ಕರಾಚಿ : ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳು ಆತ್ನಹತ್ಯಾ ಬಾಂಬ್ ಸ್ಪೋಟಿಸಿಕೊಂಡು ಸಾವನ್ನಪ್ಪಿದ್ದಾಳೆ. ಆಕೆಯೊಂದಿಗೆ ಮೂವರು ಚೀನಾ ನಾಗರಿಕರು ಸೇರಿದಂತೆ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ. ಈ ಘಟನೆಯನ್ನು ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ ಮಹಿಳೆಯ ಪತಿ ಶ್ಲಾಘಿಸಿದ್ದಾರೆ. ಪತ್ನಿಯ ಕೃತ್ಯವನ್ನು ಮೆಚ್ಚಿಕೊಂಡಿದ್ದಾರೆ.
ಕರಾಚಿ ವಿಶ್ವವಿದ್ಯಾನಿಲಯದ ಚೀನಿ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ಮಂಗಳವಾರ ಸ್ಪೋಟ ಸಂಭವಿಸಿತ್ತು. ಶಾರಿ ಬಲೋಚ್ ಎಂಬಾಕೆ ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ್ದಾಳೆ. ಆಕೆಯ ಗಂಡ ಹಬಿಟನ್ ಬಶೀರ್ ಅಜ್ಞಾತ ಸ್ಥಳದಿಂದ ಟ್ವೀಟ್ ಮಾಡಿದ್ದಾರೆ. ಪತ್ನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಿಸ್ವಾರ್ಥ ಕೃತ್ಯದ ಬಗ್ಗೆ ಹೇಳಲು ಮಾತುಗಳಿಲ್ಲ. ಅವಳು ಈ ಕೃತ್ಯ ಮಾಡಿದ್ದಾಳೆ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ. ಮಹ್ರೋಚ್ ಮತ್ತು ಮೀರ್ ಹಾಸನ್ ಎಂತಹ ಮಹಾನ್ ಮಹಿಳೆ ನೀನು ಎಂದು ಯೋಚಿಸುತ್ತಾ ಬಹಳ ಹೆಮ್ಮೆಯಿಂದ ಮನುಷ್ಯರಾಗಿ ಬೆಳೆಯುತ್ತಾರೆ. ನೀನು ನಮ್ಮ ಜೀವನದ ಪ್ರಮುಖ ಭಾಗವಾಗಿ ಉಳಿಯುತ್ತಿ ಎಂದು ಟ್ವೀಟ್ ಮಾಡಿದ್ದಾರೆಂದು ಅಫ್ಘಾನ್ ಪತ್ರಕರ್ತ ಟ್ವೀಟ್ ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಇನ್ನು ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ ಶಾರಿಗೆ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಬಶೀರ್ ದಂತ ವೈದ್ಯರಾಗಿದ್ದಾರೆ. ಜೊತೆಗೆ ಆಕೆಯ ತಂದೆ ಉಪನ್ಯಾಸಕರಾಗಿದ್ದಾರೆ. ಈ ಘಟನೆಯನ್ನು ಚೀನಾ ರಾಯಭಾರ ಕಚೇರಿ ಖಂಡಿಸಿದೆ.
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟೋಕಾರ್ಪ್ ನ ಹೊಸ ಮಾದರಿಯ ದ್ವಿಚಕ್ರ…