in ,

ಜ.ರಾ. ರಾಮಮೂರ್ತಿ ನಿಧನ

ಚಿತ್ರದುರ್ಗ, (ಫೆ.20) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡ ಜ.ರಾ. ರಾಮಮೂರ್ತಿ (84) ಅವರು ಅನಾರೋಗ್ಯದಿಂದ ಬೆಂಗಳೂರಿನ ನಿವಾಸದಲ್ಲಿ ಇಂದು (ಸೋಮವಾರ) ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ನಿಧನರಾದರು.

ಪತ್ನಿ, ಓರ್ವ ಪುತ್ರಿ, ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಇಂದು ಬೆಳಿಗ್ಗೆ 10 : 30 ರ ವೇಳೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಗಾಗಿ : 9900552528 ಸಂಪರ್ಕಿಸಲು ಕೋರಿದೆ.

ಜ.ರಾ.ರಾಮಮೂರ್ತಿಯವರು ವಿಶ್ವ ಹಿಂದೂ ಪರಿಷತ್ ನ ಕರ್ಣಾಟಕ ಪ್ರಾಂತ ಸಮಿತಿ ಸದಸ್ಯರು ಹಾಗೂ ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಮಾರ್ಗದರ್ಶಕರು, ಗೌರವ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ವೀರ ಮದಕರಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಆಗಿ ಕಾರ್ಯನಿರ್ವಹಿಸಿದ್ದರು.

ಜ.ರಾ.ರಾಮಮೂರ್ತಿಯವರ ನಿಧನಕ್ಕೆ ಹಿಂದೂ ಮುಖಂಡರು, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಮಹಾಗಣಪತಿ ಸಮಿತಿ ಸದಸ್ಯರು, ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಈ ರಾಶಿಗಳಿಗೆ ಧನ ಲಾಭ, ಮದುವೆ ಯೋಗ

ಎಂ. ಟಿ. ತಿಪ್ಪೇಸ್ವಾಮಿ ನಿಧನ