in ,

ಚಿತ್ರದುರ್ಗದಲ್ಲಿ ನಡೆದ ಕಬಡ್ಡಿ ಪ್ರೀಮಿಯರ್ ಲೀಗ್ :  ಕಂತಕ ತಂಡಕ್ಕೆ ಪ್ರಥಮ ಬಹುಮಾನ

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಚಿತ್ರದುರ್ಗ ಸ್ಪೋರ್ಟ್ಸ್‌ ಕ್ಲಬ್ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ 22 ವರ್ಷದೊಳಗಿನ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಪ್ರೋ ಮಾದರಿಯ ಕಬಡ್ಡಿ ಪ್ರೀಮಿಯರ್ ಲೀಗ್ ಸೀಜನ್-3 ಪಂದ್ಯಾವಳಿಯಲ್ಲಿ ಕಂತಕ ತಂಡ ಪ್ರಥಮ ಬಹುಮಾನ ಐವತ್ತು ಸಾವಿರ ರೂ. ಹಾಗೂ ಆಕರ್ಷಕ ಪಾರಿತೋಷಕವನ್ನು ಪಡೆದುಕೊಂಡಿತು.

ಚಿತ್ರದುರ್ಗ ಡೆವಿಲ್ಸ್ ತಂಡ ದ್ವಿತೀಯ ಬಹುಮಾನ ನಲವತ್ತು ಸಾವಿರ ರೂ. ಹಾಗೂ ಪಾರಿತೋಷಕ ಗಿಟ್ಟಿಸಿಕೊಂಡು ಸಮಾಧಾನಪಟ್ಟುಕೊಂಡಿತು.

ಯುವರತ್ನ ತಂಡ ಮೂರನೆ ಬಹುಮಾನ ಮೂವತ್ತು ಸಾವಿರ ರೂ. ಹಾಗೂ ಟ್ರೋಪಿ  ಪಡೆದುಕೊಂಡರೆ ನಾಲ್ಕನೆ ಬಹುಮಾನ ಇಪ್ಪತ್ತು ಸಾವಿರ ರೂ. ಹಾಗೂ ಪಾರಿತೋಷಕವನ್ನು ಮದಕರಿ ತಂಡ ತನ್ನದಾಗಿಸಿಕೊಂಡಿತು.

ಸೆಮಿಪೈನಲ್‍ನಲ್ಲಿ ಚಿತ್ರದುರ್ಗ ಡೆವಿಲ್ಸ್ ಹಾಗೂ ಯುವರತ್ನ ತಂಡದವರು ಗೆಲುವಿಗಾಗಿ ರೋಚಕ ಸೆಣಸಾಟ ನಡೆಸಿ ಅಂತಿಮವಾಗಿ ಎರಡು ಪಾಯಿಂಟ್‍ನಿಂದ ಕಂತಕ ತಂಡ ಎದುರಾಳಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಅಂತಿಮವಾಗಿ ಕಂತಕ ಹಾಗೂ ಚಿತ್ರದುರ್ಗ ಡೆವಿಲ್ಸ್ ತಂಡ ಫೈನಲ್ ಪಂದ್ಯದಲ್ಲಿ ಪ್ರಥಮ ಬಹುಮಾನಕ್ಕಾಗಿ ಜಿದ್ದಾಜಿದ್ದಿನ ರೋಚಕ ಸೆಣಸಾಟ ನಡೆಸಿ ಕೊನೆಗೆ ಕಂತಕ ತಂಡ ಎರಡು ಪಾಯಿಂಟ್‍ಗಳಿಂದ ಜಯಗಳಿಸಿ ಪ್ರಥಮ ಬಹುಮಾನ ಹಾಗೂ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಯುವರತ್ನ ತಂಡದ ಗಗನ್ ಉತ್ತಮ ದಾಳಿಗಾರ, ಉತ್ತಮ  ಹಿಡಿತಗಾರ ಚಿತ್ರದುರ್ಗ ಡೆವಿಲ್ಸ್‍ನ ಭರತ್‍ಗೌಡ, ಪಂದ್ಯಾವಳಿಯ ಸರ್ವೋತ್ತಮ ಆಟಗಾರನಾಗಿ ಕಂತಕ ತಂಡದ ದರ್ಶನ್‍ಗೌಡ ಇವರುಗಳು ಹೊರಹೊಮ್ಮಿದರು.

ರಾತ್ರಿ 12-30 ರವರೆಗೆ ನಡೆದ ಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಕಿಕ್ಕಿರಿದು ಸೇರಿ ಆಟಗಾರರಲ್ಲಿ ಹುರುಪು ತುಂಬುತ್ತಿದ್ದರು.

ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್, ಆಹಾರ ನಿರೀಕ್ಷಕ ತಿಪ್ಪೇಶಪ್ಪ, ಆದಿಶಕ್ತಿ ಎಲೆಕ್ಟ್ರಿಕಲ್ಸ್ ನ ಇರ್ಫಾರ್, ಯುವ ವಕೀಲ ಪ್ರತಾಪ್ ಜೋಗಿ, ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜ್, ನಗರಸಭೆ ಸದಸ್ಯ ಜೈನುಲ್ಲಾಬ್ದಿನ್, ಕಬಡ್ಡಿ ಪಂದ್ಯಾವಳಿಯ ಸಂಘಟಕರುಗಳಾದ ಪಿ.ಸಿ.ಮುರುಗೇಶ್, ನಾಗಭೂಷಣ್, ಸತ್ಯನಾರಾಯಣ ನಾಯ್ಡು, ನರಸಿಂಹರೆಡ್ಡಿ ಇನ್ನು ಅನೇಕರು ಬಹುಮಾನ ವಿತರಣೆಯಲ್ಲಿ ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚಿತ್ರದುರ್ಗದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ಕಾಟಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

ಹಿರಿಯೂರಿನ ವಾಗ್ದೇವಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್