ಚಿತ್ರದುರ್ಗ, (ಮಾ.09) : ಬೀದರ್ ಜಿಲ್ಲೆ ಬಸವಕಲ್ಯಾಣದಿಂದ ಆರಂಭವಾಗಿರುವ ಜನಾಂದಲೋನ ಮಹಾಮೈತ್ರಿಯ ಜನ ಜಾಗೃತಿ ಜಾಥಾವು ಮಾ.11ರ ಶುಕ್ರವಾರ ಚಿತ್ರದುರ್ಗವನ್ನು ತಲುಪಲಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರ ರೈತ ವಿರೋಧಿಯಾದ ಮೂರು ಕೃಷಿ ಕಾನೂನುಗಳನ್ನು ವಾಪಾಸ್ಸ್ ಪಡೆದಿದೆ.ಆದರೆ ಕರ್ನಾಟಕ ರಾಜ್ಯದಲ್ಲಿನ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳಾದ ಎಪಿಎಂಸಿ. ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂಸುಧಾರಣಾ ಮಸೂದೆ, ಗೋಹತ್ಯೆ ಕಾಯ್ದೆ, ಬೆಂಬಲ ಬೆಲೆ ಖಾತರಿ ಪಡಿಸುವ ಕಾನೂನನ್ನು ಜಾರಿ ಮಾಡಲು ಆಗ್ರಹಿಸಲಾಗಿದೆ. ಇದೇ ರೀತಿ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾಟ್ ಮೀಟರ್ ಆಳವಡಿಕೆಯನ್ನು ಸಹಾ ಮಹಾಮೈತ್ರಿ ವಿರೋಧಿಸುತ್ತಿದೆ ಎಂದರು.

ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ರಾಜ್ಯದಲ್ಲಿ ಮೂರು ಕಡೆಯಿಂದ ಜನ ಜಾಗೃತಿ ಜಾಥಾ ಪ್ರಾರಂಭವಾಗಿದೆ. ಮಾ.1 ರಿಂದ ಬಸವಕಲ್ಯಾಣದಿಂದ ಆರಂಭವಾಗಿರುವ ಜಾಥಾವೂ ಗುಲ್ಬರ್ಗಾ ರಾಯಚೂರು, ವಿಜಾಪುರ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ ಮೂಲಕ ಮಾ.11ರ ಶುಕ್ರವಾರ ಚಿತ್ರದುರ್ಗವನ್ನು ತಲುಪಿದೆ.

ಅಂದು ಸಂಜೆ 4 ಘಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ. ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷರಾದ ಎಸ್.ಆರ್.ಹಿರೇಮಠ್ ಜಾಥಾವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶಂಕರಪ್ಪ ತಿಳಿಸಿದರು.
ಸ್ವರಾಜ್ ಇಂಡಿಯಾದ ಅಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಮಹಾಮೈತ್ರಿ ಕೇವಲ ಒಂದು ಸಂಘಟನೆಯಲ್ಲ ಬದಲಾಗಿ ಜನಪರ ಸಂಘಟನೆಗಳ ಒಂದು ಒಕ್ಕೂಟ, ಶರಣರ ಸೂಫಿ ಸಂತರ ದಾಸರ ವಚನಕಾರರ ಆಶಯಗಳನ್ನು ಬಿಂಬಿಸುವ ಶಾಂತಿಯುತ ಸಮಾಜ ನಿರ್ಮಿಸಲು ಮತ್ತು ಸಮಕಾಲೀನ ಜಗತ್ತಿಗೆ ಇವುಗಳನ್ನು ಪರಿಚಯಿಸುವ ಭಾಗವಾಗಿ ಈ ಜಾಥಾ ನಡೆಯುತ್ತಿದೆ.
ರಾಜ್ಯದಲ್ಲಿ ಸಂಚಾರ ಮಾಡುತ್ತಿರುವ ಮೂರು ರಥಗಳು ಮಾ.15ರಂದು ಬೆಂಗಳೂರನ್ನು ತಲುಪಲಿದೆ. ಅಂದು ಅಲ್ಲಿ ಗಾಂಧಿಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಎಐಟಿಯುಸಿಯ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಸುರೇಶ್ ಬಾಬು, ಜನಶಕ್ತಿಯ ಷಫೀವುಲ್ಲಾ, ಆರ್.ಕೆ.ಎಸ್‍ನ ರವಿಕುಮಾರ್, ಮೇಘನಾ, ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು, ತಿಪ್ಪೇಸ್ವಾಮಿ ಮಲ್ಲಾಪುರ, ದಾಸೇಗೌಡ, ಸಾಧಿಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

