ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 20 : ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನ ಜಾತ್ರೆ ಆರಂಭಗೊಂಡಿದ್ದು, ಗುರುವಾರ ಬೆಳಿಗ್ಗೆ ಅಲಂಕೃತ ಸಾರೋಟಿನಲ್ಲಿ ಕಣಿವೆಮಾರಮ್ಮನ ಮೆರವಣಿಗೆ ರಾಜಬೀದಿಗಳಲ್ಲಿ ಸಾಗಿತು.
ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಉಮೇಶ್‍ಬಾಬುರವರು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ಸಿಂಗರಿಸಿದ್ದ ಕಣಿವೆಮಾರಮ್ಮನ ಮೆರವಣಿಗೆ ಮದಕರಿವೃತ್ತದ ಮೂಲಕ ಕರುವಿನಕಟ್ಟೆ ಸರ್ಕಲ್, ಏಕನಾಥೇಶ್ವರಿ ಪಾದಗುಡಿ, ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗ, ಆನೆಬಾಗಿಲಿನಿಂದ ದೇವಸ್ಥಾನ ತಲುಪಿತು.
ಡೊಳ್ಳು ಕುಣಿತ, ತಮಟೆ, ಸೋಮನಕುಣಿತ, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿದ್ದರು. ಸೈಬರ್ ಕ್ರೈಂ ಡಿ.ವೈ.ಎಸ್ಪಿ. ಉಮೇಶ್ ಈಶ್ವರ್‍ನಾಯ್ಕ, ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್ಪಿ. ಗಣೇಶ್ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಮೆರವಣಿಗೆ ಸಂದರ್ಭದಲ್ಲಿದ್ದರು.
ಬೆಂಗಳೂರು; ಸ್ಪೀಕರ್ ಎಂಬುದನ್ನು ಮರೆತ ಬಿಜೆಪಿ ನಾಯಕರು ಅವರ ಪೀಠದ ಮೇಲೆಯೇ ಹತ್ತಿ, ಬಜೆಟ್ ಪ್ರತಿಯನ್ನು ಹರಿದು ಹಾಕಿ, ಅಗೌರವ…
ಬೆಂಗಳೂರು ನಗರದ ಜನತೆಗೆ ಸಂತಸದ ಸುದ್ದಿ! ಟಿವಿ9 ಕನ್ನಡವು ಅದ್ಭುತವಾದ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋವನ್ನು ಆಯೋಜಿಸುತ್ತಿದೆ. ಈ…
ಬೆಂಗಳೂರು: ಕಳೆದ ಎರಡ್ಮೂರು ದಿನದಿಂದ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಇಳಿಕೆಯಾಗಿದೆ. 22 ಕ್ಯಾರಟ್ ನ ಒಂದು ಗ್ರಾಂಗೆ 40…
ವಿಧಾನಸಭೆ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ಬಿಜೆಪಿ ಸದಸ್ಯರು ಹೈಡ್ರಾಮಾವನ್ನೇ ಮಾಡಿದ್ದಾರೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇಕಡಾ 4ರಷ್ಟು…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 21 : ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಹೆಚ್.ನಾಯ್ಕ (88 ವರ್ಷ) ಗುರುವಾರ…
ಸುದ್ದಿಒನ್, ಚಿತ್ರದುರ್ಗ : ಏಪ್ರಿಲ್ 1 ರಿಂದ 13 ರವರೆಗೆ ನಡೆಯುವ ಏಕನಾಥೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಕೋಟೆ…