in ,

ಹೊಸಬರ ಪ್ರಯತ್ನಕ್ಕೆ ಜೈ ಎಂದ ಪ್ರೇಕ್ಷಕರು..ಗ್ರೂಫಿ ಚಿತ್ರಕ್ಕೆ ಉತ್ತಮ ಸ್ಪಂದನೆ..

suddione whatsapp group join
ರವಿ ಅರ್ಜುನ್ ಚೊಚ್ಚಲ ನಿರ್ದೇಶನದ ಗ್ರೂಫಿ ಚಿತ್ರ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಹೊಸಬರ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಸಂದೇಶದೊಂದಿಗೆ ರಚನೆಯಾದ ಗ್ರೂಫಿ ಐಡಿಯಾ  ತೆರೆ ಮೇಲೆ ಅದ್ಧುತವಾಗಿ ಮೂಡಿಬಂದಿದೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಗುವಂತಹ ಅವಾಂತರಗಳನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಐದು ಮಂದಿಯ ಸಾವಿನ ಹಿಂದಿರುವ ರಹಸ್ಯದ ಸುತ್ತ ಕಥಾ ಹಂದರವನ್ನು ಹೆಣೆಯಲಾಗಿದೆ. ಅಂದಹಾಗೆ ಗ್ರೂಫಿ ಎಂದರೆ ಒಂದಿಷ್ಟು ಜನ ಒಟ್ಟಾಗಿ ಫೋಟೋ ತೆಗೆದುಕೊಳ್ಳುವುದು ಎಂದರ್ಥ. ಇಂದಿನ ಜನರೇಷನ್ಗೆ ತಕ್ಕಂತೆ ಸ್ಕ್ರೀನ್ ಪ್ಲೇ ಮಾಡಲಾಗಿದ್ದು, ಯೂತ್ಗಳಿಗೆ ಗ್ರೂಫಿ ಮೆಚ್ಚುಗೆಯಾಗಿದೆ.

ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿರುವ ಗ್ರೂಫಿ ಚಿತ್ರ ಆಗಸ್ಟ್ 20ರಂದು ತೆರೆ ಕಂಡಿದ್ದು, ಹೊಸಬರ ಪ್ರಯತ್ನಕ್ಕೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ಜಾಹೀರಾತು ಏಜೆನ್ಸಿ ಹಾಗೂ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಮುಖ್ಯಸ್ಥರಾಗಿರುವ ಕೆ,ಜಿ ಸ್ವಾಮಿ ಅವರು ಗ್ರೂಫಿ ಚಿತ್ರದ ಮೂಲಕ ಚಂದನವನದ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದು, ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನು ರವಿ ಅರ್ಜುನ್ ಆ್ಯಕ್ಷನ್ ಕಟ್ ಹೇಳಿರುವ ಗ್ರೂಫಿ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಆರ್ಯನ್, ಪದ್ಮಶ್ರೀ ಜೈನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಗ್ರೂಫಿ ಚಿತ್ರತಂಡ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸುಕಂಡಿದ್ದು, ಈ ತಂಡದಿಂದ ಮತ್ತಷ್ಟು ಚಿತ್ರಗಳು ಸ್ಯಾಂಡಲ್ವುಡ್ಗೆ ಬರಲಿ ಎನ್ನುವುದೇ ಪ್ರೇಕ್ಷಕರ ಆಶಯ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕರ್ನಾಟಕವನ್ನ ಧರ್ಮ ಛತ್ರವಾಗಲು ಬಿಡಲ್ಲ : ಹೀಗಂದಿದ್ಯಾಕೆ ಗೃಹಸಚಿವರು..?

ಈ ರಾಶಿಯವರು ತುಂಬ ಸಾಲ ನೀಡುವಂತರು!