BPL ಕಾರ್ಡ್ ಇದ್ರೆ ಪೆಟ್ರೋಲ್ ಬೆಲೆಯಲ್ಲಿ 25 ರೂ. ಇಳಿಕೆಯಾಗುತ್ತೆ..!

ನವದೆಹಲಿ: ದಿನೇ ದಿನೇ ಹೆಚ್ಚಾಗುತ್ತಿರುವ ಬೆಲೆ ಏರಿಜೆ ಜನರ ತಲೆ ಬಿಸಿ ಮಾಡಿದೆ. ಅಷ್ಟೇ ಅಲ್ಲ ಅದರಲ್ಲಿ ಪೆಟ್ರೋಲ್ ಬೆಲೆ ಏರಿಕೆ ಅಂತು ಮಧ್ಯಮ ವರ್ಗದ ವಾಹನ ಸವಾರನ ಜೀವನ ನಡೆಸೋದೆ ಕಷ್ಟದ ರೀತಿ ಆಗಿದೆ. ಆದ್ರೆ ಅಲ್ಲೊಂದು ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಕೇಳಿ ಮಧ್ಯಮ ವರ್ಗದ ಹಾಗೂ ಬಡ ಕುಟುಂಬದವರು ಫುಲ್ ಖುಷಿಯಾಗಿದ್ದಾರೆ.

ಹೌದು ಜಾರ್ಖಂಡ್ ರಾಜ್ಯ ತಮ್ಮ ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಖುಷಿ ಸುದ್ದಿಯೊಂದನ್ನ ನೀಡಿದೆ. ಪ್ರತಿ ಲೀಟರ್ ಬೆಲೆಗೆ 25 ರೂಪಾಯಿ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಆದ್ರೆ ಅದಕ್ಕೆ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇರಲೇಬೇಕು.

ಹೌದು, ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಬಿಪಿಎಲ್ ಕಾರ್ಡ್ ತೋರಿಸಿದವರಿಗೆ ಪೆಟ್ರೋಲ್ ಬೆಲೆಯಲ್ಲಿ 25 ರೂಪಾಯಿ ಇಳಿಕೆ ಮಾಡಲಾಗುತ್ತದೆ. ಈ ಸಂಬಂಧ ಮಾತನಾಡಿರುವ ಸಿಎಂ ಹೇಮಂತ್, ಪೆಟ್ರೋಲ್ ಬೆಲೆ ನಿರಂತರ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಇದರಿಂದ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಜನವರಿ 26ರಿಂದ ಇದರ ಲಾಭ ಪಡೆಯಬಹುದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *