in ,

ನಾಳೆ ಕಾಂಗ್ರೆಸ್ ನಿಂದ ಕರ್ನಾಟಕ ಬಂದ್ : ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತಂಕ..!

suddione whatsapp group join

 

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಒಂದಾದ ಮೇಲೆ ಒಂದರಂತೆ ಭ್ರಷ್ಟಚಾರ ಹೊರಗೆ ಬರುತ್ತಲೆ ಇದೆ. ಇದನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ ಬಿಜೆಪಿಯ ಭ್ರಷ್ಟಚಾರದ ವಿರುದ್ಧ ಅಭಿಯಾನ, ಪ್ರತಿಭಟನೆ ಅಂತ ಬಿಸಿ ಮುಟ್ಟಿಸುತ್ತಲೇ ಇದೆ. ಇತ್ತಿಚೆಗಷ್ಟೇ ಶಾಸಕ ವಿರೂಪಾಕ್ಷಪ್ಪ ಪುತ್ರ ಭ್ರಷ್ಟಚಾರದಿಂದ ತಗಲಾಕಿಕೊಂಡಿದ್ದರು. ಆ ಸಂಬಂಧ ಈಗ ಕಾಂಗ್ರೆಸ್ ಪಕ್ಷದಿಂದ ಇದನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ನಾಳೆ ಎರಡು ಗಂಟೆಗಳ ಕಾಲ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಅದುವೆ ಎಲ್ಲರ ಬಳಿಯೂ ಬೆಂಬಲ ಕೋರಿದ್ದಾರೆ. ಶಾಲಾ – ಕಾಲೇಜು, ಆಸ್ಪತ್ರೆ, ಸರ್ಕಾರಿ ಸೇವೆಗಳನ್ನು ಹೊರತು ಪಡಿಸಿ ಇನ್ನುಳಿದವರು ಬೆಂಬಲ ನೀಡುವಂತೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಮಕ್ಕಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ.

ನಾಳೆಯಿಂದ ಪಿಯುಸಿ ಪರೀಕ್ಷೆಗಳು ಆರಂಭಗುತ್ತಿವೆ. ಬೆಳಗ್ಗೆ 10.15ರಿಂದ ಪರೀಕ್ಷೆ ಆರಂಭವಾಗುತ್ತದೆ. ಇನ್ನು ಕಾಂಗ್ರೆಸ್ ಪಕ್ಷದ ನಾಯಕರು ಬೆಳಗ್ಗೆ 9 ಗಂಟೆಯಿಂದ ಬಂದ್ ಗೆ ಕರೆ ನೀಡಿದ್ದಾರೆ. ಪರೀಕ್ಷೆಗೆ ಹೋಗುವ ಸಮಯದಲ್ಲಿ ಪ್ರಯಾಣಕ್ಕೆ ಈ ಬಂದ್ ತೊಂದರೆಯಾಗಬಹುದು, ಸರಿಯಾದ ಸಮಯಕ್ಕೆ ಹಾಜರಾಗುವುದಕ್ಕೆ ಆಗದೆ ಇರಬಹುದು ಎಂಬುದು ವಿದ್ಯಾರ್ಥಿಗಳು ಹಾಗೂ ಪೋಷಕರ ಟೆನ್ಶನ್ ಆಗಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಭಾವೋದ್ವೇಗಕ್ಕೆ ಒಳಗಾಗಬೇಡಿ : ಆಪ್ತಮಿತ್ರ ವಿರೂಪಾಕ್ಷಪ್ಪಗೆ ಸಲಹೆ ನೀಡಿದ ರೇಣುಕಾಚಾರ್ಯ..!

ನಾಳೆ ಪಿಯು ಪರೀಕ್ಷೆ : ಕಾಂಗ್ರೆಸ್ ಬಂದ್ ದಿಢೀರನೇ ರದ್ದು..!