ಶಿವರಾತ್ರಿಗೆ ಕಬೀರಾನಂದಾಶ್ರಮ, ನವರಾತ್ರಿಗೆ ಮುರುಘಾಮಠ ಹೆಸರುವಾಸಿ : ಎಸ್.ಕೆ. ಬಸವರಾಜನ್

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 28 : ಮಠಗಳನ್ನು ನಿರ್ಮಾಣ ಮಾಡುವುದು ಸುಲಭ ಆದರೆ ಮನುಷ್ಯರ ಮನಸ್ಸುಗಳನ್ನು ಕಟ್ಟುವುದು ಕಷ್ಟದ ಕೆಲಸವಾಗಿದೆ, ಆದರೆ ಶಿವಲಿಂಗಾನಂದ ಶ್ರೀಗಳು ಇಲ್ಲಿನ ಭಕ್ತರ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಮಾಡಿದ್ದರಿಂದ ಅವರಿಗೆ ಮಠವನ್ನು ಕಟ್ಟುವುದರ ಕಷ್ಟವಾಗಲಿಲ್ಲ ಎಂದು ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್ ತಿಳಿಸಿದರು.

ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದ ಆಶ್ರಮದವತಿಯಿಂದ ನಡೆಯುವ 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಂತಿಮ ದಿನವಾದ ನಿನ್ನೆ ಸಂಜೆ ನಡೆದ ಕೌದಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಿತ್ರದುರ್ಗದಲ್ಲಿ ಶಿವರಾತ್ರಿ ಎಂದರೆ ಕಬೀರಾನಂದಾಶ್ರಮ ನವರಾತ್ರಿ ಎಂದರೆ ಮುರುಘಾಮಠ ಎಂಬಂತೆ ಇದೆ. ಈ ಎರಡು ಮಠಗಳು ಸಹಾ ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಭಕ್ತರಿಗೆ ಜ್ಞಾನದ ಅಮೃತವನ್ನು ಉಣ ಬಡಿಸುತ್ತಿವೆ. ಶ್ರೀಗಳು ಈ ಮಠಕ್ಕೆ ಪೀಠಾಧ್ಯಕ್ಷರಾದ ಮೇಲೆ ಹೊಸದಾದ ರೂಪವನ್ನು ನೀಡಿದ್ದಾರೆ. ಶಿವರಾತ್ರಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳುವಳಿಕೆಯನ್ನು ನೀಡುವಂತ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದು ಇದರೊಂದಿಗೆ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದರು.

