ಮುಂಬೈ: ಕೊರೊನಾ ವೈರಸ್ ಇರುವ ಕಾರಣ ವಿದೇಶದಿಂದ ಬಂದವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಳಜಿವಹಿಸಲಾಗುತ್ತದೆ. ಹೀಗಾಗಿ ಜೂಹಿ ಚಾವ್ಲಾ ಮ್ಯಾಚ್ ಮುಗಿಸಿಕೊಂಡು ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗಲೂ ತಪಾಸಣೆ ವಿಚಾರಕ್ಕೆ ಕೋಪ ಮಾಡಿಕೊಂಡಿದ್ದಾರೆ.
Request the Airport and Govt authorities to IMMEDIATELY deploy more officials and counters at the Airport Health clearance … all passengers stranded for hours after disembarking .. … flight after flight after flight …..Pathetic , shameful state ..!!@AAI_Official pic.twitter.com/rieT0l3M54
— Juhi Chawla (@iam_juhi) November 11, 2020
ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ ಬ್ಯಾಗ್ಗಳ ತಪಾಸಣೆ ಸೇರಿ ಸಾಕಷ್ಟು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಕೂಡ ಮಾಡಿ ಕಳುಹಿಸಲಾಗುತ್ತಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಡಿಮೆ ಸಿಬ್ಬಂದಿ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ನಿಂತಿದ್ದರು. ಹೀಗಾಗಿ ಅಲ್ಲಿ ನೂಕು ನುಗ್ಗಲು ಆಗುವಂಥ ಸ್ಥಿತಿ ಕೂಡ ಉಂಟಾಗಿತ್ತು.
ಇದನ್ನು ಗಮನಿಸಿದ ನಟಿ ಜೂಹಿ ಚಾವ್ಲಾ, ವಿಡಿಯೋ ಮಾಡಿ ಶೀಘ್ರವೇ ವಿಮಾನ ನಿಲ್ದಾಣ ಹಾಗೂ ಸರ್ಕಾರಿ ಅಧಿಕಾರಿಗಳು ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಹೆಚ್ಚು ಕೌಂಟರ್ ತೆರೆಯಬೇಕು ಮತ್ತು ಹೆಚ್ಚು ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಲ್ಲಿ ಗಂಟೆಗಟ್ಟಲೆ ನಾವು ಕಾಯಬೇಕಾಯಿತು. ನಾಚಿಕೆಗೇಡಿನ ಸ್ಥಿತಿ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಬಗ್ಗೆ ಭಾರತೀಯ ವಿಮಾನ ಪ್ರಾಧಿಕಾರ ಪ್ರತಿಕ್ರಿಯಿಸಿದ್ದು, ಆದ ತೊಂದರೆಗೆ ಕ್ಷಮೆ ಕೇಳುತ್ತೇವೆ ಮತ್ತು ಯಾವ ವಿಮಾನ ಎಂದು ತಿಳಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಐಪಿಎಲ್ ಮುಗಿಸಿ ದುಬೈನಿಂದ ವಾಪಸ್ಸಾಗುತ್ತಿದ್ದ ನಟಿ, ಕೆಕೆಆರ್ ಸಹ ಮಾಲಕಿ ಜೂವಿ ಚಾವ್ಲಾ ಮುಂಬೈ ಏರ್ ಪೋರ್ಟ್ ತಲುಪಿದ್ದರು. ಏರ್ ಪೋರ್ಟ್ ನಲ್ಲಿ ನಡೆದ ಘಟನೆಯಿಂದ ಸಿಟ್ಟಾಗಿದ್ದಾರೆ. ಅಲ್ಲಿ ನಡೆದ ಘಟನೆಯನ್ನು ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
