ದಾವಣಗೆರೆ; ಜಿಲ್ಲೆಯ ಸುತ್ತಮುತ್ತ ಕೆಲಸ ಹುಡುಕುತ್ತಿರುವ ಸಿಹಿ ಸುದ್ದಿ ಇಲ್ಲಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ತೆರವಾಗಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಸಮಾಜ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ನೀವಾಗಿದ್ದರೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಈ ಹುದ್ದೆಗಳಿಗೆ ಅರ್ಜಿಗಳನ್ನ ಸಲ್ಲಿಕೆ ಮಾಡುವವರು ಸಂವಹನ ಕಲೆಯನ್ನ ಹೊಂದಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಪಡೆದಿರಬೇಕು, ಎಂಎಸ್ ಆಫೀಸ್, ಇಂಟರ್ನೆಟ್ ಬಳಕೆಯಲ್ಲಿ ಹೆಚ್ಚಿನ ಜ್ಞಾನ ಹೊಂದಿರಬೇಕಾಗುತ್ತದೆ. 3-5 ವರ್ಷಗಳ ಕಾಲ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 48,400 ಸಾವಿರದವರೆಗೂ ಶುಲ್ಕ ನಿಗದಿ ಮಾಡಲಾಗಿದೆ.
ಆಸಕ್ತರು ಅರ್ಜಿಯನ್ನು ಸ್ವಯಂ-ದೃಢೀಕೃತ ಪ್ರತಿಗಳು ಸ್ವ-ವಿವರದೊಂದಿಗೆ ಉಪ ಆಯುಕ್ತರು, ವಿಪತ್ತು ನಿರ್ವಹಣಾ ಕೋಶ, ಉಪ ಆಯುಕ್ತರ ಕಚೇರಿ, ಪ್ಲಾಟ್ ಸಂಖ್ಯೆ.77, ಕರೂರ್ ಕೈಗಾರಿಕಾ ಪ್ರದೇಶ, ಹಳೆಯ ಪಿ.ಬಿ. ರಸ್ತೆ, ದಾವಣಗೆರೆ ಇಲ್ಲಿಗೆ ಇದೇ ಮಾ.21 ರೊಳಗೆ ನೊಂದಣಿ ಅಂಚೆ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9945235035 ಸಂಪರ್ಕ ಮಾಡಿ, ಮಾಹಿತಿಯನ್ನು ಪಡೆಯಬಹುದಾಗಿದೆ. ಮಾರ್ಚ್ 21ಕ್ಕೆ ಕೊನೆಯ ದಿನಾಂಕವಾಗಿದೆ. ಹೀಗಾಗಿ ಆಸಕ್ತರು, ಈ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಅದರಲ್ಲೂ ಸ್ನಾತಕೋತ್ತರ ಪದವಿ ಮುಗಿಸಿ, ದಾವಣಗೆರೆ ಜಿಲ್ಲೆಯಲ್ಲಿಯೇ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಬೆಸ್ಟ್ ಅವಕಾಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಯನ್ನು ಹಾಕಿದ್ದು, ಅದಕ್ಕೆ ಕಾಂಟ್ಯಾಕ್ಟ್ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಬಹುದಾಗಿದೆ.
ಈ ರಾಶಿಯವರು ಹೊಸದಾಗಿ ವ್ಯಾಪಾರ ಪ್ರಾರಂಭ ಮಾಡಿದ್ದಾರೆ ಕೈಹಿಡಿದರೆ ಸಾಕು, ಈ ರಾಶಿಯವರು ಮದುವೆಯಾಗಿ ತಿಂಗಳಾಯಿತು ಕಲಹಗಳು ಶುರು, ಮಂಗಳವಾರದ…
ಹುಬ್ಬಳ್ಳಿ; ಜೈನ ಸಮುದಾಯದವರು ಸರ್ಕಾರಕ್ಕೆ ಒಂದಷ್ಟು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಅದರಲ್ಲೂ ಜೈನ ನಿಗಮ ಸ್ಥಾಪನೆ ಮಾಡುವ ಬಗ್ಗೆ ಹೆಚ್ಚು ಒತ್ತು…
ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬ. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೆಲ್ಲಾ ಸಮಾಧಿ ಬಳಿ ಹೋಗಿ…
ಚಿತ್ರದುರ್ಗ. ಮಾರ್ಚ್17: ಲಸಿಕೆಗಳು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತವೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು. ನಗರದ…
ಚಿತ್ರದುರ್ಗ.ಮಾರ್ಚ್.17:ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…