ಈ ಆಶ್ರಮಕ್ಕೆ ಶ್ರೀಗಳು ಪೀಠಾಧೀಪತಿಯಾಗಿ ಬಂದಾಗ ಈ ಆಶ್ರಮದಲ್ಲಿ ಏನು ಇರಲಿಲ್ಲ, ಜಾಲಿ ಬೆಳದ ಪ್ರದೇಶವಾಗಿತ್ತು ಈಗ ಇದನ್ನು ಉತ್ತಮವಾದ ಪ್ರದೇಶವನ್ನಾಗಿ ಮಾಡಿದ್ದಾರೆ ಇದರ ಹಿಂದೆ ಗುರುಗಳ ಶ್ರಮ ಅಧಿಕವಾಗಿದೆ. ಮಠವನ್ನು ಕಟ್ಟುವುದು ಕಷ್ಠದ ಕೆಲಸವಲ್ಲ ಆದರೆ ಮುನುಷ್ಯರ ಮನಸ್ಸುಗಳನ್ನು ಕಟ್ಟುವುದು ಕಷ್ಠದ ಕೆಲಸ ಆದರೆ ಶಿವಲಿಂಗಾನಂದ ಶ್ರೀಗಳು ಮಠವನ್ನು ಕಟ್ಟುವುದಕ್ಕಿಂತ ಮುನ್ನಾ ಇಲ್ಲಿನ ಭಕ್ತರ ಮನಸ್ಸುಗಳನ್ನು ಕಟ್ಟಿದ್ದಾರೆ ಇದರಿಂದ ಇವರಿಗೆ ಮಠ ನಿರ್ಮಾಣ ಮಾಡುವುದು ಅಷ್ಟು ಕಷ್ಟದ ಕೆಲಸವಾಗಲಿಲ್ಲ, ಶ್ರೀಗಳಿಗೆ ಒಳ್ಳೆಯ ಮನಸ್ಸು, ಒಳ್ಳೇಯ ಭಾವನೆಗಳು ಇವೆ, ತಮ್ಮ ಬಳಿ ಬರುವ ಯಾವುದೇ ಭಕ್ತರಾದರೂ ಅವರನ್ನು ಉತ್ತಮ ಮನಸ್ಸಿನಿಂದ ಆರ್ಶೀವಾದವನ್ನು ಮಾಡುತ್ತಾರೆ. ಇವರು ಮಾತೃ ಹೃದಯದವರಾಗಿದ್ದಾರೆ. ಇವರು ಇತರೆ ಶ್ರೀಗಳಿಗೆ ಮಾದರಿಯಾಗಿದ್ದಾರೆ ಇವರನ್ನು ಇತರೆ ಶ್ರೀಗಳು ಅನುಸರಿಸಬೇಕಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಶ್ರೀಗಳು ಮಾತನಾಡಿ, ಸಿದ್ದಾರೂಢ ಸಂಪ್ರದಾಯದ ಮಠಗಳು ಶಿವರಾತ್ರಿ ಆಚರಣೆಯನ್ನು ಮಾಡುವುದರ ಮೂಲಕ ಜನತೆಗೆ ಉತ್ತಮವಾದ ಸಂದೇಶವನ್ನು ನೀಡುತ್ತಿದ್ದಾರೆ. ಕೂನೆಯಲ್ಲಿ ಕೌದಿ ಪೂಜೆಯನ್ನು ನಡೆಸುವುದರ ಮೂಲಕ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತಾರೆ. ಮಾನವನ ಬದುಕು ಎಷ್ಟೇ ಸುಂದರವಾಗಿದ್ದರೂ ಸಹಾ ಒಂದು ದಿನ ಚಿಂದಿಯಂತೆ ಆಗುತ್ತದೆ ಇದನ್ನು ಸರಿಪಡಿಸಲು ಸನ್ಯಾಸಿಗಳಿಂದ ಮಾತ್ರ ಸಾಧ್ಯವಿದೆ ಎಂಬ ಸಂದೇಶವನ್ನು ನೀಡುತ್ತದೆ. ಭಾರತೀಯ ಸಂಸ್ಕøತಿಯಲ್ಲಿ ಸನ್ಯಾಸಿಗಳಿಗೆ ಗೌರವಿದೆ. ಇಲ್ಲಿನ ಮಠಗಳು ಸಹಾ ಉತ್ತಮವಾದ ಸಮಾಜ ಸೇವೆಯನ್ನು ಮಾಡುತ್ತಿವೆ. ಶಿಕ್ಷಣ, ಅನ್ನದಾಸೋಹ ಧರ್ಮ ದಾಸೋಹವನ್ನು ನೀಡುತ್ತಿವೆ. ರಾಮಕೃಷ್ಣ ಪರಹಂಸ, ಸ್ವಾಮಿ ವಿವೇಕಾನಂದ ರವರು ಉತ್ತಮ ಸನ್ಯಾಸಿಗಳಾಗಿದ್ದರಿಂದ ಅವರನ್ನು ಇಂದಿಗೂ ಸಹಾ ಜನತೆ ನೆನೆಯುತ್ತಾರೆ. ಅವರಂತೆ ಇತರೆ ಸನ್ಯಾಸಿಗಳು ಆಗಬೇಕಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಸನ್ಯಾಸಿಗಳಾದವರು ಲೋಕಕ್ಕೆ ಆದರ್ಶ ವ್ಯಕ್ತಿಗಳಾಗಿದ್ದಾರೆ, ತಮ್ಮ ಜೀವವನ್ನೇ ಸಮಾಜದ ಪ್ರಗತಿಗಾಗಿ ಅರ್ಪಣೆಯನ್ನು ಮಾಡುತ್ತಾರೆ. ಭಗವಂತವನ್ನು ಕಾಣಲು ಗುರುವಿನ ಮೂಲಕವೇ ದಾರಿಯಾಗಿದೆ, ಗುರು ಇಲ್ಲದೆ ಭಗವಂತ ದರ್ಶನ ಕಷ್ಠವಾಗುತ್ತದೆ. ಗುರುವಿನ ದಾಸನಾದರೇ ಮುಕ್ತಿಯನ್ನು ಗಳಿಸಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಬದರಿನಾಥ್, ಕಬೀರಾನಂದಾಶ್ರಮದ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ಉದ್ಯಮಿಗಳಾದ ರುದ್ರಮುನಿ, ನಗರಸಭಾ ಸದಸ್ಯರಾದ ವೆಂಕಟೇಶ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ನಿರಂಜನ ಮೂರ್ತಿ, ಯೋಗಿಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

suddionenews

Recent Posts

ದ್ವಿತೀಯ ಪಿಯು ಫಲಿತಾಂಶ ; ದಾವಣಗೆರೆಯಲ್ಲಿ ಕಳೆದ ವರ್ಷಕ್ಕಿಂದ ಕುಸಿದ ರಿಸಲ್ಟ್..!

ದಾವಣಗೆರೆ; ಇಂದು ದ್ವಿತೀಯ ಪಿಯು ಫಲಿತಾಂಶವನ್ನು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಮಕ್ಕಳು ಫೇಲ್…

2 hours ago

ಚಿತ್ರದುರ್ಗ : ಲಕ್ಷ್ಮಮ್ಮ ನಿಧನ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಹಾಗೂ ಛಾಯಾಗ್ರಾಹಕ ಶಂಕರ್ ಇವರ ತಾಯಿ ಲಕ್ಷ್ಮಮ್ಮ…

2 hours ago

ಉತ್ತಮ ಸಾಧನೆಯ ಗರಿ ಸಾಣಿಕೆರೆ ವೇದ ಕಾಲೇಜು ಜಯಭೇರಿ

ಚಳ್ಳಕೆರೆ, ಏಪ್ರಿಲ್. 08 : 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಪ್ರತಿ ವರ್ಷದ ಹಾಗೆ ಈ ಬಾರಿಯೂ…

2 hours ago

ದ್ವಿತೀಯ ಪಿಯುಸಿ ಫಲಿತಾಂಶ : ಚಿತ್ರದುರ್ಗ ಜಿಲ್ಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ…!

ಚಿತ್ರದುರ್ಗ. ಏ.08: ಜಿಲ್ಲೆಯಲ್ಲಿ ಕಳೆದ ಮಾರ್ಚ್ 01 ರಿಂದ 20ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ…

4 hours ago

ಏಪ್ರಿಲ್ 21 ಮತ್ತು 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ : ಕೆ.ರವೀಂದ್ರಶೆಟ್ಟಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…

4 hours ago

ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ : ಸಚಿವ ಡಿ.ಸುಧಾಕರ್ ಭರವಸೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…

5 hours ago