ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.04) : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಮೇ.10 ರಂದು ಮತದಾನ ನಡೆಯಲಿದ್ದು, ಈ ಸಂಬಂಧ ಮೇ 9ರಂದು ಮಸ್ಟರಿಂಗ್ ಹಾಗೂ ಮೇ 10ರಂದು ಡಿ-ಮಸ್ಟರಿಂಗ್ ದಿನಗಳಂದು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳು ತಾಲ್ಲೂಕು ಕೇಂದ್ರದಿಂದ ಇತರೆ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ.
ಚುನಾವಣೆ ಕಾರ್ಯಗಳಿಗೆ ಒಟ್ಟು 310 ವಾಹನ ನಿಯೋಜಿಸಲಾಗಿದೆ. ಪ್ರತಿ ವಾಹನಗಳು ತೆರಳುವ ಮಾರ್ಗದ ಬಗ್ಗೆ ನಾಮಫಲಕಗಳನ್ನು ಹಾಕತಕ್ಕದ್ದು. ಮಸ್ಟರಿಂಗ್ ಕಾರ್ಯ ನಡೆಯುವ ಮೊಳಕಾಲ್ಮೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಳ್ಳಕೆರೆ ಹೆಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ ನಗರದ ಬಿ.ಡಿ. ರಸ್ತೆಯಲ್ಲಿನ ಸರ್ಕಾರಿ ಕಲಾ ಕಾಲೇಜು, ಹಿರಿಯೂರು ನಗರದ ಮುಖ್ಯರಸ್ತೆಯ ಬಸ್ ಸ್ಟ್ಯಾಂಡ್ ಬಳಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹೊಸದುರ್ಗ ನಗರದ ಶ್ರೀಮತಿ ತಾಯಮ್ಮ ಎಡೆತೊರೆ ಸದ್ದಿವಾಲ್ ಲಿಂಗಯ್ಯ ಪದವಿ ಪೂರ್ವ ಕಾಲೇಜು, ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಜಾನೆ 6 ಗಂಟೆಗೆ ವಾಹನಗಳು ಸಿದ್ದವಿರಲಿವೆ.
ವಾಹನಗಳ ಕಾರ್ಯಾಚರಣೆ ಕರ್ತವ್ಯಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ನಿರೀಕ್ಷಕರುಗಳಾದ ಜಿ.ಎಂ.ಶಂಭುಶೇಖರ್ (ಮೊಬೈಲ್ ಸಂಖ್ಯೆ 7204986700) ಹಾಗೂ ಟಿ.ಎಸ್.ಮಂಜುನಾಥ ಪ್ರಸಾದ್ (ಮೊಬೈಲ್ ಸಂಖ್ಯೆ 9911165819) ಅವರನ್ನು ನೇಮಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಮತ್ತು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಕಚೇರಿ ವಿಭಾಗೀಯ ಸಂಚಲನಾಧಿಕಾರಿ ಜಿ.ಬಿ.ಮಂಜುನಾಥ (ಮೊಬೈಲ್ ಸಂಖ್ಯೆ 9606908962) ಇವರೊಂದಿಗೆ ನಿರಂತರ ಸಂಪರ್ಕ ಹಾಗೂ ಸಮನ್ವಯ ಸಾಧಿಸಿ ಚುನಾವಣೆಯ ಕೆಲಸ ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.