6, 7 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದೆ. ಗಣಿತ ವಿಷಯದ ಪರೀಕ್ಷೆ ಇದ್ದು, ಪ್ರತಿಭಟನೆ ತೀರಾ ಹೆಚ್ಚಾದರೆ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಿದ್ದಾರೆ. ಇಲ್ಲವಾದಲ್ಲಿ ಪರೀಕ್ಷೆ ಸಹಜವಾಗಿಯೇ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಮಕ್ಕಳಾಗಲೀ, ಪೋಷಕರಾಗಲಿ ಆತಂಕಗೊಳ್ಳುವ ಅಗತ್ಯವಿಲ್ಲ. ಪರೀಕ್ಷೆ ನಡೆಯದೆ ಹೋದಲ್ಲಿ ಶಿಕ್ಷಣ ಇಲಾಖೆಯೇ ಮಾಹಿತಿ ನೀಡಲಿದೆ. ಯಾವುದೇ ಮಾಹಿತಿ ಇಲ್ಲ ಎಂದಾದಲ್ಲಿ ಮಕ್ಕಳನ್ನ ಪರೀಕ್ಷೆಗೆ ತಯಾರು ಮಾಡಿ.
ಹುಬ್ಬಳ್ಳಿ; ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಧಾನಪರಿಷತ್…
ಸುದ್ದಿಒನ್, ಚಿತ್ರದುರ್ಗ, ಮಾ.23 : ನಗರದ ಜೆ.ಸಿ.ಆರ್. ಬಡಾವಣೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರ ಸೇತುವೆ ಬಳಿ ಶನಿವಾರ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ. 23…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಸುದ್ದಿಒನ್ ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರು ಮತ್ತು ವಿಜಯಪುರ…