ಚಿಕ್ಕಮಗಳೂರು: ಮಸೀದಿಗಳಲದಲಿ ಧ್ವನಿವರ್ಧಕದ ಬಗ್ಗೆ ಮಾತನಾಡಿರುವ ಕಾಳಿ ಸ್ವಾಮಿ ಕಾಳಿ ಕೂಗು ಅಂತ ಇದೆ ಅದು ಬೆಳಗ್ಗಿನ ಜಾವ 5 ಗಂಟೆಗೆ ಅವ್ರು ಯಾವಾಗ ಕೂಗ್ತಾರೋ ಆಗ ಕೂಗ್ತೇವೆ. ಮಹಮದೀಯರ ಕರ್ಕಶವನ್ನ ಕೇಳಿಸಿಕೊಳ್ಳುವುದಕ್ಕೆ ಆಗಲ್ಲ. ಬೆಳಗ್ಗೆ 5 ಗಂಟೆಯಿಂದ ಸಂಜೆ ವೇಳೆಗೆ ಐದು ಟೈಮ್ ಕೂಗ್ತಾರೆ. ಅದನ್ನ ನಿಲ್ಲಿಸುವುದಕ್ಕೆ ಕೋರ್ಟ್ ಆರ್ಡರ್ ಇದೆ. ಆ ಕೋರ್ಟ್ ಆರ್ಡರ್ ಅನ್ನಹ ಧಿಕ್ಕರಿಸಿದ್ದಾರೆ. ನಾವೀಗ ಕೋರ್ಟ್ ಆರ್ಡರ್ ಏನು ಎಂಬುದನ್ನು ತೋರಿಸಿಕೊಡಬೇಕಿದೆ. ನನ್ನ ಕಾನೂನು ಏನು ಎಂಬುದನ್ನು ತೋರಿಸಿಕೊಡಬೇಕಿದೆ. ನನ್ನ ಕಾನೂನಿಗೆ ಎಷ್ಡು ಶಕ್ತಿ ಇದೆ ಎಂಬುದನ್ನು ತೋರಿಸಿಕೊಡಬೇಕಿದೆ. ಕಾನೂನಿಗೆ ನಾವೂ ಹುರಿದುಂಬಿಸುವ ಕೆಲಸ ಮಾಡುತ್ತಿದ್ದೇವ ಎಂದಿದ್ದಾರೆ.
ಅವರು ಕೂಗುತ್ತಾರೆ ಅಂದ್ರೆ ನಮಗೂ ಕೂಗುವ ಅವಕಾಶ ಮಾಡಿಕೊಡಿ. ಬೇಡ ಅನ್ನೋದೆ ಆದರೆ ಅದನ್ನು ತೆಗಿಸಿ. ನಿಮಗೆ ತೆಗೆಸೋದಕ್ಕೆ ಆಗಲ್ಲ ನಮಗೆ ಕೂಗೋದಕ್ಕೂ ಬಿಡುತ್ತಿಲ್ಲ ಅಂದ್ರೆ ನಮ್ಮ ಮೇಲೆ ನೀವೂ ಏರಿಕೆ ಮಾಡುತ್ತಿದ್ದೀರಿ. ಹಿಂದೂ ಧರ್ಮದವರು ಮಾತ್ರ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕಾ..? ಅಲ್ಲ ಮೇಲಿಂದ ಬರೋ ತನಕ ಕೂಗುತ್ತಾರೆ ಎಂದರೆ ರಾಮ ಮೇಲಿಂದ ಬರುವ ತನಕ ಕೂಗೋಣಾ ಬಿಡಿ. ಅದನ್ನ ಯಾಕೆ ತಡಿತೀರಾ ನೀವು. ನಿಮಗೆ ತಡೆಯೋ ಶಕ್ತಿ ಇಲ್ಲ.
ಎಲ್ಲಾ ಸಂಘಟನೆಯವರು ನಿಂತು ಒಂದೇ ಸಲ ಮೈಕ್ ಕಟ್ಟಿ. ನಾನು ಬೇರೆ ಅವನು ಬೇರೆ ಅಲ್ಲ. ಹಿಂದೂಪರ ಸಂಘಟನೆಯೆಲ್ಲ ನಂದೆ. ಖಂಡಿತವಾಗಲೂ ಇದೊಂದು ದೊಡ್ಡ ಕೂಗು ಶುರುವಾಗಬೇಕು. ಕ್ಯಾಸೆಟ್ ಹಾಕುದ್ರೆ ತಾನೇ ಸಮಸ್ಯೆ ಬೇಡ ನಾವೇ ಐದು ಟೈಮ್ ಕೂಗೋಣಾ. ನಾವೂ ಕೂಗಿದಾಗಲೇ ನಮಗೆ ಅರ್ಥ ಸಿಗೋದು ನ್ಯಾಯ ಸಿಗೋದು. ಇದು ಬೇಡ ಅನ್ನೋದೆ ಆದರೆ ಸರ್ಕಾರ ನಾಳೆ ಬೆಳಗ್ಗೆ ಸ್ಪೀಕರ್ ತೆಗೆಯೋ ವ್ಯವಸ್ಥೆ ಮಾಡಬೇಕು ಎಂದು ಕಾಳಿ ಸ್ವಾಮಿ ಆಗ್ರಹಿಸಿದ್ದಾರೆ.
ಸುದ್ದಿಒನ್ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ 51 ನೇ ಶತಕವನ್ನು ಗಳಿಸಿದರು. ಟೀಮ್ ಇಂಡಿಯಾ ಪಾಕಿಸ್ತಾನವನ್ನು 6…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…