ಮುಂಬೈ: ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅಂದ್ರೆ ಹೀಗ್ಲೂ ಅಭಿಮಾನಿಗಳು ಹುಚ್ಚೆಂದು ಕುಣಿತಾರೆ. ಅವರು ಎಲ್ಲರನ್ನು ಅಗಲಿ ಮೂರು ವರ್ಷಗಳೇ ಕಳೆದಿವೆ. ಆದ್ರೆ ಅವರ ಸಿನಿಮಾಗಳಲ್ಲೇ ಶ್ರೀದೇವಿಯನ್ನ ಜೀವಂತವಾಗಿಟ್ಟಿದ್ದಾರೆ.
ಶ್ರೀದೇವಿ ಕೂಡ ಮಕ್ಕಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅಮ್ಮನಿಗಿಂತ ಹೆಚ್ಚಾಗಿ ಫ್ರೆಂಡ್ ಆಗಿಯೇ ಇದ್ದರು. ಇಂಥ ಅಮ್ಮನನ್ನು ಕಳೆದುಕೊಂಡಿರುವ ಜಾಹ್ನವಿ ಮತ್ತು ಖುಷಿ ಆಗಾಗ ನೆನೆಯುತ್ತಿರುತ್ತಾರೆ. ಜಾಹ್ನವಿ ಅಮ್ಮನನ್ನು ನೆನೆದು ಭಾವಾನಾತ್ಮಕ ಪೋಸ್ಟ್ ಹಾಕಿದ್ದಾರೆ.
ಐ ಲವ್ ಯೂ ಲಬ್ಬು..ನೀನು ವಿಶ್ವದ ಬೆಸ್ಟ್ ಮಗು ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಜಾಹ್ನವಿ ತಾಯಿಯಲ್ಲಿ ಮಗುವಿನ ಹೃದಯ ಕಂಡಿದ್ದಾರೆ. ಅದು ಈ ಪೋಸ್ಟ್ ನಲ್ಲಿ ಗೊತ್ತಾಗುತ್ತಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಖುಷಿ ಕಪೂರ್, ಬೋನಿ ಕಪೂರ್ ಕೂಡ ಶ್ರೀದೇವಿಯನ್ನು ನೆನಪು ಮಾಡಿಕೊಂಡಿದ್ದಾರೆ.
ನಟಿ ಶ್ರೀದೇವಿ 2018ರ ಫೆಬ್ರವರಿ 24 ರಂದು ದುಬೈನಲ್ಲಿ ನಿಧನರಾಗಿದ್ದರು. ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದ ಶ್ರೀದೇವಿ ಹೋಟೆಲ್ವೊಂದರ ಬಾತ್ಟಾಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.


