ಇಷ್ಟು ದಿನ ಎದ್ದಿದ್ದ ಗಾಸಿಪ್ ಸುದ್ದಿಗೆ ಅದೇ ನಿಜ ಎಂಬಂತೆ ಸಮಂತಾ ಹಾಗೂ ನಾಗಚೈತನ್ಯ ನಿನ್ನೆ ಡಿವೋರ್ಸ್ ಘೋಷಿಸಿದ್ದಾರೆ. ನಾವಿಬ್ಬರು ಪರಸ್ಪರ ಒಪ್ಪಿಯೇ ಡಿವೋರ್ಸ್ ಪಡೀತಾ ಇದ್ದೀವಿ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಅಗಾಧ ಅಭಿಮಾನಿ ಬಳಗಕ್ಕೆ ನೋವುಂಟು ಮಾಡಿದೆ. ಇದರ ನಡುವೆ ಕಂಗನಾ ರಣಾವತ್ ಬೇರೆಯದ್ದೆ ವಿಚಾರ ಎಳೆದು ತಂದಿದ್ದಾರೆ.
ಬೇಡದೆ ವಿಚಾರಕ್ಕೆ ಕಂಗನಾ ಸುದ್ದಿಯಾಗೋದು ಹೆಚ್ಚು. ಎಲ್ಲಾ ವಿಚಾರಕ್ಕೂ ತಲೆ ಹಾಕಿ ವಿವಾದ ಸೃಷ್ಟಡಿಸೋದು ಕಂಗನಾ ಚಾಳಿ ಅದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೀಗ ಆ ಚಾಳಿಯನ್ನ ಸ್ಯಾಮಾ-ಚೈ ದಾಂಪತ್ಯದ ವಿಚಾರಕ್ಕೂ ಬಳಸಿದ್ದಾರೆ.
ಎಲ್ಲರಿಗೂ ಗೊತ್ತಿರೋ ವಿಚಾರ ಅಂದ್ರೆ ಅಮೀರ್ ಖಾನ್ ಹಾಗೂ ನಾಗಾರ್ಜುನ್ ಫ್ಯಾಮಿಲಿ ಆತ್ಮೀಯ ಬಂಧ ಹೊಂದಿದೆ. ಹೀಗಿರುವಾಗ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಕೂಡ ಒಂದು ಪಾತ್ರ ಮಾಡಿದ್ದಾರೆ. ಅದು ಅಮೀರ್ ಖಾನ್ ಒತ್ತಾಯದ ಮೇರೆಗೆ. ಹೀಗಾಗಿ ಅದಕ್ಕೂ ಡಿವೋರ್ಸ್ ಗೂ ತಾಳೆ ಮಾಡಿರೋ ಕಂಗನಾ ನೇರ ಆರೋಪವನ್ನ ಅಮಿರ್ ಖಾನ್ ಮೇಲಾಕಿದ್ದಾರೆ.
ಅಮಿರ್ ಖಾನ್ ಡಿವೋರ್ಸ್ ಕೊಡಿಸೋದರಲ್ಲಿ ಫೇಮಸ್. ಮೊದಲ ಹೆಂಡತಿ ಬಿಟ್ಟು ಕಿರಣ್ ರನ್ನ ಮದುವೆಯಾದ್ರೂ..ಇದೀಗ ಅವರನ್ನು ಬಿಟ್ಟಿದ್ದಾರೆ. ಅವರ ಸಹವಾಸ ಮಾಡಿದ ನಾಗಚೈತನ್ಯ ಕೂಡ ಹೆಂಡತಿಗೆ ಡಿವೋರ್ಸ್ ಕೊಟ್ಟಿದ್ದಾರೆ. ಗಂಡಸರದ್ದೇ ತಪ್ಪಿರುತ್ತೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ವಾದಿಸಿದ್ದಾರೆ.